ಈ ಬಾತ್ರೂಮಿನಲ್ಲಿ ಹೆಡ್​ಫೋನ್ ಅಡಗಿದೆ, ಹುಡುಕಬಲ್ಲಿರಾ?

Optical Illusion : ಈ ಬಾತ್ರೂಮಿನಲ್ಲಿ ಇಷ್ಟೊಂದು ಸಾಮಾನುಗಳಿವೆ. ಅಡಗಿರುವ ಹೆಡ್​​ಫೋನ್ ಖಂಡಿತ ಹುಡುಕಬಹುದು ಎಂದು ನಿಮಗೆ ಅನ್ನಿಸಬಹುದು. ಒಮ್ಮೆ ಪ್ರಯತ್ನಿಸಿ ನೋಡಿ.

ಈ ಬಾತ್ರೂಮಿನಲ್ಲಿ ಹೆಡ್​ಫೋನ್ ಅಡಗಿದೆ, ಹುಡುಕಬಲ್ಲಿರಾ?
ಬಾತ್ರೂಮಿನಲ್ಲಿ ಅಡಗಿರುವ ಹೆಡ್​ಫೋನ್ ಹುಡುಕಿ
Edited By: ಶ್ರೀದೇವಿ ಕಳಸದ

Updated on: Jan 12, 2023 | 3:19 PM

Viral Optical Illusion : ಈಗಾಗಲೇ ಇದೇ ತಾಣದಲ್ಲಿ ಸಾಕಷ್ಟು ಸಲ ಕೊಟ್ಟ ಸಮಯದೊಳಗೆ ಸವಾಲನ್ನು ಪರಿಹರಿಸಿದ್ದೀರಿ. ಇದೀಗ ಮತ್ತೊಂದು ಸವಾಲಿನ ಭ್ರಮಾತ್ಮಕ ಚಿತ್ರ ನಿಮ್ಮದುರಿಗಿದೆ. ನಿಮ್ಮ ದೃಷ್ಟಿ ಮತ್ತು ಬುದ್ಧಿಯ ಮಧ್ಯೆ ಸವಾಲನ್ನು ಒಡ್ಡುವ ಈ ಚಿತ್ರಕ್ಕೆ ಇಷ್ಟೇ ಸಮಯದಲ್ಲಿ ಉತ್ತರ ಹುಡುಕಬೇಕೆಂದು ನಿಯಮವೇನೂ ಇಲ್ಲ. ಆದರೆ ಸೂಕ್ಷ್ಮವಾಗಿ ಈ ಚಿತ್ರವನ್ನು ಗಮನಿಸಿ ಆದಷ್ಟು ಬೇಗ ಉತ್ತರವನ್ನು ಕಂಡುಕೊಳ್ಳಿ.

ಇದನ್ನೂ ಓದಿ : 831224 ಹೀಗೆಂದರೆ ಏನು? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಈ ಸೈಬರ್ ಟರ್ಮ್​

Loading...

ಅಂತರ್ಜಾಲದಲ್ಲಿ ಇಂಥ ಸಾಕಷ್ಟು ಆಪ್ಟಿಕಲ್​ ಇಲ್ಯೂಷನ್​ ಚಿತ್ರಗಳು ನೋಡಸಿಗುತ್ತವೆ. ಕೆಲಸದ ಒತ್ತಡದಿಂದ ಸರಿಯಾಗಿ ಕೆಲಸದಲ್ಲಿ ಏಕಾಗ್ರತೆ ತಂದುಕೊಳ್ಳಲು ಸಾಧ್ಯವಿಲ್ಲ ಎಂದೆನ್ನಿಸಿದಾಗ ಐದು ನಿಮಿಷ ಇಂಥ ಚಿತ್ರಗಳೆಡೆ ಗಮನ ಹರಿಸಬಹುದು. ಆಗ ನಿಮ್ಮ ದೃಷ್ಟಿ ಮತ್ತು ಮೆದುಳು ಚುರುಕುಗೊಳ್ಳುತ್ತದೆ. ನಂತರ ಸರಾಗವಾಗಿ ಕೆಲಸದಲ್ಲಿ ಏಕಾಗ್ರತೆ ತಂದುಕೊಳ್ಳಲು ಸಾಧ್ಯವಾಗುತ್ತದೆ.

ಇದನ್ನೂ ಓದಿ : ಸೈಕಲ್​ ಸವಾರಿಯೊಂದಿಗೆ ಅಲ್ಕಾ ಯಾಜ್ಞಿಕ್, ಕುಮಾರ ಸಾನು ಹಾಡಿಗೆ ಅಭಿನಯಿಸಿದ ಯುವತಿಯ ವಿಡಿಯೋ ವೈರಲ್

ಇಲ್ಲಿರುವ ಈ ಬಾತ್ರೂಮಿನಲ್ಲಿ ಕಮೋಡ್​, ಬ್ರಷ್, ಟಿಷ್ಯೂ ರೋಲ್​, ಬ್ರಷ್, ಬಾತ್ರೂಮ್ ಗೌನ್​, ಶಾಂಪೂ, ಲೋಷನ್​, ವಾಷಿಂಗ್ ಮಶೀನ್​, ಬಾತ್​ಟಬ್​, ಸಿಂಕ್​, ಟವೆಲ್ ಹೀಗೆ ಸಾಕಷ್ಟು ಸಾಮಾನುಗಳಿವೆ. ಈ ಎಲ್ಲದರ ಮಧ್ಯೆ ಹೆಡ್​ಫೋನ್​ ಎಲ್ಲಿ ಅಡಗಿದೆ ಹಾಗಿದ್ದರೆ? ಈಗಾಗಲೇ ಕೇವಲ ಶೇ 2 ರಷ್ಟು ಜನ ಮಾತ್ರ ಇದಕ್ಕೆ ಉತ್ತರ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ಧಾರೆ.

ಇದನ್ನೂ ಓದಿ : ಏರ್ ಇಂಡಿಯಾ ವಿಮಾನದಲ್ಲಿ ಮದುವೆ ನಿವೇದನೆ ಮಾಡಿಕೊಂಡ ವ್ಯಕ್ತಿಯ ವಿಡಿಯೋ ವೈರಲ್

ಸುಳಿವು ಬೇಕಾ? ಬಾತ್​ ಗೌನ್​ನ ಪಕ್ಕದಲ್ಲಿ ಒಂದು ಶೆಲ್ಫ್ ಇದೆ. ಅದರಲ್ಲಿ ಕೆಳಗಿನ ಭಾಗವನ್ನು ಗಮನಿಸಿ. ಡಿಟರ್ಜೆಂಟ್​ ಇಡಲಾಗಿದೆ. ಅದರ ಪಕ್ಕದಲ್ಲಿ ಹೆಡ್​ಫೋನ್ ಇದೆ. ಡಿಟರ್ಜೆಂಟ್​ನ ಬಾಟಲಿಯೂ ನೀಲಿ ಬಣ್ಣದ್ದಾಗಿದೆ. ಹೆಡ್​ಫೋನ್ ಕೂಡ ನೀಲಿಯ ಆಸುಪಾಸಿನ ಬಣ್ಣದಲ್ಲಿದೆ.

ಹೆಡ್​ಫೋನ್​ ಸಿಕ್ಕಿತಲ್ಲವಾ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us