ದಕ್ಷಿಣ ಆಫ್ರಿಕಾದ ಅರಣ್ಯದಲ್ಲಿ ಮೂರು ಕಾಲಿನ ಆನೆ ಪತ್ತೆ

|

Updated on: Mar 14, 2023 | 2:54 PM

ದಕ್ಷಿಣ ಆಫ್ರಿಕಾದ ಅರಣ್ಯದಲ್ಲಿ ಕಂಡುಬಂದ ವುಟೋಮಿ ಎಂಬ ಮೂರು ಕಾಲಿನ ಆನೆಯ ಸ್ಪೂರ್ತಿದಾಯಕ ಕಥೆಯನ್ನು 31 ವರ್ಷದ ಕಂಟೆಂಟ್ ಕ್ರಿಯೇಟರ್ ಡೈಲನ್ ಪೊನ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗಾ ಭಾರೀ ಸುದ್ದಿಯಲ್ಲಿದೆ.

ದಕ್ಷಿಣ ಆಫ್ರಿಕಾದ ಅರಣ್ಯದಲ್ಲಿ ಮೂರು ಕಾಲಿನ ಆನೆ ಪತ್ತೆ
ಮೂರು ಕಾಲಿನ ಆನೆ
Image Credit source: Twitter @LatestSabiSands
Follow us on

ದಕ್ಷಿಣ ಆಫ್ರಿಕಾದ ಅರಣ್ಯದಲ್ಲಿ ಕಂಡುಬಂದ ವುಟೋಮಿ ಎಂಬ ಮೂರು ಕಾಲಿನ ಆನೆಯ ಸ್ಪೂರ್ತಿದಾಯಕ ಕಥೆಯನ್ನು 31 ವರ್ಷದ ಕಂಟೆಂಟ್ ಕ್ರಿಯೇಟರ್ ಡೈಲನ್ ಪೊನ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗಾ ಭಾರೀ ಸುದ್ದಿಯಲ್ಲಿದೆ. ಇತ್ತೀಚಿನ ಸಂಭಾಷಣೆಯೊಂದರಲ್ಲಿ , ದಕ್ಷಿಣ ಆಫ್ರಿಕಾದ ಸತಾರಾದಲ್ಲಿ ಈ ಮೂರು ಕಾಲಿನ ಆನೆಯನ್ನು ನೋಡಿದ ಅನುಭವವನ್ನು ಪೊನ್ಸ್ ನೆನಪಿಸಿಕೊಂಡಿದ್ದಾರೆ. ಕಂಟೆಂಟ್ ಕ್ರಿಯೇಟರ್ ಮತ್ತು ಅವರ ತಂಡವು ಎನ್ಸೆಮನಿ ಅಣೆಕಟ್ಟಿನಲ್ಲಿ ಆನೆಯನ್ನು ಕಂಟೆಂಟ್ ಕ್ರಿಯೇಟರ್ ಮತ್ತು ಅವರ ತಂಡವು ಎನ್ಸೆಮನಿ ಅಣೆಕಟ್ಟಿನಲ್ಲಿ ಮೊದಲು ನೋಡಿದ್ದರು.

ಇದು ಸಾಕಷ್ಟು ಆನೆಗಳ ಗುಂಪಿನಲ್ಲಿ ನೀರಿನಲ್ಲಿ ಆಟವನ್ನು ಆಡುತ್ತಿದ್ದರಿಂದ ಕಾಲುಗಳ ಒಂದು ಕಾಲು ಕಳೆದುಕೊಂಡಿದ್ದು, ಮೊದಲಿಗೆ ತಿಳಿದಿರಲ್ಲಿಲ್ಲ ಎಂದು ಅವರು ಹೇಳುತ್ತಾರೆ. ತನ್ನ ಆನೆಗಳ ಹಿಂಡಿನೊಂದಿಗೆ ಆಕೆ ಸುಂದರ ಜೀವನ ನಡೆಸುತ್ತಿದ್ದಾಳೆ. ದುರದೃಷ್ಟವಶಾತ್ ಆನೆಗಳಿಗೆ ಸಾಮಾನ್ಯವಾಗಿ ಕಂಡುಬರುವ ಕಾಯಿಲೆಯಿಂದಾಗಿ ಅವಳು ತನ್ನ ಅಂಗವನ್ನು ಕಳೆದುಕೊಂಡಿರಬಹುದು ಅಥವಾ ಪರಭಕ್ಷಕ ದಾಳಿಗೆ ಬಲಿಯಾಗಿರಬಹುದು ಎಂಬುದು ತಿಳಿದಿಲ್ಲ.

ಇದನ್ನೂ ಓದಿ: ಆಸ್ಕರ್ ಮುಡಿಗೇರಿಸಿಕೊಂಡ ರಘುವನ್ನು ನೋಡಲು ತೆಪ್ಪಕಾಡು ಆನೆ ಶಿಬಿರದಲ್ಲಿ ಜನಸಾಗರ

ಆಕೆ ತನ್ನ ಹಿಂಡುಗಳೊಂದಿಗೆ ಓಡಾಡಿಕೊಂಡು ತನ್ನದೇ ರೀತಿಯಲ್ಲಿ ಜೀವನವನ್ನು ಆನಂದಿಸುತ್ತಾಳೆ. ಇದು ಹೃದಯಸ್ಪರ್ಶಿಯಾಗಿತ್ತು ಎಂದು ಪೊನ್ಸ್ ತಮ್ಮ ಅನುಭವವವನ್ನು ಹಂಚಿಕೊಂಡಿದ್ದಾರೆ. ವುಟೊಮಿ ಅಥವಾ ಯಾವುದೇ ಇತರ ಗಾಯಗೊಂಡ ಪ್ರಾಣಿಗಳನ್ನು ರಸ್ತೆಯ ಸಮೀಪದಲ್ಲಿ ನೋಡಿದರೆ, ನಿಮ್ಮಿಂದ ಆದ ಸಹಾಯ ಮಾಡಿ. ನಾವು ಅದರ ಪರಿಸರದಲ್ಲಿದ್ದೇವೆ ಎಂದು ಹೇಳುತ್ತಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 2:37 pm, Tue, 14 March 23