Viral Post: ಆನ್ ಲೈನ್​ನಲ್ಲಿ ಆರ್ಡರ್ ಮಾಡಿದ್ದು ಮೊಬೈಲ್​​, ಡೆಲಿವರಿ ಆಗಿದ್ದು ಮೂರು ಸೋಪು

ವ್ಯಕ್ತಿಯೊಬ್ಬ ಆನ್ ಲೈನ್​ನಲ್ಲಿ ಮೊಬೈಲ್ ಆರ್ಡರ್ ಮಾಡಿದ್ದು, ಆದರೆ ಡೆಲಿವರಿ ಆದ ವಸ್ತು ಕಂಡು ಶಾಕ್ ಆಗಿದ್ದಾನೆ. ಮೊಬೈಲ್​​ ಫೋನ್​ ಬದಲಿಗೆ ಆತನಿಗೆ ಮೊಬೈಲ್​​ ಬಾಕ್ಸ್​ನಲ್ಲಿ ಮೂರು ಸೋಪು ಬಂದಿದೆ. ತಕ್ಷಣ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಿದರೂ ಏನು ಪ್ರಯೋಜನವಾಗದ ಕಾರಣ ತನಗಾದ ಮೋಸವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.

Viral Post: ಆನ್ ಲೈನ್​ನಲ್ಲಿ ಆರ್ಡರ್ ಮಾಡಿದ್ದು ಮೊಬೈಲ್​​,  ಡೆಲಿವರಿ ಆಗಿದ್ದು ಮೂರು ಸೋಪು

Updated on: Jun 15, 2024 | 6:06 PM

ಆನ್‌ಲೈನ್ ಶಾಪಿಂಗ್ ಜಗತ್ತು ನಿರಂತರವಾಗಿ ನಡೆಯುತ್ತಿದೆ. ಜನರು ತಮ್ಮ ಮೊಬೈಲ್‌ನಿಂದ ಒಂದೇ ಕ್ಲಿಕ್‌ನಲ್ಲಿ ಸಣ್ಣ ವಸ್ತುಗಳಿಂದ ಹಿಡಿದು ದೊಡ್ಡ ಟಿವಿಗಳವರೆಗೆ ಎಲ್ಲವನ್ನೂ ಆನ್‌ಲೈನ್‌ನಲ್ಲಿ ಆರ್ಡರ್ ಮಾಡುತ್ತಿದ್ದಾರೆ. ಕೆಲವೊಮ್ಮೆ ಈ ಆನ್‌ಲೈನ್ ವಿತರಣೆಗಳಲ್ಲಿ ವಂಚನೆಗಳು ನಡೆಯುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಇಂತಹ ಘಟನೆಗಳು ಆಗಾಗ ಬೆಳಕಿಗೆ ಬರುತ್ತವೆ. ಇದೀಗ ಅಂತದ್ದೇ ಘಟನೆಯೊಂದು ನಡೆದಿದೆ.

ವ್ಯಕ್ತಿಯೊಬ್ಬ ಇ-ಕಾಮರ್ಸ್ ಸೈಟ್ ಅಮೆಜಾನ್‌ನಲ್ಲಿ ‘ವಿವೋ ವೈ20ಎ’ ಮೊಬೈಲ್‌ಗಾಗಿ ಆರ್ಡರ್ ಮಾಡಿದ್ದಾನೆ. ಆದರೆ ಡೆಲಿವರಿ ಆದ ವಸ್ತು ಕಂಡು ಶಾಕ್ ಆಗಿದ್ದಾನೆ. ಅದರಲ್ಲಿ ಮೊಬೈಲ್ ಬದಲು ಸಾಬೂನು ಸಿಕ್ಕಿದೆ. ತಕ್ಷಣ ಆನ್‌ಲೈನ್ ಅಪ್ಲಿಕೇಶನ್‌ನ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಿದ್ದಾರೆ. ಆದರೆ ಅವರಿಂದ ಯಾವುದೇ ಸಹಾಯ ಸಿಗದ ಕಾರಣ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೋಸ್ಟ್​​ ವೈರಲ್​​ ಆಗುತ್ತಿದ್ದಂತೆ ಅಮೆಜಾನ್ ಕಂಪನಿಯಿಂದ ಪ್ರತಿಕ್ರಿಯೆ ಬಂದಿತ್ತು ಹಣ ವಾಪಸ್ ಕೊಡಲಾಗಿದೆ ಎಂದು ಬರೆಯಲಾಗಿದೆ. ಆದರೆ, ಇಂತಹ ಹಗರಣಗಳು ನಡೆಯುತ್ತಿರುವುದು ಇದೇ ಮೊದಲಲ್ಲ.

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ಇದನ್ನೂ ಓದಿ: ‘ಹಾಯ್​​ ಫ್ರೆಂಡ್ಸ್ ಮೆಲೋಡಿ ಟೀಮ್’​​​, ಮೋದಿ ಜತೆಗೆ ಖುಷಿ ಖುಷಿಯಾಗಿ ವಿಡಿಯೋ ಮಾಡಿದ ಇಟಲಿ ಪ್ರಧಾನಿ ಮೆಲೋನಿ

@iamnarendranath ಎಂಬ ಟ್ವಿಟರ್​ ಖಾತೆಯಲ್ಲಿ ಜೂನ್​ 14ರಂದ ಈ ಪೋಸ್ಟ್​​ ಹಂಚಿಕೊಳ್ಳಲಾಗಿದೆ.ಪೋಸ್ಟ್​ ಹಂಚಿಕೊಂಡ ಒಂದೇ ದಿನದಲ್ಲಿ 7ಲಕ್ಷಕ್ಕೂ ಹೆಚ್ಚಿನ ನೆಟ್ಟಿಗರನ್ನು ತಲುಪಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: