Viral Video: ರಸ್ತೆಯಲ್ಲಿ ಸಂಚರಿಸುತ್ತಿದ್ದೇನೆ ಎಂದು ಬೀಗಬೇಡ, ಫುಟ್ಬ್ರಿಡ್ಜ್ನಲ್ಲಿ ಆಟೋ ಸಂಚರಿಸಿದ್ದನ್ನು ನೋಡಿದ್ದೇವೆ
ನೀವು ಯಾವತ್ತಾದರೂ ಪಾದಾಚಾರಿ ಸೇತುವೆ ಮೇಲೆ ಆಟೋ ಹತ್ತಿಸಿಕೊಂಡು ಹೆದ್ದಾರಿ ಕ್ರಾಸ್ ಮಾಡಿದ್ದನ್ನು ನೋಡಿದ್ದೀರಾ? ಇಲ್ಲವಾದರೆ ನಿಮಗಾಗಿ ಆ ವಿಡಿಯೋ ಕಾದಿದೆ.
ಕೆಲವು ವಾಹನ ಸವಾರರು ಅದರಲ್ಲೂ ಆಟೋ, ಬೈಕ್ ಚಲಾಯಿಸುವವರು ಬೇಗ ತಲುಪಬೇಕು ಎಂಬ ದಾವಂತದಲ್ಲಿ ಅಡ್ಡದಾರಿಯನ್ನು ಹಿಡಿಯುವುದುನ್ನು ನೀವು ನೋಡಿರುತ್ತೀರಿ. ಒಂದಷ್ಟು ದೂರದಲ್ಲಿ ಯೂ ಟರ್ನ್ ಪಡೆಯಲು ಇದ್ದರೆ ಕೆಲವೊಂದು ಬೈಕ್ಗಳು, ಆಟೋಗಳು ಹೆದ್ದಾರಿಯಲ್ಲಿ ಅದಕ್ಕೂ ಮುನ್ನ ಯಾವುದಾದರೊಂದು ಸಣ್ಣ ದಾರಿ ಇದ್ದರೆ ನುಗ್ಗಿಸಿ ಬಿಡುತ್ತಾರೆ. ಟ್ರಾಫಿಕ್ ಉಂಟಾದಾಗ ಕೆಲವು ಬೈಕ್ ಸವಾರರು ಫುಟ್ಬಾತ್ನಲ್ಲಿ ಸಂಚರಿವುದನ್ನು ಕೂಡ ನೋಡಿದ್ದೀರಿ. ಆದರೆ ನೀವು ಯಾವತ್ತಾದರೂ ಪಾದಾಚಾರಿ ಸೇತುವೆ ಮೇಲೆ ಆಟೋ ಹತ್ತಿಸಿಕೊಂಡು ಹೆದ್ದಾರಿ ಕ್ರಾಸ್ ಮಾಡಿದ್ದನ್ನು ನೋಡಿದ್ದೀರಾ? ಇಲ್ಲವಾದರೆ ನಿಮಗಾಗಿ ಆ ವಿಡಿಯೋ ಕಾದಿದೆ.
Bas yahi dekhna baaki tha! pic.twitter.com/wuAZvBy5fh
— Roads of Mumbai ?? (@RoadsOfMumbai) August 19, 2022
ಆಟೋ ಚಾಲಕನೊಬ್ಬ ವಿರಾರ್ ಬಳಿಯ NH48 ನಲ್ಲಿ ಹೆದ್ದಾರಿ ದಾಟಲು ಫುಟ್ಬ್ರಿಡ್ಜ್ ಆಯ್ಕೆ ಮಾಡಿಕೊಂಡಿದ್ದಾನೆ. ಹೆದ್ದಾರಿಯ ಒಂದು ಭಾಗದಿಂದ ಬ್ರಿಡ್ಜ್ ಮೇಲಕ್ಕೆ ಆಟೋವನ್ನು ಹತ್ತಿಸಿದ ಚಾಲಕ ಇನ್ನೊಂದು ಕಡೆಯಿಂದ ಇಳಿದಿದ್ದಾನೆ. ಈ ದೃಶ್ಯಾವಳಿಯನ್ನು ಮೊಬೈಲ್ ಕ್ಯಾಮರಾ ಮೂಲಕ ಸೆರೆಹಿಡಿಯಲಾಗಿದ್ದು, ‘ಇಟ್ಸ್ ಮೈ ಲೈಫ್’ ಎಂಬ ಬ್ಯಾಗ್ರೌಂಡ್ ಹಾಡಿನೊಂದಿಗೆ ವೈರಲ್ ಮಾಡಲಾಗಿದೆ.
ರೋಡ್ಸ್ ಆಫ್ ಮುಂಬೈ ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸದ್ಯ ವೈರಲ್ ಪಡೆದುಕೊಂಡಿದೆ. ವಿಡಿಯೋ ನೀಡಿದ ಮುಂಬೈ ಪೊಲೀಸರು, ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಸ್ಥಳದ ನಿಖರ ಮಾಹಿತಿ ನೀಡುವಂತೆ ಟ್ವೀಟ್ ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, “ಅದು NH48 ನಲ್ಲಿ 2 ಹಳ್ಳಿಗಳಿಗೆ ದಾಟುವ ಮಾರ್ಗವಾಗಿದೆ. ಇದು ವಿರಾರ್ ಬಳಿ ಎಲ್ಲೋ ಇದೆ. ನಾನು ಅಲ್ಲಿಗೆ ಹೋಗಿದ್ದೇನೆ” ಎಂದಿದ್ದಾರೆ.
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:57 pm, Sat, 20 August 22