ಚಿರತೆಯ ಕೈಗೆ ಸಿಕ್ಕಿಬಿದ್ದರೆ ಸಾಕು ಜೀವ ಉಳಿಯುವುದು ಅನುಮಾನವೇ ಸರಿ. ಇಂತಹ ಚಿರತೆಗೆ ಮಹಿಳೆಯೊಬ್ಬರು ರಾಖಿ ಕಟ್ಟಿ ಧೈರ್ಯ ಮೆರೆದಿದ್ದಾರೆ. ಅಷ್ಟಕ್ಕೂ ಈ ಚಿರತೆ ಸುಮ್ಮನಿರಲು ಕಾರಣ ಅದು ಗಾಯಗೊಂಡಿತ್ತು. ಗಾಯಗೊಂಡ ಚಿರತೆಯನ್ನು ಸ್ಥಳೀಯ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಕೆಲವೇ ಕ್ಷಣಗಳ ಮೊದಲು ಮಹಿಳೆಯೊಬ್ಬರು ಚಿರತೆಗೆ ರಾಖಿ ಕಟ್ಟಿದ್ದಾರೆ. ರಾಜಸ್ಥಾನದಲ್ಲಿ ಸೆರೆಹಿಡಿಯಲಾದ ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಫೋಟೋ ನೋಡಿದ ನೆಟ್ಟಿಗರು ಕಾರು ಮತ್ತು ವನ್ಯಜೀವಿಗಳೊಂದಿಗೆ ಜನರು ಇದೇ ರೀತಿಯಲ್ಲಿ ಸಹಬಾಳ್ವೆಯಿಂದ ನಡೆದುಕೊಳ್ಳಬೇಕಾಗಿದೆ ಎಂದು ಹೇಳಿಕೊಂಡಿದ್ದಾರೆ.
ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಶುಕ್ರವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಗಾಯಗೊಂಡ ಚಿರತೆಗೆ ಮಹಿಳೆ ರಾಖಿ ಕಟ್ಟುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅವರು, “ಯುಗಯುಗಗಳಿಂದಲೂ, ಭಾರತದಲ್ಲಿ ಮನುಷ್ಯ ಮತ್ತು ಪ್ರಾಣಿಗಳು ಕಾಡುಗಳಿಗೆ ಬೇಷರತ್ತಾದ ಪ್ರೀತಿಯೊಂದಿಗೆ ಸಾಮರಸ್ಯದಿಂದ ಬದುಕುತ್ತಿವೆ. ರಾಜಸ್ಥಾನದಲ್ಲಿ, ಮಹಿಳೆಯೊಬ್ಬರು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಮೊದಲು ಅನಾರೋಗ್ಯದ ಚಿರತೆಗೆ ರಾಖಿ (ಪ್ರೀತಿ ಮತ್ತು ಸಹೋದರತ್ವದ ಸಂಕೇತ) ಕಟ್ಟುವ ಮೂಲಕ ನಮ್ಮ ಕಾಡಿಗೆ ಈ ಅನಿಯಂತ್ರಿತ ಪ್ರೀತಿಯನ್ನು ತೋರಿಸಿದ್ದಾರೆ” ಎಂದು ಶೀರ್ಷಿಕೆ ಬರೆದಿದ್ದಾರೆ.
For ages, man & animal in India have lived in harmony with unconditional love to the wild.
In Rajasthan, a lady shows this unfettered love to our wild by tying a Rakhi(symbol of love & brotherhood ) to an ailing Leopard before handing over to Forest Department.
(As received) pic.twitter.com/1jk6xi1q10— Susanta Nanda IFS (@susantananda3) August 12, 2022
ಈ ಫೋಟೋ ಹಂಚಿಕೊಂಡ ನಂತರ ವೈರಲ್ ಪಡೆದು ಈವರೆಗೆ 1000ಕ್ಕೂ ಹೆಚ್ಚು ಲೈಕ್ಗಳು ಬಂದಿದ್ದು, ನೂರಕ್ಕೂ ಹೆಚ್ಚು ರೀಟ್ವೀಟ್ಗಳು ಆಗಿವೆ. ಸುತ್ತಮುತ್ತಲಿನ ಜನರಿಗೆ ಇಂತಹ ಅದ್ಭುತ ಸಂದೇಶವನ್ನು ನೀಡಿದ್ದಕ್ಕಾಗಿ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ಮಹಿಳೆಯನ್ನು ಹೊಗಳಿದ್ದಾರೆ. ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, “ಹಾಗೆಯೇ ಇರಬೇಕು. ನಾವು ಕಾಡುಗಳು ಮತ್ತು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸಬೇಕಾಗಿದೆ. ದೇವರು ಎಲ್ಲಾ ರೀತಿಯ ಜೀವನವನ್ನು ಸೃಷ್ಟಿಸಿದ್ದಾನೆ, ಪ್ರಪಂಚವು ಮನುಷ್ಯರಿಗೆ ಮಾತ್ರವಲ್ಲ” ಎಂದು ಹೇಳಿದ್ದಾರೆ.
ಮತ್ತೊಬ್ಬರು ಪ್ರತಿಕ್ರಿಯೆ ನೀಡಿ, “ರಾಖಿ ಕಟ್ಟುವುದು ಸಾಂಕೇತಿಕವಾಗಿದೆ … ಪ್ರೀತಿ ಮತ್ತು ವಾತ್ಸಲ್ಯವು ತುಂಬಾ ಸುಂದರವಾಗಿದೆ… ನಮ್ಮ ಅರಣ್ಯಗಳನ್ನು ನೋಡಿಕೊಳ್ಳುವ ಎಲ್ಲಾ ಸಿಬ್ಬಂದಿಗೆ ದೊಡ್ಡ ಚಪ್ಪಾಳೆ” ಎಂದು ಹೇಳಿದ್ದಾರೆ. ಇನ್ನೊಬ್ಬರು ಪ್ರತಿಕ್ರಿಯಿಸಿ, ತಪ್ಪಾದ ಭಾವನೆಗಳು. ಚಿರತೆ ನಿಜವಾಗಿಯೂ ಅನಾರೋಗ್ಯದಿಂದ ಬಳಲುತ್ತಿದೆ, ಇಲ್ಲದಿದ್ದರೆ ಅದು ಖಂಡಿತವಾಗಿಯೂ ಅವರ ಗಂಟಲು ಹಿಡಿಯುತ್ತಿತ್ತು” ಎಂದು ಹೇಳಿದ್ದಾರೆ.
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:01 pm, Fri, 12 August 22