Crossword: ನಿಮ್ಮ ಮೆದುಳಿಗೊಂದು ಗುದ್ದು ಇಲ್ಲಿದೆ. ಇಂಥ ಸವಾಲುಗಳಿಗೆ ಒಡ್ಡಿಕೊಳ್ಳುವುದಕ್ಕಿಂತ ನಿಮ್ಮ ಮೆದುಳೂ ಚುರುಕಾಗಿರುತ್ತದೆ, ಮನಸ್ಸೂ ತಾಜಾತನದಿಂದ ಕೂಡಿರುತ್ತದೆ. ಇಂತಹ ಕಸರತ್ತುಗಳನ್ನು ಪರಿಹರಿಸುವಲ್ಲಿ ನೀವು ಚತುರರು ಎನ್ನುವುದು ನಮಗೆ ಗೊತ್ತು. ಹಾಗಾಗಿ ಇಲ್ಲೊಂದು ಕ್ರಾಸ್ವರ್ಡ್ ಕಾಯುತ್ತಿದೆ. ಮೂರು ಪದಗಳನ್ನು ಇಲ್ಲಿ ಕಾಣಬಹುದಾಗಿದೆ. ಆದರೆ ನಾಲ್ಕನೇ ಪದ (Word) ಏನು? ನೆಟ್ಟಿಗರಿಗೂ ಇದು ಗೊಂದಲಕ್ಕೆ ಕೆಡವಿದೆ. ನೀವು ಪ್ರಯತ್ನಿಸಿದರೆ ಖಂಡಿತ ಸರಿಯಾದ ಉತ್ತರ ಕಂಡುಕೊಳ್ಳುತ್ತೀರಿ.
ಇದನ್ನೂ ಓದಿ : Viral Video: ನಾಗಾಲ್ಯಾಂಡ್ ಸಚಿವರು ವಡಾ ಪಾವ್ ಮಾಡಿದ ವಿಡಿಯೋ ವೈರಲ್
ಎರಡು ದಿನಗಳ ಹಿಂದೆ ರೆಡ್ಡಿಟ್ನಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್ ಅನ್ನು ಈತನಕ 33,000 ಜನರು ಲೈಕ್ ಮಾಡಿದ್ದಾರೆ. 4,200 ಜನರು ಪ್ರತಿಕ್ರಿಯಿಸಿದ್ದಾರೆ. ಅನೇಕರು ರೀಪೋಸ್ಟ್ ಮಾಡಿದ್ದಾರೆ. ನಾಲ್ಕನೇ ಪದ Rattan ಎಂದಿದ್ದಾರೆ ಅನೇಕರು. ಇದರರ್ಥ, ಶಾಲಾ ಮಕ್ಕಳನ್ನು ಶಿಕ್ಷಿಸಲು ಬಳಸುವ ಒಂದು ರೀತಿಯ ಬೆತ್ತ ಅಥವಾ ಕೋಲು. ಇದು 1982 ರವರೆಗೆ ಸ್ಕಾಟಿಷ್ ಶಾಲೆಗಳಲ್ಲಿ ಶಿಕ್ಷೆಗೆ ನ್ಯಾಯಸಮ್ಮತವಾಗಿತ್ತು ಎಂದಿದ್ದಾರೆ.
5th-grade crossword has us all stumped
byu/CanguroEnglish inmildlyinfuriating
ನಾನು 1975ರಲ್ಲಿ ಹುಟ್ಟಿದವನು. ಆದರೆ ಈ ಕ್ರಾಸ್ವರ್ಡ್ 1935ರ ಜನರೇಷನ್ನಿಂದ ರೂಪಿತಗೊಂಡಹಾಗಿದೆ ಎಂದಿದ್ದಾರೆ ಒಬ್ಬರು. ಹೇ, ನಾನು 1805 ರಲ್ಲಿ ಹುಟ್ಟಿದವನು, ಇದು 1785ರ ಜನರೇಷನ್ನಿಂದ ರಚಿತವಾದಂತಿದೆ ಎಂದಿದ್ದಾರೆ ಇನ್ನೊಬ್ಬರು. ನನ್ನ ವಯಸ್ಸು 38. ನನ್ನ ಜೀವಮಾನದಲ್ಲಿ ಈ ಪದವನ್ನೇ ಕೇಳಿಲ್ಲ ಎಂದಿದ್ದಾರೆ ಮತ್ತೊಬ್ಬರು. ಇದು ಕಷ್ಟಕರವಾಗಿದೆ ಎಂದು ಅನೇಕರು ಹೇಳಿದ್ದಾರೆ.
ಇದನ್ನೂ ಓದಿ : Viral Video: ದೆಹಲಿ; ಮೆಟ್ರೋದಲ್ಲಿ ಉಗಿಯುವ ಆಟ, ಅವನ ಬಾಯಿಯಲ್ಲಿ ಈಕೆ, ಇವಳ ಬಾಯಿಯಲ್ಲಿ ಅವನು
ಈ ಕ್ರಾಸ್ವರ್ಡ್ ಎಷ್ಟು ಕೆಟ್ಟದಾಗಿ ರಚಿಸಲಾಗಿದೆ ಎನ್ನುವುದರ ಬಗ್ಗೆ ಯಾಕೆ ಯಾರೂ ಮಾತನಾಡುತ್ತಿಲ್ಲ ಎಂದಿದ್ದಾರೆ ಕೆಲವರು. ಇನ್ನೂ ಕೆಲವರು Rotten ಎಂದಿದ್ದಾರೆ. ಇನ್ನೂ ಕೆಲವರು Raiden ಎಂದಿದ್ದಾರೆ. Return ಎಂದೂ ಕೆಲವರು ಹೇಳಿದ್ದಾರೆ. ಇನ್ನೊಂದಿಷ್ಟು ಜನ Reason? ಎಂದು ಕೇಳಿದ್ದಾರೆ. ಒಂದಿಷ್ಟು ಜನ Resign. ನಿಮ್ಮ ತಲೆಯಲ್ಲಿ ಯಾವ ಶಬ್ದ ಓಡುತ್ತಿದೆ? ನೆಟ್ಟಿಗರು ಹೇಳಿದ್ದರಲ್ಲಿ ನಿಮ್ಮ ಊಹೆಯೂ ಇತ್ತಾ? ಅಥವಾ ಬೇರೆ ಪದವಿದೆಯಾ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ