Viral Photo: ಮೃಗಾಲಯದಲ್ಲಿದ್ದ ಬ್ಯಾಗ್ ನೋಡಿ ಬೆಚ್ಚಿಬಿದ್ದ ಪ್ರವಾಸಿಗರು; ಇದಕ್ಕೆ ಕಾರಣ ಏನು ಗೊತ್ತಾ?

| Updated By: Rakesh Nayak Manchi

Updated on: Aug 05, 2022 | 3:07 PM

ಲಂಡನ್​ನ ಮೃಗಾಯಲದಲ್ಲಿ ಪ್ರದರ್ಶನಕ್ಕೆ ಇರಿಸಲಾದ ಬ್ಯಾಗ್​ ನೋಡಿದ ಪ್ರವಾಸಿಗರು ಬೆಚ್ಚಿಬಿದ್ದಿದ್ದಾರೆ. ಇತ್ತೀಚೆಗೆ ಮೃಗಾಲಯಕ್ಕೆ ಭೇಟಿಕೊಟ್ಟ ಪ್ರವಾಸಿಗರೊಬ್ಬರು ಇದರ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.

Viral Photo: ಮೃಗಾಲಯದಲ್ಲಿದ್ದ ಬ್ಯಾಗ್ ನೋಡಿ ಬೆಚ್ಚಿಬಿದ್ದ ಪ್ರವಾಸಿಗರು; ಇದಕ್ಕೆ ಕಾರಣ ಏನು ಗೊತ್ತಾ?
ಲಂಡನ್ ಮೃಗಾಲಯದಲ್ಲಿ ಪ್ರದರ್ಶನಕ್ಕಿಡಲಾದ ಮೊಸಳೆ ಚರ್ಮದಿಂದ ಮಾಡಿದ ಕೈಚೀಲ
Follow us on

ಸಾಮಾನ್ಯವಾಗಿ ನೀವು ಮೃಗಾಲಯಕ್ಕೆ ಹೋದಾಗ ನೀವು ವಿವಿಧ ರೀತಿಯ ಪ್ರಾಣಿಗಳನ್ನು ನೋಡುತ್ತೀರಿ. ವ್ಯಾಘ್ರಗಳು, ಸರಿಸೃಪಗಳು, ಪಕ್ಷಿಗಳು ಇತ್ಯಾದಿ ಪ್ರಾಣಿಗಳನ್ನು ನೋಡುತ್ತೀರಿ. ಕೆಲವೊಂದು ಜೀವಿಗಳ ಬಗ್ಗೆ ನಿಮಗೆ ತಿಳಿದಿರುತ್ತದೆ, ಇನ್ನೂ ಕೆಲವು ಪ್ರಾಣಿಗಳ ಬಗ್ಗೆ ತಿಳಿದಿರುವುದಿಲ್ಲ. ಇದೆಲ್ಲವೂ ಸರಿ ಆದರೆ ಲಂಡನ್​ನ ಮೃಗಾಲಯದಲ್ಲಿ ಪ್ರಾಣಿಗಳ ಜೊತೆಗೆ ಒಂದು ಬ್ಯಾಗ್ ಅನ್ನು ಕೂಡ ಪ್ರದರ್ಶನಕ್ಕೆ ಇಡಲಾಗಿದೆ. ಈ ಬ್ಯಾಗ್ ನೋಡಿದ ಪ್ರವಾಸಿಗರು ಅಚ್ಚರಿಯೊಂದಿಗೆ ಬೆಚ್ಚಿಬಿದ್ದಿದ್ದಾರೆ. ಅಷ್ಟಕ್ಕೂ ಆ ಬ್ಯಾಗ್ ನೋಡಿ ಪ್ರವಾಸಿಗರು ಬೆಚ್ಚಿಬಿದ್ದಿದ್ದೇಕೆ? ಆ ಬ್ಯಾಗ್ ಅನ್ನು ಮೃಗಾಲಯದಲ್ಲಿ ಇರಿಸಿದ್ದೇಕೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕಾಡುಪ್ರಾಣಿಗಳ ಮೇಲಿನ ಮಾನವನ ಅಟ್ಟಹಾಸ ಇಂದು ಮೊನ್ನೆಯದ್ದಲ್ಲ. ನಿರಂತರವಾಗಿ ನಡೆಯುತ್ತಾ ಬಂದಿದೆ. ಹಿಂದೆ ಬಿಲ್ಲು ಬಾಣಗಳನ್ನು ಹಿಡಿದುಕೊಂಡು ಹೋಗುತ್ತಿದ್ದ ಮಾನವರು ಇಂದು ಗನ್​ಗಳನ್ನು ಹಿಡಿದುಕೊಂಡು ಕಾಡಿಗೆ ನುಗ್ಗಿ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಆ ಮೂಲಕ ಆನೆ ದಂತಗಳು, ಹುಲಿ ಚರ್ಮ, ಉಗುರುಗಳು, ಜಿಂಕೆ ಚರ್ಮ ಇತ್ಯಾದಿಗಳನ್ನು ಕಿತ್ತು ತೆಗೆದು ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಮೊಸಳೆ ಕೂಡ ಹೊರತಾಗಿಲ್ಲ. ಮೊಸಳೆಗಳನ್ನು ಕೂಡ ಬೇಟೆಯಾಡಿ ಅದರ ಚರ್ಮವನ್ನು ಕಿತ್ತು ಮಾರಾಟ ಮಾಡಲಾಗುತ್ತಿದೆ ಎಂಬುದು ನಿಮಗೆ ತಿಳಿದಿರದ ಸಂಗತಿಯಾಗಿದೆ.

ಅತ್ಯಂತ ವಿರಳವಾದ ಮೊಸಳೆಯೆಂದರೆ ಅದು ಸಿಯಾಮೀಸ್ ಮೊಸಳೆಗಳು. ಇಡೀ ವಿಶ್ವದಲ್ಲೆ ಇದರ ಸಂಖ್ಯೆ ಸಾವಿರಕ್ಕಿಂತ ಕಡಿಮೆ ಇದೆ. ಇದರ ಸಂತತಿ ಅಳಿವಿಗೆ ಮೊದಲ ಕಾರಣ ಬೆಳೆಯಲು ಸೂಕ್ತವಾದ ಪರಿಸ್ಥಿತಿಗಳಿಲ್ಲದಿರುವುದು, ಎರಡನೇ ಕಾರಣ ಬೇಟೆ. ಈ ಮೊಸಳೆಯನ್ನು ಬೇಟೆಯಾಡಲು ಕಾರಣ ಮಾರುಕಟ್ಟೆಯಲ್ಲಿ ಇದರ ಚರ್ಮಕ್ಕಿರುವ ಬೇಡಿಕೆ. ಇದರ ಚರ್ಮಗಳಿಂದ ತಯಾರಿಸಿದ ಬ್ಯಾಗ್ ಮತ್ತಿತರ ವಸ್ತುಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಆದರೆ ಇಂತಹ ವಸ್ತುಗಳನ್ನು ಮುಕ್ತವಾಗಿ ಮಾರಾಟ ಮಾಡಲು ಸಾಧ್ಯವಿಲ್ಲ.

ಲಂಡನ್​ನ ಮೃಗಾಯದಲ್ಲೂ ಇರುವುದು ಕೂಡ ಇದೇ ಮೊಸಳೆಯ ಚರ್ಮದಿಂದ ಮಾಡಿದ ಬ್ಯಾಗ್. 2018 ರಲ್ಲಿ ಲಂಡನ್ ವಿಮಾನ ನಿಲ್ದಾಣದಲ್ಲಿ ಸಿಯಾಮೀಸ್ ಮೊಸಳೆ ಚರ್ಮದಿಂದ ಮಾಡಿದ ಕೈ ಚೀಲವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ಚೀಲವನ್ನು ಮೃಗಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಅಕ್ರಮ ವನ್ಯಜೀವಿ ವ್ಯಾಪಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇತ್ತೀಚೆಗಷ್ಟೇ ಆ ಮೃಗಾಲಯಕ್ಕೆ ಭೇಟಿಕೊಟ್ಟ ಪ್ರವಾಸಿಗರೊಬ್ಬರು ಬ್ಯಾಗ್​ನ ಫೋಟೋ ತೆಗೆದು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು, ವೈರಲ್ ಆಗುತ್ತಿದೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ