ಪ್ರಪಂಚದಲ್ಲಿ ಹಲವಾರು ರೀತಿಯ ವಿಸ್ಮಯಗಳು ನಡೆಯುತ್ತಿರುತ್ತವೆ. ಕೆಲವನ್ನು ನಂಬಲು ಅಸಾಧ್ಯವಾದರೂ ನಂಬಲೇಬೇಕಾದ ಅನಿವಾರ್ಯ ಸೃಷ್ಟಿಯಾಗಿಬಿಡುತ್ತದೆ. ಇಲ್ಲೊಬ್ಬಳು ಮಹಿಳೆ ತನ್ನ ಗಂಡ ಸಾವನ್ನಪ್ಪಿ ಸುಮಾರು 2 ವರ್ಷಗಳ ನಂತರ ಆತನ ಮಗುವಿಗೆ ಜನ್ಮ ನೀಡಿದ್ದಾಳೆ! ಇದು ಹೇಗೆ ಸಾಧ್ಯ? ಎಂದು ನಿಮಗೆ ಆಶ್ಚರ್ಯವಾಗುತ್ತಿರಬಹುದು. ಏನಿದು ಹೊಸ ವಿಚಾರ? ಆಕೆ ಸಾವನ್ನಪ್ಪಿದ ವ್ಯಕ್ತಿಯಿಂದ ಮಗು ಪಡೆದಿದ್ದು ಹೇಗೆ? ಎಂಬ ಕುರಿತು ಇಲ್ಲಿದೆ ಪೂರ್ತಿ ಮಾಹಿತಿ.
ಲಾರೆನ್ ಮೆಕ್ಗ್ರೆಗರ್ ಎಂಬ ಮಹಿಳೆಯ ಪತಿ ಕ್ರಿಸ್ 2020ರ ಜುಲೈ ತಿಂಗಳಲ್ಲಿ ಟರ್ಮಿನಲ್ ಬ್ರೈನ್ ಟ್ಯೂಮರ್ನಿಂದ ಸಾವನ್ನಪ್ಪಿದ್ದರು. ಅವರಿಬ್ಬರೂ ತಮಗೊಂದು ಮಗು ಬೇಕೆಂದು ಮದುವೆಯಾದಾಗಿನಿಂದಲೂ ಕನಸು ಕಂಡಿದ್ದರು. ಆದರೆ, ಕ್ರಿಸ್ಗೆ ಬ್ರೈನ್ ಟ್ಯೂಮರ್ ಇರುವುದು ಗೊತ್ತಾದ ನಂತರ ಆತನ ಚಿಕಿತ್ಸೆಯ ಬಗ್ಗೆ ಹೆಚ್ಚು ಗಮನಹರಿಸಬೇಕಾಯಿತು. ಆತ ಗುಣವಾದ ನಂತರ ಮಗುವಿನ ಬಗ್ಗೆ ಯೋಚನೆ ಮಾಡಿದರಾಯಿತು ಎಂದುಕೊಂಡಿದ್ದ ಲಾರೆನ್ಗೆ ಕ್ರಿಸ್ನ ಸಾವು ಭಾರೀ ದೊಡ್ಡ ಆಘಾತ ನೀಡಿತ್ತು.
ಇದೀಗ ಕ್ರಿಸ್ ಸಾವನ್ನಪ್ಪಿ ಸುಮಾರು ಎರಡು ವರ್ಷಗಳ ನಂತರ ಲಾರೆನ್ ಆತನ ಮಗುವಿಗೆ ಜನ್ಮ ನೀಡಿದ್ದಾಳೆ! 2020ರ ಜುಲೈ ತಿಂಗಳಲ್ಲಿ ಸಾವನ್ನಪ್ಪಿದ್ದ ಕ್ರಿಸ್ನ ವೀರ್ಯವನ್ನು ಹೆಪ್ಪುಗಟ್ಟಿಸಿ, ಶೇಖರಿಸಿಟ್ಟಿದ್ದ ಲಾರೆನ್ ಆ ವೀರ್ಯವನ್ನು ಬಳಸಿಕೊಂಡು ಗರ್ಭಿಣಿಯಾಗಿದ್ದರು. ಇದೀಗ ಮುದ್ದಾದ ಮಗುವನ್ನು ಹೆರುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಈ ಮೂಲಕ ತನ್ನ ಮತ್ತು ಕ್ರಿಸ್ನ ಪ್ರೀತಿಯ ಸಂಕೇತವಾದ ಮಗುವನ್ನು ಪಡೆಯುವ ಆಕೆಯ ಕನಸು ನನಸಾಗಿದೆ.
ಇದನ್ನೂ ಓದಿ: Viral Video: ಮಗುವನ್ನು ಬುಟ್ಟಿಯಲ್ಲಿಟ್ಟುಕೊಂಡು ಪ್ರವಾಹ ದಾಟಿದ ತಂದೆ; ವಿಡಿಯೋ ನೋಡಿ ಕಣ್ತುಂಬಿಕೊಂಡ ನೆಟ್ಟಿಗರು
33 ವರ್ಷದ ಲಾರೆನ್ ಹೊಸ ತಂತ್ರಜ್ಞಾನದ ಸಹಾಯದಿಂದ ತನ್ನ ಮೃತಪಟ್ಟ ಗಂಡನ ಮಗುವಿಗೆ ಜನ್ಮ ನೀಡಿದ್ದಾಳೆ. ವರದಿಗಳ ಪ್ರಕಾರ, ಅವರು ಐವಿಎಫ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಆಕೆ ತನ್ನ ಗಂಡ ಸಾವನ್ನಪ್ಪಿ 9 ತಿಂಗಳಾಗುವವರೆಗೂ ಕಾದಿದ್ದರು. ಗಂಡನ ಸಾವಿನ 9 ತಿಂಗಳ ನಂತರ ಐವಿಎಫ್ ಮೂಲಕ ತನ್ನ ಗಂಡನ ವೀರ್ಯವನ್ನು ಬಳಸಿಕೊಂಡು ಲಾರೆನ್ ಗರ್ಭ ಧರಿಸಲು ನಿರ್ಧರಿಸಿದರು.
ಇದೀಗ ಮೇ 17ರಂದು ಲಾರೆನ್ ತನ್ನ ಮಗ ಸೆಬ್‌ಗೆ ಜನ್ಮ ನೀಡಿದ್ದಾಳೆ. ಸೆಬ್ ಪ್ರತಿದಿನ ಅವನ ತಂದೆಯಂತೆಯೇ ಕಾಣುತ್ತಾನೆ. ಅವನು ಜನಿಸಿದಾಗ ಅವನಿಗೆ ದಪ್ಪವಾದ ಕೂದಲಿತ್ತು. ಆತ ಆಗಲೇ ನೋಡಲು ಕ್ರಿಸ್ನಂತೆಯೇ ಕಾಣುತ್ತಿದ್ದ. ಕ್ರಿಸ್ ಮತ್ತೆ ನಮ್ಮ ಗನ ರೂಪದಲ್ಲಿ ಹುಟ್ಟಿ ಬಂದಿದ್ದಾನೆ ಎಂಬುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ ಎಂದು ಲಾರೆನ್ ಹೇಳಿದ್ದಾಳೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:42 pm, Wed, 22 June 22