Viral: ಸೆಂಟಿಮೀಟರ್ನಿಂದ ಮೀಟರ್ಗೆ ಪರಿವರ್ತಿಸುವುದು ಹೇಗೆ? ವಿದ್ಯಾರ್ಥಿಯ ಬೋಲ್ಡ್ ಉತ್ತರ ವೈರಲ್
ಸೆಂಟಿಮೀಟರ್‌ಗಳನ್ನ ಮೀಟರ್‌ಗಳಾಗಿ ಪರಿವರ್ತಿಸುವುದು ಹೇಗೆ? ಎಂಬ ಪ್ರಶ್ನೆಗೆ ಮೆರಿಟ್ ವಿದ್ಯಾರ್ತಿ ನೀಡಿದ ಬೋಲ್ಡ್ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿದ್ಯಾರ್ಥಿಗಳು ಕೆಲವೊಮ್ಮೆ ಶಿಕ್ಷಕರು ಕೇಳಿದ ಪ್ರಶ್ನೆಗಳಿಗೆ ತಪ್ಪು ಉತ್ತರದ ಜೊತೆಗೆ ಹಾಸ್ಯದ ಉತ್ತರಗಳನ್ನು ನೀಡುವುದು ಸಾಮಾನ್ಯ. ಇಂತಹ ಉತ್ತರಗಳು ಅಪರೂಪಕ್ಕೊಮ್ಮೆ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಕಾಣಸಿಗುತ್ತವೆ. ಇಂತಹ ಉತ್ತರ ಪತ್ರಿಕೆಗಳ ಫೋಟೋ ವೈರಲ್ ಆಗುತ್ತಿರುತ್ತವೆ. ಇದೀಗ ಪ್ರಶ್ನೆ ಪತ್ರಿಕೆಯೊಂದರಲ್ಲಿ ಅಳೆತೆಗೆ ಸಂಬಂಧಿಸಿದ ಪ್ರಶ್ನೆಯೊಂದನ್ನು ಕೇಳಲಾಗಿದೆ. ಇದಕ್ಕೆ ವಿದ್ಯಾರ್ಥಿಯೊಬ್ಬ ಹಾಸ್ಯದ ರೀತಿಯಲ್ಲಿ ಉತ್ತರ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ಫೋಟೋ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ಪ್ರಶ್ನೆ ಏನು? ಅದಕ್ಕೆ ವಿದ್ಯಾರ್ಥಿಯ ಉತ್ತರ ಏನಾಗಿತ್ತು? ಇಲ್ಲಿದೆ ನೋಡಿ…
ಸೆಂಟಿಮೀಟರ್‌ಗಳನ್ನ ಮೀಟರ್‌ಗಳಾಗಿ ಪರಿವರ್ತಿಸುವುದು ಹೇಗೆ? ಎಂದು ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಇದಕ್ಕೆ ಓರ್ವ ಮೆರಿಟ್ ವಿದ್ಯಾರ್ಥಿಯು, “ಸೆಂಟಿಮೀಟರ್ನಿಂದ ಸೆಂಟಿ ತೆಗೆರೆದರೆ ಮೀಟರ್ ಆಗುತ್ತದೆ ಎಂದು ಉತ್ತರ ಬರೆದಿದ್ದಾನೆ. ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ