Brother Sister: ಅಣ್ಣ ತಂಗಿ, ಅಕ್ಕ ತಮ್ಮನ ನಡುವಿನ ಬಾಂಧವ್ಯ ಅನುಭವಕ್ಕೆ ನಿಲುಕುವಂಥದ್ದು. ಸಣ್ಣಪುಟ್ಟ ಜಗಳ, ಮುನಿಸು, ಪ್ರೀತಿಯೊಂದಿಗೆ ಸದಾ ಕಾಲ ಕಾಯುವಂಥ ಸಂಬಂಧವದು. ಪರಸ್ಪರರ ಗುಟ್ಟುಗಳನ್ನು ಹೊಟ್ಟೆಯಲ್ಲಿಟ್ಟುಕೊಳ್ಳುವ ಆಪ್ತ ಸಂಬಂಧವರು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಅಣ್ಣ ತನ್ನ ಸ್ನೇಹಿತೆಯನ್ನು ಮದುವೆಯಾಗುತ್ತಿದ್ದಾನೆ. ನಾಲ್ಕು ವರ್ಷಗಳ ಹಿಂದೆ ಆಕೆಯನ್ನು ಭೇಟಿಯಾದ ರಾತ್ರಿ ತನ್ನ ತಂಗಿಗೆ ವಾಟ್ಸಪ್ನಲ್ಲಿ ಕಳಿಸಿದ ಚಾಟ್ನ ಸ್ಕ್ರೀನ್ ಶಾಟ್ ಅನ್ನು ತಂಗಿ ಅತ್ಯಂತ ಪ್ರೀತಿಯಿಂದ X ನಲ್ಲಿ ಹಂಚಿಕೊಂಡಿದ್ಧಾಳೆ. ಮೊದಲ ನೋಟದಲ್ಲಿಯೇ ನಮ್ಮಿಬ್ಬರಿಗೂ ಪ್ರೇಮವಾಯಿತು, ನಾವಿಬ್ಬರೂ ಮದುವೆಯನ್ನೂ (Marriage) ಆಗಲಿದ್ದೇವೆ ಎಂದು ಆತ ಅಂದು ತಂಗಿಗೆ ಕಳಿಸಿದ ಸಂದೇಶವನ್ನು ನೀವು ಇಲ್ಲಿ ನೋಡಬಹುದಾಗಿದೆ. ಜೊತೆಗೆ ಅಣ್ಣನ ಮದುವೆಯ ಫೋಟೋವನ್ನೂ.
ಇದನ್ನೂ ಓದಿ : Viral Video: ‘ಗುರು’ ಸಿನೆಮಾದ ಈ ಹಾಡನ್ನು ಭಾರ್ಗವಿ ವೆಂಕಟರಾಮ್ ಕರ್ನಾಟಕ ಸಂಗೀತಪಾಕದಲ್ಲಿ ಅದ್ದಿ ತೆಗೆದಾಗ
ಸೆ. 6ರಂದು ಮಾಡಿದ ಈ ಪೋಸ್ಟ್ ಅನ್ನು ಈತನಕ 4.5 ಮಿಲಿಯನ್ ಜನರು ನೋಡಿದ್ಧಾರೆ. ಈತನಕ ಸುಮಾರು 89,000 ಜನರು ಲೈಕ್ ಮಾಡಿದ್ದಾರೆ. ಸುಮಾರು 5,000 ಜನರು ರೀಪೋಸ್ಟ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಸಿದ್ದಾರೆ.
Thanks for all the lovely words & well wishes 🥹🥹 here’s the beautiful couple!!! 🤍🤍🤍🤍 pic.twitter.com/4EqmtZkBFW
— 𓂀 مي (@EGYPTlANA) September 7, 2023
ಇದು ತುಂಬಾ ಮುದ್ದಾದ ಪೋಸ್ಟ್ ನನಗೂ ಇಂಥ ತಂಗಿ ಬೇಕಿತ್ತು ಎಂದು ಅನೇಕರು ಹೇಳಿದ್ಧಾರೆ. ನವದಂಪತಿ ಬಹಳ ಸುಂದರವಾಗಿದ್ದಾರೆ ಅವರಿಗೆ ಶುಭಾಶಯ ತಿಳಿಸಿ ಎಂದಿದ್ದಾರೆ ಕೆಲವರು. ಇದೇ ನಿಜವಾದ ಅಣ್ಣತಂಗಿಯ ಬಾಂಧವ್ಯ ಎಂದು ಒಬ್ಬರು ಹೇಳಿದ್ದಾರೆ. ನಾನು ಮತ್ತು ನನ್ನ ಅಕ್ಕ ಹೀಗೆಯೇ ಪರಸ್ಪರ ಮನಸ್ಸನ್ನು ಹಂಚಿಕೊಳ್ಳುತ್ತೇವೆ ಎಂದು ಇನ್ನೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ : Viral Video: ಹುಟ್ಟುಮಚ್ಚೆ; ಈ ‘ಸಂಜಯ’ನಿಂದಲೇ ಸಾಗರದ ‘ಮಂದಾರ’ ಅರಳಿದ ಕಥೆ ಇದು
ಇವರಿಬ್ಬರ ಸಂಬಂಧ ಹೀಗೆಯೇ ಮಧುರವಾಗಿರಲಿ, ಮಿಲಿಯನ್ ಮಕ್ಕಳು ಹುಟ್ಟಲಿ! ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ಆದರೆ ನಾಲ್ಕು ವರ್ಷಗಳ ಕಾಲ ಯಾಕೆ ಕಾಯ್ದರು ಎಂದು ಕೇಳಿದ್ದಾರೆ ಇನ್ನೊಬ್ಬರು. ನನ್ನ ಮದುವೆ ಯಾವಾಗ ಆಗುತ್ತದೆಯೋ? ಎಂದು ಕಾಲೆಳೆದುಕೊಂಡಿದ್ದಾರೆ ಮತ್ತೊಬ್ಬರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:56 pm, Fri, 8 September 23