Viral Video : ಅಬ್ಬಬ್ಬಾ! ಪ್ಲೇಟ್ ತುಂಬಾ ಹಾವುಗಳದ್ದೇ ರಾಶಿ, ಹಸಿ ಹಾವನ್ನೇ ತಿನ್ನುತ್ತಿರುವ ಯುವತಿ
ಈ ಜಗತ್ತಿನಲ್ಲಿರುವ ಕೆಲವರ ಆಹಾರ ಪದ್ಧತಿಯನ್ನು ನೋಡಿದಾಗ ಹೀಗೂ ಉಂಟಾ ಎಂದೆನಿಸುತ್ತದೆ. ಕೆಲವರ ಆಹಾರವೇ ಈ ಹುಳ ಹುಪ್ಪಟೆ, ಚೇಳು, ಹಾವುಗಳನ್ನು ಆಗಿರುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವಿದೇಶಿಗಲೊಬ್ಬಳು ಜೀವಂತ ಹಾವನ್ನು ತಿನ್ನುತ್ತಿರುವ ವಿಡಿಯೋವೊಂದು ನೆಟ್ಟಿಗರ ಎದೆಯಲ್ಲಿ ನಡುಕ ಹುಟ್ಟಿಸಿದೆ.
ನಾವೆಲ್ಲರೂ ಹಾವುಗಳನ್ನು ಕಂಡರೆ ಭಯ ಪಡುತ್ತೇವೆ. ಹಾವು ಬಂತೆಂದರೆ ಒಂದು ಮೈಲಿ ದೂರ ಓಡುತ್ತೇವೆ. ಆದರೆ ಕೆಲವು ಕಡೆಗಳಲ್ಲಿ ಈ ಹಾವುಗಳನ್ನೇ ತಿನ್ನುವ ಜನರಿದ್ದಾರೆ. ಇಂತಹ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಪ್ಲೇಟ್ ತುಂಬಾ ಜೀವಂತ ಹಾವುಗಳನ್ನು ಇಟ್ಟು, ಕಚ್ಚಿ ಕಚ್ಚಿ ತಿನ್ನುತ್ತಿರುವ ದೃಶ್ಯವು ಮೈ ಜುಮ್ಮ್ ಎನ್ನುವಂತೆ ಮಾಡುತ್ತದೆ.
ಹೌದು, ಸದ್ಯಕ್ಕೆ ವೈರಲ್ ಆಗಿರುವ ವಿಡಿಯೋದಲ್ಲಿ ದಕ್ಷಿಣ ಕೊರಿಯಾದ ಹುಡುಗಿಯೊಬ್ಬಳು ಹಾವನ್ನು ತರಕಾರಿಗಳ ಜೊತೆಗೆ ಸೇರಿಸಿ ತಿನ್ನುತ್ತಿರುವ ದೃಶ್ಯವು ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೊ @asmrmukbangworld ಎಂಬ ಪ್ಲಾಟ್ ಫಾರ್ಮ್ ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ದಕ್ಷಿಣ ಕೊರಿಯಾದ ಹುಡುಗಿಯೊಬ್ಬಳು, ತನ್ನ ಮುಂದೆ ಇರುವ ಪ್ಲೇಟ್‌ನಲ್ಲಿ ತರಕಾರಿಗಳ ಜೊತೆಗೆ ಹಾವುಗಳನ್ನು ಇಟ್ಟುಕೊಂಡಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಮತ್ತಷ್ಟು ಓದಿ:ಆನ್ಲೈನ್ ಮೂಲಕ ಆರ್ಡರ್ ಮಾಡಿದ್ದ ಐಸ್ಕ್ರೀಂನಲ್ಲಿ ಮನುಷ್ಯನ ಬೆರಳು ಪತ್ತೆ
ಒಂದು ಹಾವನ್ನು ಕೈಯಲ್ಲಿ ಹಿಡಿದು ತಿನ್ನಲು ಶುರುಮಾಡಿದ್ದಾಳೆ. ಒಮ್ಮೆ ಹಾವಿನ ತಲೆ, ಮಧ್ಯಭಾಗವನ್ನು ಕಚ್ಚಿ ತಿನ್ನುತ್ತಿದ್ದಾಳೆ. ಈಗಾಗಲೇ ಈ ವಿಡಿಯೋಗೆ 15 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದ್ದು, ಒಂದು ದಶಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಈ ವಿಡಿಯೋದ ನೆಟ್ಟಿಗರು ಮಾತ್ರ ಶಾಕ್ ಆಗಿದ್ದು, ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬಳಕೆದಾರನೊಬ್ಬ, ‘ನಾವು ಭಾರತದಲ್ಲಿ ಜನಿಸಿರುವುದು ಒಳ್ಳೆಯದು ‘ ಎಂದು ಸಮಾಧಾನ ಪಟ್ಟುಕೊಂಡಿದ್ದಾನೆ. ಮತ್ತೊಬ್ಬನು,’ ಚೀನೀ ಜನರು ತೃಪ್ತರಾಗಲು ಇವುಗಳನ್ನು ತಿನ್ನುತ್ತಾರೆ. ಆದರೆ ಅವರ ಈ ಹೊಸ ಆಹಾರ ಪದ್ಧತಿಯಿಂದ ಹೊಸ ವೈರಸ್‌ಗಳು ಜಗತ್ತಿಗೆ ಬರುತ್ತಿವೆ’ ಎಂದು ಟೀಕಿಸುವ ಮೂಲಕ ಕಾಮೆಂಟ್ ಮಾಡಿದ್ದಾನೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ