Viral Video: ಹಾಸ್ಟೆಲ್ನಲ್ಲಿ AC ಅಳವಡಿಸುವಂತೆ ಒತ್ತಾಯಿಸಿ ಮೆಸ್ನಲ್ಲಿ ಮಲಗಿ ವಿದ್ಯಾರ್ಥಿಗಳ ಪ್ರತಿಭಟನೆ
ವಿದ್ಯಾರ್ಥಿಗಳ ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ವೈರಲ್ ಆಗಿದೆ. ಬಿಸಿಲಿನ ತೀವ್ರತೆ ತಡೆಯಲಾಗದೇ ವಿದ್ಯಾರ್ಥಿಗಳು ಕಂಗೆಟ್ಟಿದ್ದು, ಹಾಸ್ಟೆಲ್ನಲ್ಲಿ ಎಸಿ ಅಳವಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಅಮೃತಸರ: ಅಮೃತಸರದ ಐಐಎಂ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್ನಲ್ಲಿ ಎಸಿ ಅಳವಡಿಸುವಂತೆ ಒತ್ತಾಯಿಸಿ ಕಾಲೇಜು ಕ್ಯಾಂಟೀನ್ ಪ್ರದೇಶದಲ್ಲಿ ಮೊಕ್ಕಾಂ ಹೂಡಿ ವಿನೂತನ ರೀತಿಯಲ್ಲಿ ಪ್ರತಿಭಟನೆಯ ನಡೆಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ವೈರಲ್ ಆಗಿದೆ. ಬಿಸಿಲಿನ ತೀವ್ರತೆ ತಡೆಯಲಾಗದೇ ವಿದ್ಯಾರ್ಥಿಗಳು ಕಂಗೆಟ್ಟಿದ್ದು, ಹಾಸ್ಟೆಲ್ನಲ್ಲಿ ಎಸಿ ಅಳವಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಪ್ರಸ್ತುತ ಬಿಸಿಗಾಳಿಯ ಹಿನ್ನೆಲೆಯಲ್ಲಿ ಉತ್ತಮ ಹಾಸ್ಟೆಲ್ ಸೌಕರ್ಯಗಳ ಅಗತ್ಯತೆಯ ಕುರಿತು ಜಾಗೃತಿ ಮೂಡಿಸುವುದು ಪ್ರತಿಭಟನೆಯ ಉದ್ದೇಶವಾಗಿತ್ತು. ಆದರೆ ವಿದ್ಯಾರ್ಥಿಗಳ ಬೇಡಿಕೆಗೆ ಆಡಳಿತ ಮಂಡಳಿ ಇನ್ನೂ ಸ್ಪಂದಿಸಿಲ್ಲ. ಬೇಸಿಗೆಯ ಉದ್ದಕ್ಕೂ, ಅಮೃತಸರವು ಸ್ಥಿರವಾಗಿ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವನ್ನು ಇರುತ್ತದೆ. ನೆರೆಯ ದೆಹಲಿ ನಗರವು 52 ಡಿಗ್ರಿ ಸೆಲ್ಸಿಯಸ್ ಹೊಂದಿದ್ದು, ಇದು ಭಾರತದಲ್ಲಿ ದಾಖಲಾದ ಅತ್ಯಂತ ಬಿಸಿಯಾದ ಹವಾಮಾನವಾಗಿದೆ.
ಇದನ್ನೂ ಓದಿ: ‘ಹಾಯ್ ಫ್ರೆಂಡ್ಸ್ ಮೆಲೋಡಿ ಟೀಮ್’, ಮೋದಿ ಜತೆಗೆ ಖುಷಿ ಖುಷಿಯಾಗಿ ವಿಡಿಯೋ ಮಾಡಿದ ಇಟಲಿ ಪ್ರಧಾನಿ ಮೆಲೋನಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
IIM Amritsar students protested against the management to get AC installed in their hostel by sleeping in the library that has AC. One of them said, “Modern problem requires modern solution” 😂 pic.twitter.com/d8D6rl9G9Q
— Shubh (@kadaipaneeeer) June 14, 2024
@kadaipaneeeer ಎಂಬ ಟ್ವಿಟರ್ ಖಾತೆಯಲ್ಲಿ ಜೂನ್ 14ರಂದು ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 1.1 ಮಿಲಿಯನ್ ಅಂದರೆ 10 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ನೆಟ್ಟಿಗರು ಬಗೆಬಗೆಯ ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: