Optical Illusion: ಸೋಮವಾರ ಶುರುವಾಗಿದೆ! ಯಾಕಾದರೂ ವಾರಾಂತ್ಯ ಮುಗಿಯಿತೋ ಎಂದು ಗೊಣಗಿಕೊಳ್ಳುತ್ತಲೇ ನಿಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದೀರಿ. ಬಿಸಿಲು ನೆತ್ತಿಗೇರುತ್ತಿದ್ದಂತೆ ಮತ್ತಷ್ಟು ಆಯಾಸ ನಿಮ್ಮಲ್ಲಿ ಉಂಟಾಗುತ್ತಿದೆ. ಸಣ್ಣದೊಂದು ನಿದ್ದೆ ಮಾಡಿ ಎದ್ದರೆ ಹೇಗೆ ಎಂದು ಮನಸ್ಸು ಲೆಕ್ಕಾಚಾರ ಹಾಕುತ್ತಿದೆ. ಆದರೆ ಕೆಲಸ ಕೈಬಿಡುತ್ತಿಲ್ಲ. ಹಾಗಿದ್ದರೆ ಏನು ಮಾಡುತ್ತೀರಿ? ನೋಡಿ ಇಲ್ಲೊಂದು ಆಪ್ಟಿಕಲ್ ಇಲ್ಲ್ಯೂಷನ್ ಚಿತ್ರ ಇದೆ. ಬಹುಶಃ ಇದು ನಿಮ್ಮ ಆಲಸ್ಯವನ್ನು ಹೊಡೆದೋಡಿಸಬಹುದು.
ಹರಡಿರುವ ಈ ಕೋಣೆಯಲ್ಲಿ ಏನಿದೆ ಏನಿಲ್ಲ ನೋಡಿ. ಮಕ್ಕಳು ಇಡೀ ಕೋಣೆತುಂಬಾ ಆಟಿಕೆ ಸಾಮಾನುಗಳನ್ನು ಚೆಲ್ಲಾಪಿಲ್ಲಿಯಾಗಿಸಿ ಹೋಗಿದ್ದಾರೆ. ಜಿರಾಫೆ, ಟ್ರಕ್, ಮೊಲ, ಬೋಟು, ಜೀಪು, ಕ್ಷಿಪಣಿ, ಚೆಂಡು, ಬೊಂಬೆ, ಡೋನಟ್, ಟೆಡ್ಡಿ ಹೀಗೆ ಇನ್ನೂ ಏನೇನೋ. ಈ ಎಲ್ಲದರ ಮಧ್ಯೆಯೇ ಒಂದು ಪುಟ್ಟ ಪೆಂಘ್ವಿನ್ ಅಡಗಿ ಕುಳಿತಿದೆ. ಅದನ್ನು ಹುಡುಕುವುದೇ ನಿಮಗಿರುವ ಸವಾಲು.
ಇದನ್ನೂ ಓದಿ : Optical Illusion : 11 ಸೆಕೆಂಡುಗಳಲ್ಲಿ ಮೇಷ್ಟ್ರ ಕನ್ನಡಕ ಹುಡುಕಿ ಕೊಡಿ
ಮತ್ತೆ ಮತ್ತೆ ನೋಡಿ. ಮೊದಲಿಗೆ ನಿಮಗೆ ಖಂಡಿತ ಕಾಣುವುದಿಲ್ಲ. ಆದರೆ ಪೆಂಗ್ವಿನ್ನ ಚಿತ್ರವನ್ನು ಮನಸ್ಸಲಿನಲ್ಲಿಟ್ಟುಕೊಂಡು ಮೆಲ್ಲ ಹುಡುಕಿ. ಖಂಡಿತ ಸಮಯದ ಮಿತಿ ಇಲ್ಲ. ಇನ್ನೂ ಸಿಗಲಿಲ್ವಾ ಸರಿ ಹಾಗಿದ್ದರೆ ಒಂದು ಸುಳಿವು ಬೇಕಾ? ಎಡಬದಿಗೆ ಗಮನಿಸಿ. ಕುರ್ಚಿಯ ಹಿಂದೆ ಚೆಂಡು, ಅದರ ಹಿಂದೆ ಕ್ಷಿಪಣಿ, ಅದರ ಹಿಂದೆ ಬೂಟು, ಮತ್ತದರ ಹಿಂದೆ ಪೆಂಗ್ವಿನ್! ಈಗಲೂ ಕಾಣದಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿ.
ಅಂತೂ ಪೆಂಗ್ವಿನ್ ಸಿಕ್ಕಿತಲ್ಲವೆ? ಈಗಿದನ್ನು ಹಿಮಪ್ರದೇಶದಲ್ಲಿ ಬಿಟ್ಟುಬರೋಣವೆ? ಮೊದಲೇ ಸಿಕ್ಕಾಪಟ್ಟೆ ಬಿಸಿಲು ಬೇರೆ. ಆಗಾಗ ಇಂಥ ಆಪ್ಟಿಕಲ್ ಇಲ್ಲ್ಯೂಷನ್ ಗಮನಿಸುವುದರಿಂದ ನಿಮ್ಮ ಮೆದುಳಿಗೆ ಕೆಲಸದ ಮಧ್ಯೆ ವಿಶ್ರಾಂತಿ ಸಿಗುತ್ತದೆ. ಉತ್ತರ ಸಿಗುತ್ತದೋ ಬಿಡುತ್ತದೋ ಆದರೆ ದಿನಕ್ಕೆ ಒಂದೆರಡು ಬಾರಿಯಾದರೂ ಇಂಥ ಚಿತ್ರಗಳನ್ನು ಹುಡುಕಿಕೊಂಡು ಕಣ್ಣಿಗೂ, ಮೆದುಳಿಗೂ, ಬುದ್ಧಿಗೂ ಕೆಲಸ ಕೊಡಿ. ಏನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ