Viral Pics: ಪತ್ನಿಯ ಬದಲು ಪತ್ನಿಯ ಮುಖವಾಡದೊಂದಿಗೆ ಪ್ರವಾಸಕ್ಕೆ ತೆರಳಿದ ಪತಿಮಹಾಶಯ; ಕಾರಣ ಏನು ಗೊತ್ತಾ?

| Updated By: Rakesh Nayak Manchi

Updated on: Jul 24, 2022 | 1:40 PM

ಫಿಲಿಪಿನೋದ ವ್ಯಕ್ತಿಯೊಬ್ಬರು ತನ್ನ ಪತ್ನಿಯ ಬದಲು ಪತ್ನಿಯ ಮುಖವಾಡದೊಂದಿಗೆ ಪತಿಮಹಾಶಯನೊಬ್ಬ ಪ್ರವಾಸ ಮಾಡಿದ್ದಾರೆ. ತನ್ನ ಪತ್ನಿಗೆ ನೀಡಿದ ಭರವಸೆಯನ್ನು ಚಾಚುತಪ್ಪದೇ ಪಾಲಿಸಿದ ಫಿಲಿಪಿನೋದ ವ್ಯಕ್ತಿ ಇಂಟರ್ನೆಟ್​ನಲ್ಲಿ ಗಮನಸೆಳೆದಿದ್ದಾರೆ.

Viral Pics: ಪತ್ನಿಯ ಬದಲು ಪತ್ನಿಯ ಮುಖವಾಡದೊಂದಿಗೆ ಪ್ರವಾಸಕ್ಕೆ ತೆರಳಿದ ಪತಿಮಹಾಶಯ; ಕಾರಣ ಏನು ಗೊತ್ತಾ?
ಪತ್ನಿಯ ಮುಖವಾಡದೊಂದಿಗೆ ರೇಮಂಡ್
Follow us on

ಸ್ನೇಹಿತರೊಂದಿಗೆ, ಸಂಗಾತಿಯೊಂದಿಗೆ, ಪೋಷಕರೊಂದಿಗೆ ಪ್ರವಾಸ ಕೈಗೊಳ್ಳುವುದು ಎಂದರೆ ಅದು ಸಂತಸದ ವಿಚಾರವಾಗಿರುತ್ತದೆ. ಕೆಲವೊಮ್ಮೆ ಪ್ರವಾಸವೇನೋ ಕೈಗೊಂಡಿರುತ್ತಾರೆ, ಆದರೆ ಕೆಲವರು ಕೊನೇ ಕ್ಷಣದಲ್ಲಿ ಕೈಕೊಟ್ಟುಬಿಡುತ್ತಾರೆ. ಇದಕ್ಕೆ ಬೇರೆ ಕಾರಣಗಳಿರುತ್ತವೆ. ಇದೀಗ ಅಂತಹದ್ದೇ ಒಂದು ಸುದ್ದಿಯೊಂದಿಗೆ ನಾವು ಬಂದಿದ್ದೇವೆ. ವ್ಯಕ್ತಿಯೊಬ್ಬರು ತನ್ನ ಪತ್ನಿಯೊಂದಿಗೆ ಪ್ರವಾಸ ಕೈಗೊಂಡಿದ್ದರು. ಆದರೆ ಕೊನೇ ಕ್ಷಣದಲ್ಲಿ ಪತ್ನಿಗೆ ಬರಲು ಸಾಧ್ಯವಾಗದ ಹಿನ್ನೆಲೆ ತನ್ನ ಪತ್ನಿ ತನ್ನೊಂದಿಗೆಯೇ ಪ್ರವಾಸದಲ್ಲಿ ಇದ್ದಾಳೆ ಎಂದು ತಿಳಿಯಲು ಹೊಸ ಉಪಾಯವನ್ನು ಕಂಡುಕೊಂಡಿದ್ದಾರೆ. ಅದೇನೆಂದರೆ, ಆ ವ್ಯಕ್ತಿ ತನ್ನ ಪತ್ನಿಯ ಮುಖವಾಡವನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದಾರೆ. ಸದ್ಯ ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸಂಗಾತಿಯ ಮೇಲಿನ ಪತಿಯ ಪ್ರೀತಿಯನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಫಿಲಿಪಿನೋ ವ್ಯಕ್ತಿ ರೇಮಂಡ್ ಫಾರ್ಚುನಾಡೋ ಫಿಲಿಪೈನ್ಸ್‌ನ ಪಲವಾನ್‌ನಲ್ಲಿರುವ ಕೊರೊನ್‌ಗೆ ದೀರ್ಘಕಾಲದ ಪ್ರವಾಸವನ್ನು ಯೋಜಿಸಿದ್ದರು. ಆದಾಗ್ಯೂ, ಕೊನೆಯ ನಿಮಿಷದಲ್ಲಿ ಅವರ ಪತ್ನಿ ಜೊವಾನ್ನೆ ಫಾರ್ಟುನಾಡೊ ಅವರಿಗೆ ಬರಲು ಸಾಧ್ಯವಾಗಿಲ್ಲ. ಅದಾಗ್ಯೂ ರೇಮಂಡ್ ತನ್ನ ಸಂಗಾತಿಯೊಂದಿಗೆ ಎಲ್ಲೆಂದರಲ್ಲಿ ಹೋಗುತ್ತೇನೆ ಎಂಬ ಭರವಸೆಯು ಮುರಿಯದೆ ಉಳಿದಿದೆ ಎಂದು ಖಚಿತಪಡಿಸಿಕೊಳ್ಳಲು ತನ್ನ ಹೆಂಡತಿಯ ಮುಖವಾಡವನ್ನು ಮಾಡಿ ತನ್ನೊಂದಿಗೆ ಕೊಂಡುಹೋಗಿದ್ದಾನೆ.

ತನ್ನ ಪ್ರವಾಸದುದ್ದಕ್ಕೂ ಪತ್ನಿಯ ಮುಖವಾಡದೊಂದಿಗೆ ತೆಗೆಸಿಕೊಂಡ ಫೋಟೋವನ್ನು ಫೇಸ್‌ಬುಕ್​ನಲ್ಲಿ ರೇಮಂಡ್ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತಮ್ಮ ಹೆಂಡತಿಯ ಮೆಮೆ-ಫೇಸ್ ದಿಂಬಿನೊಂದಿಗೆ ಪ್ರವಾಸಿ ಥಾಣಗಳಿಗೆ ಭೇಟಿಕೊಟ್ಟಿರುವುದನ್ನು ಕಾಣಬಹುದು.

ವಿವಿಧ ಸ್ಥಳಗಳಿಗೆ ಭೇಟಿ ನೀಡುವಾಗ, ಶಾಪಿಂಗ್ ಮಾಡುವಾಗ ಮಾತ್ರವಲ್ಲದೆ ಹೋಟೆಲ್‌ನಲ್ಲಿ ಉಪಹಾರ ಸೇವಿಸುವಾಗಲೂ ಪತ್ನಿಯ ಮುಖವಾಡದೊಂದಿಗೆ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ವಿಮಾನ ಹತ್ತುವಾಗ ರೇಮಂಡ್ ಅವರು ಕೋವಿಡ್-19 ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ವಿಮಾನ ನಿಲ್ದಾಣದಲ್ಲಿ ಪತ್ನಿಯ ಮುಖವಾಡದ ತಾಪಮಾನವನ್ನು ಕೂಡ ಪರಿಶೀಲಿಸಿ ಸಿಬ್ಬಂದಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಅದಾಗ್ಯೂ, ರೇಮಂಡ್ ಅವರು ತನ್ನ ಪತ್ನಿಯ ಮುಖವಾಡದೊಂದಿಗೆ ಪೋಸ್ ನೀಡುವಂತೆ ಕೆಲವು ಸ್ಥಳೀಯರನ್ನು ಮನವೊಲಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಾಗಿನಿಂದ ಇಂಟೆರ್ನೆಟ್​ನಲ್ಲಿ ಭಾರೀ ಸುದ್ದಿಯಾಗಲು ಆರಂಭಿಸಿದೆ. ಫೋಟೋ ವೀಕ್ಷಣೆ ಮಾಡಿದ ಒಂದಷ್ಟು ಮಂದು ಅಚ್ಚರಿಗೊಂಡರೆ, ಇನ್ನೊಂದಷ್ಟು ಮಂದಿ ಸಂಗಾತಿಯ ಮೇಲೆ ಪತಿಯ ಪ್ರೀತಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಳಕೆದಾರರೊಬ್ಬರು ಕಾಮೆಂಟ್ ಮಾಡಿ, “ನೀವು ವಿಭಿನ್ನ, ಹೇಹೇ” ಎಂದು ಹೇಳಿಕೊಂಡಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, “ಹಹಹಹ್ಹಾ ಎಂತಹ ಅದ್ಭುತ ಪ್ರವಾಸ…ನೀವು ಮಾಡಿದ್ದನ್ನು ನೋಡಿ ನನಗೆ ಆಶ್ಚರ್ಯವಾಯಿತು. ತುಂಬಾ ಚೆನ್ನಾಗಿದೆ” ಎಂದು ಹೇಳಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ, “ನಾನು ತುಂಬಾ ಕಷ್ಟಪಟ್ಟು ನಕ್ಕಿದ್ದೇನೆ ಆದರೆ ತುಂಬಾ ಮುದ್ದಾಗಿದೆ” ಎಂದಿದ್ದಾರೆ.

ಕಾಮಿ ಪ್ರಕಾರ, ರೇಮಂಡ್ ತನ್ನ ಹೆಂಡತಿಯನ್ನು ಪ್ರವಾಸಕ್ಕೆ ಕರೆದೊಯ್ಯಲು ಸೃಜನಾತ್ಮಕ ಮಾರ್ಗವನ್ನು ರೂಪಿಸಿದನು. ಇದಕ್ಕೆ ಕಾರಣವೆಂದರೆ, ರೇಮಂಡ್ ಎಲ್ಲಿಗೆ ಹೋದರೂ ತನ್ನೊಂದಿಗೆ ಇರುತ್ತೇನೆ ಎಂದು ಜೋನ್ನೆಗೆ ಭರವಸೆ ನೀಡಿದ್ದರು.

Published On - 1:40 pm, Sun, 24 July 22