Trending: ಯಾವುದೇ ಒಂದು ಉದ್ಯೋಗವನ್ನು ಗಿಟ್ಟಿಸಿಕೊಳ್ಳಬೇಕಾದರೆ ಸಂಬಂಧಪಟ್ಟ ಕಂಪನಿಗಳಿಗೆ ರೆಸ್ಯೂಮ್(Resume) ಅನ್ನು ಕಳುಹಿಸಲೇಬೇಕು. ಈ ಪದ್ದತಿ ಹಿಂದೆಯೂ ಇತ್ತು. ಇದೀಗ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್ ಗೇಟ್ಸ್ (Bill Gates) ಅವರು ತಮ್ಮ ವೃತ್ತಿ ಜೀವನದ ಮೊದಲ ರೆಸ್ಯೂಮ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂwu ಯುವಜನರನ್ನು ಹುರಿದುಂಬಿಸುವಂತೆ ಮಾಡಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ 66 ವರ್ಷದ ಬಿಲ್ ಗೇಟ್ಸ್ ಅವರು 48 ವರ್ಷಗಳ ಹಿಂದಿನ ತಮ್ಮ ವೃತ್ತಿಜೀವನವನ್ನು ನೆನಪಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣವಾದ ಲಿಂಕ್ಡ್ಇನ್ ಮೂಲಕ ರೆಸ್ಯೂಮ್ ಅನ್ನು ಹಂಚಿಕೊಂಡಿದ್ದು, ಬಿಲ್ ಗೇಟ್ಸ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ವಿಲಿಯಂ ಹೆನ್ರಿ ಗೇಟ್ಸ್ III ಹಾರ್ವರ್ಡ್ ಕಾಲೇಜಿನಲ್ಲಿ ಮೊದಲ ವರ್ಷದಲ್ಲಿದ್ದಾಗ ಸಿದ್ಧಪಡಿಸಿದ ರೆಸ್ಯೂಮ್ ಇದಾಗಿದೆ.
ಇದನ್ನೂ ಓದಿ: Viral Video: ಅಪಘಾತ ತಪ್ಪಿಸಲು ಮುಂದಾದರೂ ನಡೆಯಿತು ಭೀಕರ ಅಪಘಾತ! ವಿಡಿಯೋ ಇಲ್ಲಿದೆ ನೋಡಿ
ರೆಸ್ಯೂಮ್ ಹಂಚಿಕೊಂಡ ನಂತರ ಅವರು ತನ್ನ ಅನುಯಾಯಿಗಳನ್ನು ಹುರಿದುಂಬಿಸುವ ಕೆಲಸ ಮಾಡಿದ್ದಾರೆ. ಅವರ ರೆಸ್ಯೂಮ್ ಅವರಿಗಿಂತ ಉತ್ತಮವಾಗಿ ಕಾಣುತ್ತದೆ ಎಂದು ಅವರೇ ಹೇಳಿದ್ದಾರೆ. “ನೀವು ಇತ್ತೀಚಿನ ಪದವೀದರರಾಗಿರಲಿ ಅಥವಾ ಕಾಲೇಜು ಡ್ರಾಪ್ಔಟ್ ಆಗಿರಲಿ, ನಿಮ್ಮ ರೆಸ್ಯೂಮ್ ನನ್ನ 48 ವರ್ಷಗಳ ಹಿಂದೆ ಮಾಡಿದ್ದಕ್ಕಿಂತ ಉತ್ತಮವಾಗಿ ಕಾಣುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ಶೀರ್ಷಿಕೆ ನೀಡಿದ್ದಾರೆ.
ಆಪರೇಟಿಂಗ್ ಸಿಸ್ಟಂ ರಚನೆ, ಡೇಟಾಬೇಸ್ ನಿರ್ವಹಣೆ, ಕಂಪ್ಯೂಟರ್ ಗ್ರಾಫಿಕ್ಸ್ ಮತ್ತು ಹೆಚ್ಚಿನವುಗಳಲ್ಲಿ ಅವರು ಕೋರ್ಸ್‌ಗಳನ್ನು ತೆಗೆದುಕೊಂಡಿದ್ದಾರೆ ಎಂದು ರೆಸ್ಯೂಮ್ನಲ್ಲಿ ಉಲ್ಲೇಖಿಸಲಾಗಿದೆ. ಹಲವಾರು ಸಾಮಾಜಿಕ ಜಾಲತಾಣದ ಬಳಕೆದಾರರು ಬಿಲ್ ಗೇಟ್ಸ್ ಅವರ ರೆಸ್ಯೂಮ್ ಪರಿಪೂರ್ಣವಾಗಿದೆ ಎಂದು ಹೇಳಿದ್ದಾರೆ ಮತ್ತು ರೆಸ್ಯೂಮ್ ಅನ್ನು ಹಂಚಿಕೊಂಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
“ಹಂಚಿಕೊಂಡಿದ್ದಕ್ಕಾಗಿ ಬಿಲ್ ಗೇಟ್ಸ್ ಅವರಿಗೆ ಧನ್ಯವಾದಗಳು. ಒಂದು ಪುಟದ ರೆಸ್ಯೂಮ್ ಅದ್ಭುತವಾಗಿದೆ. ನಾವೆಲ್ಲರೂ ಹಿಂತಿರುಗಿ ನೋಡಲು ನಮ್ಮ ಹಿಂದಿನ ರೆಸ್ಯೂಮ್‌ಗಳ ನಕಲುಗಳನ್ನು ಇಟ್ಟುಕೊಳ್ಳಬೇಕು. ಕೆಲವೊಮ್ಮೆ, ನಾವು ನಮ್ಮ ಜೀವನದಲ್ಲಿ ಎಷ್ಟು ಸಾಧನೆ ಮಾಡಿದ್ದೇವೆ ಎಂಬುದನ್ನು ನಾವು ಮರೆತುಬಿಡುತ್ತೇವೆ” ಎಂದು ಬಳಕೆದಾರರೊಬ್ಬರು ಹೇಳಿದರು.
ಇದನ್ನೂ ಓದಿ: Viral Photo: 20 ರೂಪಾಯಿ ಚಹಾಕ್ಕೆ 70 ರೂಪಾಯಿ ಬಿಲ್ ನೋಡಿ ಪ್ರಯಾಣಿಕ ಶಾಕ್! ರೈಲಿನಲ್ಲಿ ಈ ವ್ಯವಸ್ಥೆ ಇದೆ ಗೊತ್ತಾ?
Published On - 9:57 am, Sat, 2 July 22