Viral News: ಸತ್ತ ಕೀಟಗಳಿಗೂ ಶ್ರದ್ಧಾಂಜಲಿ ಸಲ್ಲಿಸುವ ಕೀಟನಾಶಕ ಕಂಪನಿ

ಸತ್ತ ಕೀಟಗಳಿಗೂ ಶ್ರದ್ಧಾಂಜಲಿ ಸಲ್ಲಿಸುವ ಕಂಪನಿ. ಕಳೆದ 40 ವರ್ಷಗಳಲ್ಲಿ ತಾವು ಕೊಂದಿರುವ ಕೀಟಗಳಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಅರ್ಥ್ ಕಾರ್ಪೊರೇಷನ್ ಜಪಾನ್‌ನಲ್ಲಿ ಅತ್ಯುತ್ತಮ ಗೃಹ ಕೀಟನಾಶಕ ಕಂಪನಿಯಾಗಿದೆ. ಇದು ದಶಕಗಳ ಸಂಶೋಧನೆಯ ಮೂಲಕ ಈ ಖ್ಯಾತಿಯನ್ನು ಗಳಿಸಿದೆ. ತನ್ನ ಉತ್ಪನ್ನಗಳ ಪರಿಣಾಮಕಾರಿತ್ವವನ್ನು ಪರೀಕ್ಷಿಸಲು, ಕಂಪನಿಯು ಅಕೋ ನಗರದ ಸಂಶೋಧನಾ ಸೌಲಭ್ಯದಲ್ಲಿ ವಿವಿಧ ಕೀಟ ಪ್ರಭೇದಗಳನ್ನು ಬಳಸುತ್ತದೆ.

Viral News: ಸತ್ತ ಕೀಟಗಳಿಗೂ ಶ್ರದ್ಧಾಂಜಲಿ ಸಲ್ಲಿಸುವ ಕೀಟನಾಶಕ ಕಂಪನಿ
ಹುಳು

Updated on: Jan 07, 2026 | 11:50 AM

ಸಾಮಾನ್ಯವಾಗಿ ಯಾರಾದರೂ ಮೃತಪಟ್ಟರೆ ಶ್ರದ್ಧಾಂಜಲಿ ಸಲ್ಲಿಸುವುದನ್ನು ನೋಡಿದ್ದೇವೆ, ಕೆಲವೊಮ್ಮೆ ತಾವು ಇಷ್ಟ ಪಟ್ಟು ಸಾಕಿರುವ ಪ್ರಾಣಿಗಳಿಗೂ ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಆದರೆ ಕೀಟಗಳು ಸತ್ತರೆ ಅದಕ್ಯಾರಾದರೂ ಮೌನಾಚರಣೆ, ಶ್ರದ್ಧಾಂಜಲಿ ಸಲ್ಲಿಸುವುದನ್ನು ಕಂಡಿದ್ದೀರಾ. ಆದರೆ ಜಪಾನಿನಲ್ಲಿರುವ ಕೀಟನಶ ಕಂಪನಿಯೊಂದು ಪ್ರತಿ ವರ್ಷವೂ ಹೀಗೊಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ.

ಕಳೆದ 40 ವರ್ಷಗಳಲ್ಲಿ ತಾವು ಕೊಂದಿರುವ ಕೀಟಗಳಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಅರ್ಥ್ ಕಾರ್ಪೊರೇಷನ್ ಜಪಾನ್‌ನಲ್ಲಿ ಅತ್ಯುತ್ತಮ ಗೃಹ ಕೀಟನಾಶಕ ಕಂಪನಿಯಾಗಿದೆ. ಇದು ದಶಕಗಳ ಸಂಶೋಧನೆಯ ಮೂಲಕ ಈ ಖ್ಯಾತಿಯನ್ನು ಗಳಿಸಿದೆ. ತನ್ನ ಉತ್ಪನ್ನಗಳ ಪರಿಣಾಮಕಾರಿತ್ವವನ್ನು ಪರೀಕ್ಷಿಸಲು, ಕಂಪನಿಯು ಅಕೋ ನಗರದ ಸಂಶೋಧನಾ ಸೌಲಭ್ಯದಲ್ಲಿ ವಿವಿಧ ಕೀಟ ಪ್ರಭೇದಗಳನ್ನು ಬಳಸುತ್ತದೆ.

ಮತ್ತು ಕೆಲವು ಕೀಟಗಳು ಸಂಶೋಧನಾ ಪ್ರಕ್ರಿಯೆಯಲ್ಲಿ ಸಾಯುತ್ತವೆ. ಅರ್ಥ್ ಕಾರ್ಪೊರೇಷನ್ ಕೀಟಗಳ ಸಾವುಗಳನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಅಕೋ ನಗರದ ಮೈಯೋಡೋಜಿಯಲ್ಲಿ ಈ ಕೀಟಗಳಿಗಾಗಿ ಸ್ಮರಣಾರ್ಥ ಸಮಾರಂಭವನ್ನು ಆಯೋಜಿಸುತ್ತದೆ. ಕಳೆದ ತಿಂಗಳು, 60 ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದ ಸಮಾರಂಭದಲ್ಲಿ  ಸತ್ತ ಕೀಟಗಳ ಚಿತ್ರಗಳ ಮುಂದೆ ಪ್ರಾರ್ಥನೆಗಳನ್ನು ಸಲ್ಲಿಸಿರುವುದನ್ನು ಕಾಣಬಹುದು.

ಮತ್ತಷ್ಟು ಓದಿ: Video: ಹಸಿದ ಶ್ವಾನಕ್ಕೆ ಆಹಾರ ನೀಡಿ ಹಸಿವು ನೀಗಿಸಿದ ಪುಣ್ಯಾತ್ಮ

ಸೊಳ್ಳೆಗಳು, ನೊಣಗಳು, ಜಿರಳೆಗಳು ಮತ್ತು ಇತರ ಕೀಟಗಳ ಚಿತ್ರಗಳನ್ನು ಅಲ್ಲಿ ಇರಿಸಲಾಗುತ್ತದೆ ಮತ್ತು ಜನರು ಅವುಗಳಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅರ್ಥ್ ಕಾರ್ಪೊರೇಷನ್‌ನ ಸಂಶೋಧನಾ ತಂಡ 1 ಮಿಲಿಯನ್ ಜಿರಳೆಗಳ್ನು ಮತ್ತು 100 ಮಿಲಿಯನ್​ಗಿಂತಲೂ ಹೆಚ್ಚು ಕೀಟಗಳನ್ನು ಸಂಶೋಧನೆಗಾಗಿ ಬಳಕೆ ಮಾಡಲಾಗುತ್ತದೆ. ಈ ಕಟಗಳು ಮನುಷ್ಯನಿಗಾಗಿ ತಮ್ಮ ಪ್ರಾಣವ್ನೇ ಬಲಿಕೊಡುತ್ತವೆ.

ಹೀಗಾಗಿ ಪ್ರತಿ ವರ್ಷವೂ ಇಂಥಾ ಕಾರ್ಯಕ್ರಮಗಳನ್ನು ಆಯೋಜಿಸಿ ಸತ್ತ ಕೀಟಗಳಿಗೆ ಗೌರವ ಸೂಚಿಸಲಾಗುತ್ತದೆ.ಅರ್ಥ್ ಕಾರ್ಪೊರೇಷನ್ ಕಳೆದ ನಾಲ್ಕು ದಶಕಗಳಿಂದ ಪ್ರತಿ ವರ್ಷ ಈ ವಿಶಿಷ್ಟ ಸಮಾರಂಭವನ್ನು ನಡೆಸುತ್ತಿದೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ