ಐಪಿಎಸ್​ ಅಧಿಕಾರಿಗೆ ಬ್ಯಾಗ್ ಓಪನ್ ಮಾಡಿ ಎಂದ ಏರ್​ಪೋರ್ಟ್​ ಸಿಬ್ಬಂದಿ; ಅದರಲ್ಲೇನಿತ್ತು ಎಂದು ನೀವು ಊಹಿಸಲೂ ಅಸಾಧ್ಯ!

ಜೈಪುರ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ನನ್ನ ಹ್ಯಾಂಡ್ ಬ್ಯಾಗೇಜ್ ತೆರೆಯಲು ಹೇಳಿದರು. ಆಗ ಅದರಲ್ಲಿ ಇದ್ದುದು ಇದೇ ನೋಡಿ ಎಂದು ಐಪಿಎಸ್​ ಅಧಿಕಾರಿ ಅರುಣ್ ಬೋತ್ರಾ ಟ್ವೀಟ್ ಮಾಡಿದ್ದಾರೆ.

ಐಪಿಎಸ್​ ಅಧಿಕಾರಿಗೆ ಬ್ಯಾಗ್ ಓಪನ್ ಮಾಡಿ ಎಂದ ಏರ್​ಪೋರ್ಟ್​ ಸಿಬ್ಬಂದಿ; ಅದರಲ್ಲೇನಿತ್ತು ಎಂದು ನೀವು ಊಹಿಸಲೂ ಅಸಾಧ್ಯ!
ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ
Updated By: ಸುಷ್ಮಾ ಚಕ್ರೆ

Updated on: Mar 17, 2022 | 6:33 PM

ನವದೆಹಲಿ: ಭಾರತದ ಹಿರಿಯ ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ (IPS Officer Arun Bothra) ಒಡಿಶಾದ ಏರ್​ಪೋರ್ಟ್​ನಲ್ಲಿ ತಮಗಾದ ಅನುಭವದ ಬಗ್ಗೆ ಟ್ವೀಟ್​ ಮಾಡಿದ್ದಾರೆ. ಬುಧವಾರ ಒಡಿಶಾದ ಸಾರಿಗೆ ಆಯುಕ್ತರಾದ ಅರುಣ್ ಬೋತ್ರಾ ವಿಮಾನದಲ್ಲಿ ಪ್ರಯಾಣಿಸಲು ಚೆಕ್ ಇನ್ ಆಗುವಾಗ ಅಲ್ಲಿದ್ದ ಸೆಕ್ಯುರಿಟಿ ಸಿಬ್ಬಂದಿ ಅವರಿಗೆ ಸೂಟ್​ಕೇಸ್ ಓಪನ್ ಮಾಡಿ ತೋರಿಸಲು ಹೇಳಿದರು. ಆ ಅವರು ಸೂಟ್​ಕೇಸ್ ಓಪನ್ ಮಾಡಿದ್ದು, ಅದರೊಳಗೆ ಏನಿತ್ತು ಎಂಬುದನ್ನು ನೀವು ಊಹೆ ಕೂಡ ಮಾಡಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಆ ಸೂಟ್​ಕೇಸ್​ ತುಂಬ ಹಸಿರು ಬಟಾಣಿಗಳು ತುಂಬಿದ್ದವು!

ಜೈಪುರ ವಿಮಾನ ನಿಲ್ದಾಣದಲ್ಲಿ ಈ ಫೋಟೋವನ್ನು ತೆಗೆಯಲಾಗಿದೆ ಎಂದು ಅರುಣ್ ಬೋತ್ರಾ ಟ್ವೀಟ್ ಮಾಡಿದ್ದಾರೆ. ಸ್ಕ್ಯಾನರ್​​ನಲ್ಲಿ ಬ್ಯಾಗ್​ನೊಳಗೆ ಏನೋ ಬೇರೆ ವಸ್ತುಗಳು ಇರುವುದು ಕಂಡಿದ್ದರಿಂದಲೋ ಏನೋ ಅಲ್ಲಿದ್ದ ಭದ್ರತಾ ಅಧಿಕಾರಿಗಳು ಹೆಚ್ಚಿನ ತಪಾಸಣೆಗಾಗಿ ಅವರ ಹ್ಯಾಂಡ್ ಬ್ಯಾಗ್​ಗಳನ್ನು ಓಪನ್ ಮಾಡಲು ಹೇಳಿದ್ದಾರೆ. ಆಗ ಅರುಣ್ ಬೋತ್ರಾ ತಮ್ಮ ಕೈಲಿದ್ದ ಬ್ಯಾಗ್ ಮತ್ತು ಸೂಟ್​ಕೇಸ್ ಓಪನ್ ಮಾಡಿದಾಗ ಅದರೊಳಗೆ ಹಸಿ ಬಟಾಣಿಯ ಬೀನ್​ಗಳು ಇರುವುದು ಕಂಡು ಸೆಕ್ಯುರಿಟಿ ಸಿಬ್ಬಂದಿಯೇ ಚಕಿತರಾಗಿದ್ದಾರೆ.

ಸೂಟ್‌ಕೇಸ್ ಅನ್ನು ತೆರೆದಾಗ ಅದರಲ್ಲಿ ತಾಜಾ ಹಸರಿ ಬಟಾಣಿ ಕಾಯಿಗಳಿದ್ದವು. ನಾನು ಈ ಹಸಿರು ಬಟಾಣಿಗೆ 1 ಕೆಜಿಗೆ 40 ರೂ. ಕೊಟ್ಟು ಖರೀದಿಸಿದೆ. ತಾಜಾ ಇದ್ದುದರಿಂದ ತುಸು ಹೆಚ್ಚೇ ಖರೀದಿಸಿದೆ. ಅದೆಲ್ಲವನ್ನೂ ಸೂಟ್​ಕೇಸ್​ನಲ್ಲಿ ತುಂಬಿಕೊಂಡು ಬಂದೆ ಎಂದು ಐಪಿಎಸ್ ಅಧಿಕಾರಿ ಟ್ವೀಟ್ ಮಾಡಿದ್ದಾರೆ.

ಜೈಪುರ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ನನ್ನ ಹ್ಯಾಂಡ್ ಬ್ಯಾಗೇಜ್ ತೆರೆಯಲು ಹೇಳಿದರು. ಆಗ ಅದರಲ್ಲಿ ಇದ್ದುದು ಇದೇ ನೋಡಿ ಎಂದು ಬೋತ್ರಾ ಟ್ವೀಟ್ ಮಾಡಿದ್ದಾರೆ. ಆದರೆ, ಅವರು ತಮಾಷೆ ಮಾಡುತ್ತಿದ್ದಾರೋ ಅಥವಾ ಇದು ನಿಜವಾಗಿಯೂ ನಡೆದ ಘಟನೆಯೋ ಎಂಬ ಕುರಿತು ಚರ್ಚೆಯಾಗುತ್ತಿದೆ.

ಈ ಟ್ವೀಟ್​ಗೆ 60 ಸಾವಿರಕ್ಕೂ ಹೆಚ್ಚು ಲೈಕ್​ಗಳು ಸಿಕ್ಕಿವೆ. ಸಾಕಷ್ಟು ಜನರು ಹಾಸ್ಯಮಯವಾಗಿ ಕಮೆಂಟ್ ಕೂಡ ಮಾಡಿದ್ದಾರೆ.

ಒಡಿಶಾ ಕೇಡರ್‌ನ ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ ಟ್ವಿಟರ್‌ನಲ್ಲಿ ಸಕ್ರಿಯರಾಗಿದ್ದಾರೆ. ಅವರು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ 2.3 ಲಕ್ಷಕ್ಕೂ ಹೆಚ್ಚು ಫಾಲೋವರ್​ಗಳನ್ನು ಹೊಂದಿದ್ದಾರೆ. ಅಲ್ಲಿ ಆಗಾಗ ಅವರು ವಿನೋದದಿಂದ ಕೂಡಿದ ಪೋಸ್ಟ್​ಗಳನ್ನು ಹಾಕುತ್ತಿರುತ್ತಾರೆ.

ಇದನ್ನೂ ಓದಿ: Viral Photo: ಕುಕ್ಕರ್ ಜೊತೆ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್ ನೀಡಿದ ಯುವಕ; ಕಾರಣವೇನು ಗೊತ್ತಾ?

Viral Photo: ಡಿಐಜಿಯಾಗಿರುವ ಅಪ್ಪನಿಗೆ ಸಲ್ಯೂಟ್ ಮಾಡಿದ ಪೊಲೀಸ್ ಅಧಿಕಾರಿ ಮಗಳು; ಹೆಮ್ಮೆಯ ಕ್ಷಣದ ಫೋಟೋ ವೈರಲ್

Published On - 6:32 pm, Thu, 17 March 22