Viral Video: ಅಬ್ಬಬ್ಬಾ… ಎಮ್ಮೆ ಕರುಗಳ ಸಗಣಿ ಹೆಕ್ಕಿಯೇ ದುಬಾರಿ ಬೆಲೆಯ ʼಐ ಫೋನ್ʼ ಖರೀದಿಸಿದ ಮಹಿಳೆ

ಕೆಲವೊಬ್ರು ಅಯ್ಯೋ ದೇವ್ರೆ ಎಷ್ಟೇ ಕೆಲಸ ಮಾಡಿದ್ರೂ ಸಂಬಳ ಸಾಲುತ್ತಿಲ್ಲ, ಉಳಿತಾಯವಂತೂ ಇಲ್ವೇ ಇಲ್ಲ ಅಂತೆಲ್ಲಾ ಹೇಳುತ್ತಿರುತ್ತಾರೆ. ಇವರುಗಳ ನಡುವೆ ಇಲ್ಲೊಬ್ಬರು ಮಹಿಳೆ ದಿನಂಪ್ರತಿ ಎಮ್ಮೆ ಕರುಗಳ ಸೆಗಣಿ ಗೊಬ್ಬರ ಹೆಕ್ಕುವ ಕೆಲಸ ಮಾಡಿಯೇ ದುಬಾರಿ ಬೆಲೆಯ ಐಫೋನ್ ಖರೀದಿಸಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಇನ್ನೂ ನಾವು ಕೂಡಾ ಸೆಗಣಿ ಎತ್ತುವ ಕೆಲಸಕ್ಕೆ ಹೋಗುವ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.

Viral Video: ಅಬ್ಬಬ್ಬಾ... ಎಮ್ಮೆ ಕರುಗಳ ಸಗಣಿ ಹೆಕ್ಕಿಯೇ ದುಬಾರಿ ಬೆಲೆಯ ʼಐ ಫೋನ್ʼ ಖರೀದಿಸಿದ ಮಹಿಳೆ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 15, 2024 | 5:56 PM

ಆಪಲ್ ಐಫೋನ್ ವಿಶ್ವದಾದ್ಯಂತ ಈಗ ಹೊಸ ಟ್ರೆಂಡ್ ಸೃಷ್ಟಿ ಮಾಡಿದೆ ಅಂತಾನೇ ಹೇಳ್ಬಹುದು. ಹೆಚ್ಚಿನ ಜನರು ಇದಾಗಲೇ ತಮ್ಮ ಬಜೆಟ್ಗೆ ಅನುಗುಣವಾಗಿ ವಿವಿಧ ಮಾಡೆಲ್ ಐಫೋನ್ ಖರೀದಿಸಿದ್ದಾರೆ. ಇನ್ನೂ ಕೆಲವರು ಎಷ್ಟೇ ದೊಡ್ಡ ವೃತ್ತಿಯಲ್ಲಿದ್ರೂ ಕೂಡಾ ಅಯ್ಯೋ ನಮ್ಮ  ಕೆಲಸದಿಂದ ಬರುವ ಸಂಬಳದಿಂದ ಸೇವಿಂಗ್ಸ್ ಕೂಡಾ  ಇಲ್ಲ..  ಇನ್ನೂ ಐಫೋನ್ ಖರೀದಿಸಲು ಸಾಧ್ಯವೇ?, ಐಫೋನ್ ಖರೀದಿಸಲು ಕಿಡ್ನಿ ಮಾರಬೇಕು  ಅಂತೆಲ್ಲಾ ಹೇಳುತ್ತಿರುತ್ತಾರೆ. ಆದ್ರೆ ಇಲ್ಲೊಬ್ಬರು  ಮಹಿಳೆ ಮಾತ್ರ  ಎಮ್ಮೆ ಕರುಗಳ ಸಗಣಿ ಗೊಬ್ಬರ ಹೆಕ್ಕಿಯೇ ದುಬಾರಿ ಬೆಲೆಯ ಐಫೋನ್ ಖರೀಸಿದ್ದಾರೆ. ಈ ಮಹಿಳೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಮಹಿಳೆಯೊಬ್ಬರು ಕೊಟ್ಟಿಗೆಯಲ್ಲಿ ಎಮ್ಮೆ, ಹಸು, ಕರುಗಳ ಸೆಗಣಿ ಗೊಬ್ಬರ ಹೆಕ್ಕುವ ಕೆಲಸ ಮಾಡಿ, ತಮ್ಮ ಈ ಶ್ರಮದಿಂದ ಸುಮಾರು ಒಂದುವರೆ ಲಕ್ಷ ರೂಪಾಯಿ ಬೆಲೆಯ ಐಫೋನ್ 15 ಪ್ರೋ ಮೊಬೈಲ್ ಖರೀದಿಸಿದ್ದಾರೆ.

ಈ ವಿಡಿಯೋವನ್ನು ಕೈರವಿ ರಜಪೂತ್ (@Kairavii_Rajput) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಇನ್ನು ಮುಂದೆ ನಾನು ಕೂಡಾ ಹುಸುವಿನ ಸೆಗಣಿಯನ್ನು ಹೆಕ್ಕುವ ಕೆಲಸಕ್ಕೆ ಹೋಗುವೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಕೊಟ್ಟಿಗೆಯಲ್ಲಿ ಮಹಿಳೆಯೊಬ್ಬರು ಸೆಗಣಿ ಹೆಕ್ಕುವಂತಹ ದೃಶ್ಯವನ್ನು ಕಾಣಬಹುದು. ಹೀಗೆ ಸೆಗಣಿ ಗೊಬ್ಬರವನ್ನು ಹೆಕ್ಕುತ್ತಾ ಇನ್ನೊಂದು ದುಬಾರಿ ಮೊಬೈಲ್ ಖರೀದಿಸಿದ್ದೇನೆ. ಈ ಹಿಂದೆ ಐಫೋನ್ 14 ಪ್ರೋ ಮ್ಯಾಕ್ಸ್ ಮೊಬೈಲ್ ಖರೀದಿಸಿದ್ದೆ. ಇದೀಗ ಐಫೋನ್ 15 ಪ್ರೋ ಖರೀದಿ ಮಾಡಿದ್ದೇನೆ ಎನ್ನುತ್ತಾ ಕೊಟ್ಟಿಗೆಯಲ್ಲಿಯೇ ಹೊಸ ಫೋನ್ ಅನ್ಬಾಕ್ಸಿಂಗ್ ಮಾಡಿದ್ದಾರೆ.

ಇದನ್ನೂ ಓದಿ: ಫ್ಯಾಮಿಲಿ ಜತೆ ಹೋಟೆಲ್​​​ಗೆ ಬಂದ ವ್ಯಕ್ತಿಗೆ ಹೃದಯಾಘಾತ, ತುತ್ತು ಅನ್ನ ತಿನ್ನುವ ಮೊದಲೇ ಬಲಿ

ಜೂನ್ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕೆಲವರು ನಾವು ಕೂಡಾ ಇವರ ಹಾಗೆ ಯುಟ್ಯೂಬ್ ವ್ಲೋಗ್ ಮಾಡಿ ಐಫೋನ್ ಖರೀದಿಸಬೇಕು ಎಂದು ತಮಾಷೆಯ ಕಾಮೆಂಟ್ಸ್ ಬರೆದುಕೊಂಡಿದ್ದಾರೆ.