Brain Teaser: ಸಾಮಾಜಿಕ ಜಾಲತಾಣದಲ್ಲಿ ಈ ಬ್ರೇನ್ ಟೀಸರ್ ಭಾರೀ ವೈರಲ್ ಆಗುತ್ತಿದೆ. ಹೆಚ್ಚಿನ ಬೌದ್ಧಿಕ ಮಟ್ಟ ಉಳ್ಳವರು ಮಾತ್ರ ಇಂಥ ಆಪ್ಟಿಕಲ್ ಇಲ್ಲ್ಯೂಷನ್ (Optical Illusion), ಬ್ರೇನ್ ಟೀಸರ್ಗಳಲ್ಲಿರುವ ಸವಾಲುಗಳನ್ನು ಸುಲಭವಾಗಿ ಬಿಡಿಸಬಹುದು ಎನ್ನುತ್ತಾರೆ. ಹಾಗಿದ್ದರೆ ನಿಮ್ಮ ಬೌದ್ಧಿಕ ಮಟ್ಟವನ್ನು ಸ್ವತಃ ಪರೀಕ್ಷಿಸಿಕೊಳ್ಳಲು ಈ ಚಟುವಟಿಕೆ ಸಹಾಯವಾಗಬಹುದು. ಆ. 26ರಂದು X ನಲ್ಲಿ ಇದನ್ನು ಪೋಸ್ಟ್ ಮಾಡಲಾಗಿದೆ. ಹಲವಾರು ಜನರು ಉತ್ತರಿಸಲು ಪ್ರಯತ್ನಿಸಿದ್ದಾರೆ. ಇನ್ನೂ ಕೆಲವರಿಗೆ ಸಾಧ್ಯವಾಗಿಲ್ಲ. ಇದು ನೋಡಲು ಅತ್ಯಂತ ಸರಳವೂ ಆಗಿದೆ ಹಾಗೆಯೇ ಕ್ಲಿಷ್ಟವೂ ಆಗಿದೆ. ನೀವು ಪ್ರಯತ್ನಿಸುವಿರಾ?
ಇದನ್ನೂ ಓದಿ : Viral Video: ಹಳೆಯ ಸಿಡಿಗಳನ್ನು ಬಾಣಲೆಗೆ ಹಾಕಿ ಕುದಿಸುತ್ತಿರುವ ಯುವತಿ, ಮುಂದೆ?
@thecryptosquire ಎನ್ನುವವರು ಇದನ್ನು ಪೋಸ್ಟ್ ಮಾಡಿದ್ದಾರೆ. ಇಡೀ ಚಿತ್ರವು “539” ಎಂಬ ಸಂಖ್ಯೆಗಳ ಸಾಲುಗಳಿಂದ ತುಂಬಿದೆ. ಇವುಗಳ ಮಧ್ಯೆ “589” ಅಡಗಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಮೊದಲ ನೋಟಕ್ಕೆ ಅದು ಅಷ್ಟು ಸುಲಭವಾಗಿ ಸಿಗಿಲಿಕ್ಕಿಲ್ಲ. ಮತ್ತೆ ಮತ್ತೆ ನೋಡಿ, ಆದರೆ ನಿಮಗಿರುವ ಸಮಯ 10 ಸೆಕೆಂಡುಗಳು ಮಾತ್ರ.
Only people with high IQ can quickly find the hidden number in this Optical Illusion.
Can you tell me in the comments which one is it? 🔥👇🏻 pic.twitter.com/Go8uZmTJa5
— John Squire 𝕏 (@TheCyptoSquire) August 26, 2023
ಅನೇಕರಿಗೆ 589 ಕಂಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ ನಿಮಗೆ? ವಾರಾಂತ್ಯದ ಮೂಡ್ನಲ್ಲಿರುವ ನಿಮಗೆ ಕೆಲಸ ಮಾಡಲು ಬೇಸರ ಉಂಟಾಗುತ್ತಿರಬಹುದು. ಮಧ್ಯೆ ಮಧ್ಯೆ ಮೆದುಳಿಗೆ ಗುದ್ದು ಕೊಡುವ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಮನಸ್ಸು ಉತ್ಸಾಹದಿಂದ ಕೂಡುತ್ತದೆ. ಉತ್ಸಾಹ ಚಿಮ್ಮುತ್ತಿದ್ದಂತೆ ಕೆಲಸದಲ್ಲಿ ವೇಗ ಹೆಚ್ಚುತ್ತದೆ.
ಇದನ್ನೂ ಓದಿ : Viral Video: ರಣವೀರ್ ಸಿಂಗ್, ಸೋನಾಕ್ಷಿ ಸಿನ್ಹಾ ಅಭಿನಯದ ಈ ಹಾಡಿಗೆ ಲಘುಶಾಸ್ತ್ರೀಯ ನೃತ್ಯ
ಯಾವ ಸಾಲಿನಲ್ಲಿ ಎಷ್ಟು ಸಮಯದ ಒಳಗೆ ನಿಮಗೆ 589 ಅಂಕಿ ಕಣ್ಣಿಗೆ ಬಿದ್ದಿದೆ? ಅಥವಾ ಈತನಕ ಈ ಅಂಕಿ ನಿಮಗೆ ಸಿಗಲೇ ಇಲ್ಲವೆ? ಇನ್ನೊಮ್ಮೆ ಪ್ರಯತ್ನಿಸಿ, ಒಂದೊಂದೇ ಸಾಲಿನಲ್ಲಿ ಹುಡುಕುತ್ತಾ ಹೋಗಿ. ಬೇಕಾದಷ್ಟು ಸಮಯವನ್ನು ತೆಗೆದುಕೊಳ್ಳಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ