ಮಕ್ಕಳನ್ನು ಸಾಮಾನ್ಯವಾಗಿ ನಾವು ಅಂಡರ್ ರೇಟ್ ಮಾಡುತ್ತೇವೆ, ಅವರ ಬದ್ಧಿಮತ್ತೆಯನ್ನು ಅಂಡರ್ ಎಸ್ಟಿಮೇಟ್ ಮಾಡುತ್ತೇವೆ. ‘ನಿಂಗೇನು ಗೊತ್ತಾಗುತ್ತೆ, ಸುಮ್ನಿರು.‘ ಅಂತ ಪೋಷಕರು ಮಕ್ಕಳನ್ನು ಗದರುವುದು ನಾವೆಷ್ಟು ಸಲ ಕೇಳಿಸಿಕೊಂಡಿಲ್ಲ? ಆದರೆ ರೆಡ್ಡಿಟ್ ನಲ್ಲಿ (Reddit) ಶೇರ್ ಆಗಿರುವ ಪೋಸ್ಟೊಂದನ್ನು ನೋಡಿದರೆ ಪೋಷಕರು ತಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಈ ಪೋಸ್ಟ್ ನಲ್ಲಿ ಪುಟಾಣಿಗಳ (small kids) ಗುಂಪೊಂದು ತಮ್ಮ ನೆರೆಮನೆಯವರ ಬಗ್ಗೆ ಅದೆಷ್ಟು ಕಾಳಜಿ (concern), ಪ್ರೀತಿ ಹೊಂದಿದ್ದಾರೆ ಅನ್ನೋದನ್ನು ಹೇಳುತ್ತದೆ. ಸುಮಾರು ಜನ ಪೋಸ್ಟ್ ನಿಂದ ಇಂಪ್ರೆಸ್ ಆಗಿದ್ದಾರೆ ಮತ್ತು ನಿಸ್ಸಂದೇಹವಾಗಿ ಅದು ನಿಮ್ಮ ಹೃದಯವನ್ನೂ ತಟ್ಟುತ್ತದೆ.
ರೆಡ್ಡಿಟ್ ನಲ್ಲಿ ಒಂದು ಪೋಸ್ಟ್ ಇದ್ದು ಅದರ ಶೀರ್ಷಿಕೆ ಹೀಗಿದೆ: ನನ್ನಮ್ಮ ವಾಸವಾಗಿರುವ ಸ್ಥಳದ ನೆರೆಹೊರೆಯಲ್ಲಿ ಸಾಕಷ್ಟು ಮಕ್ಕಳಿದ್ದಾರೆ ಮತ್ತು ನನ್ನ ಡ್ಯಾಡ್ ಮನೆಯೊಳಗೆ ಹೋಗುವುದನ್ನು ನೋಡಿದ ಬಳಿಕ ಅಮ್ಮನ ಮನೆ ಬಾಗಿಲು ಮೇಲೆ ಈ ನೋಟ್ ಬರೆದಿದ್ದಾರೆ. ನೋಟ್ ನಲ್ಲಿನ ಕೈಬರಹ ನೋಡಿದರೆ ಅದನ್ನು ಮೂರು ಮಕ್ಕಳು ಬರೆದಿರುವಂತಿದೆ. ಮಕ್ಕಳಿಗೆ ನನ್ನಮ್ಮನ ಯೋಗಕ್ಷೇಮದ ಬಗ್ಗೆ ಚಿಂತೆ ಮತ್ತು ನೋಟ್ ಬರೆದು ಹಾಕಿರುವ ಉದ್ದೇಶ ಕೂಡ ಅಷ್ಟು ಮಾತ್ರ.’
ಇದನ್ನೂ ಓದಿ: ಭಾರತದ ಪರಿಸರ ಹದಗೆಟ್ಟಿದೆ, ವಿದೇಶದಲ್ಲಿ ನೆಲೆಸಲು ಮಕ್ಕಳಿಗೆ ಸಲಹೆ ನೀಡಿದ್ದೇನೆ: ವಿವಾದಾತ್ಮಕ ಹೇಳಿಕೆ ನೀಡಿದ ಆರ್ಜೆಡಿ ನಾಯಕ
ನೋಟ್ ನಲ್ಲಿ ಹೀಗೆ ಬರೆಯಲಾಗಿದೆ: ಶ್ರೀಮತಿ ಕರೆನ್ ಅವರೇ, ಒಬ್ಬ ಅಪರಚಿತ ವ್ಯಕ್ತಿ ನಿಮ್ಮ ಮನೆಯೊಳಗೆ ಹೋಗುವುದನ್ನು ನಾವು ನೋಡಿದೆವು, ನಿಮಗೇನು ಸಮಸ್ಯೆಯಾಗಿರಲಿಕ್ಕಿಲ್ಲ ಎಂದು ತಿಳಿದುಕೊಳ್ಳುವ ಧಾವಂತ ನಮಗಿದೆ. ಸಮಸ್ಯೆಯೇನಾದರೂ ಇದ್ದರೆ ನಮ್ಮ ಅಮ್ಮನಿಗೆ ಟೆಕ್ಸ್ಟ್ ಮಾಡಿ.’ ಅದರ ಕೆಳಗೊಂದು ಫೋನ್ ನಂಬರ್ ಕೂಡ ಅವರು ಬರೆದಿರುವರಾದರೂ ನಂತರ ಅದನ್ನು ಅಳಿಸಲಾಗಿದೆ. ತಮ್ಮ ‘ಗ್ಯಾಂಗ್’ ನ ಹೆಸರು ಬರೆಯುವ ಮೂಲಕ ಅದನ್ನು ಯಾರು ಬರೆದಿದ್ದು ಅನ್ನೋದನ್ನು ಅವರು ಬಹಿರಂಗಪಡಿಸಿದ್ದಾರೆ.
ಈ ಪೋಸ್ಟನ್ನು ಶೇರ್ ಮಾಡಿದ ರೆಡ್ಡಿಟರ್ ನ ಸಂದೇಶದೊಂದಿಗೆ ಅದು ಕೊನೆಗೊಳ್ಳುತ್ತದೆ. ‘ನನ್ನ ಮಮ್ಮಿ-ಡ್ಯಾಡಿ ಒಟ್ಟಾಗಿ ಜೀವಿಸುವುದಿಲ್ಲ. ಡ್ಯಾಡಿಯೇನಾದರೂ ಮಮ್ಮಿಯ ಮನೆ ಕಡೆ ಹಾಯ್ದರೆ ಅವನು ನಿಜಕ್ಕೂ ಅಪರಿಚಿತ ಅನಿಸುತ್ತಾನೆ.’
ಪೋಸ್ಟ್ ಅದ್ಭುತವಾಗಿದೆ ತಾನೆ? ರೆಡ್ಡಿಟ್ ಬಳಕೆಕದಾರರೆಲ್ಲ ಅದರಿಂದ ಬಹಳ ಇಂಪ್ರೆಸ್ ಆಗಿದ್ದಾರೆ. ಮಕ್ಕಳ ಕಾಳಜಿ, ಕಳಕಳಿಗೆ ಬಹಳಷ್ಟು ಜನ ಪ್ರತಿಕ್ರಿಯಿಸಿದ್ದಾರೆ. ‘ಇದು ನಿಜಕ್ಕೂ ಅದ್ಭುತ! ಮಕ್ಕಳ ಗುಂಪಿನ ಬಗ್ಗೆ ಮಧುರ ಭಾವನೆ ಹುಟ್ಟುತ್ತದೆ,’ ಅಂತ ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು, ‘ಇದು ಅಮೂಲ್ಯವಾದ ಜೆಸ್ಚರ್, ನಿಮ್ಮ ತಂದೆಯ ಬಗ್ಗೆ ಕೇಳಿ ವ್ಯಥೆಯಾಯಿತು,’ ಅಂತ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Lionel Messi Biopic: ‘ಲಿಯೋನೆಲ್ ಮೆಸ್ಸಿ ಬಯೋಪಿಕ್ನಲ್ಲಿ ಅಕ್ಷಯ್ ಕುಮಾರ್ ನಟಿಸಬೇಕು’; ಮೀಮ್ಸ್ ವೈರಲ್
‘ಈ ಮಕ್ಕಳು ತಮ್ಮ ಏರಿಯಾದಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಇದನ್ನೆಲ್ಲ ಮಾಡಲು ಯಾರಾದರೂ ಅವರಿಗೆ ಸ್ಪೂರ್ತಿಯಾಗಿದ್ದರೆ ಅದು ಒಳ್ಳೆಯದೇ,’ ಅಂತ ಮೂರನೇಯವರು ಕಾಮೆಂಟ್ ಮಾಡಿದ್ದಾರೆ. ಅದಕ್ಕೊಬ್ಬರು, ‘ ಮಕ್ಕಳು ಅಪರಾಧ ಪ್ರಕರಣಗಳ ತನಿಖೆ ನಡೆಸಿ ಬಗೆಹರಿಸುತ್ತಾರೆ ಅಂತ ನಾನು ಭಾವಿಸುತ್ತೇನೆ,’ ಅಂತ ರಿಯಾಕ್ಟ್ ಮಾಡಿದ್ದಾರೆ.
ರೆಡ್ಡಿಟರ್ ಅವರ ತಂದೆ ತಾಯಿಗಳು ಈ ಪೋಸ್ಟ್ ನೋಡಿ ಹೇಗೆ ರಿಯಾಕ್ಟ್ ಮಾಡಿರಬಹುದೆಂದು ನಿಮ್ಮಲ್ಲಿ ಕುತೂಹಲ ಉಂಟಾಗಿರುತ್ತದೆ, ಹೌದು ತಾನೇ? ಅವರು ಮಾಡಿದ ಕಾಮೆಂಟ್ ಗಳು ಹೀಗಿವೆ. ರೆಡ್ಡಿಟರ್ ಅಮ್ಮ ಹೇಳಿದ್ದು: ಯಾರೋ ಬಾಗಿಲು ತಟ್ಟಿದ ಸದ್ದು ಕೇಳಿ ನಾನು ಅದನ್ನು ತೆರೆದಾಗ ಯಾರೂ ಕಾಣಿಸಲಿಲ್ಲವಾದರೂ ಬಾಗಿಲ ಮೇಲೆ ಈ ನೋಟ್ ಅಂಟಿಸಿದ್ದು ಕಾಣಿಸಿತು. ನಾನು ಹೊರಗಡೆ ಹೋಗಿ ನೋಡಿದಾಗ ಪಕ್ಕದ ಮನೆ ಆವರಣದಲ್ಲಿ ಐವರು ಪುಟಾಣಿಗಳು ನಿಂತಿದ್ದರು. ಇದನ್ನು ಮೆತ್ತಿದ್ದು ನೀವಾ? ಯಾಕೆ ಮೆತ್ತಿದ್ದು ಅಂತ ಕೇಳಿದಾಗ ಅವರು, ಹೌದು ಮೇಡಂ ನಾವೇ ಮೆತ್ತಿದ್ದು, ಒಬ್ಬ ಅಪರಚಿತ ವ್ಯಕ್ತಿ ನಿಮ್ಮ ಮನೆಯೊಳಗೆ ಪ್ರವೇಶಿಸುವುದನ್ನು ನೋಡಿದಾಗ ನಮಗೆ ಚಿಂತೆಯಾಯಿತು, ಎಂದರು. ನನ್ನ ಬದುಕಿನ ಅತ್ಯಂತ ಮಧುರ ಕ್ಷಣವಿದು.’
ರೆಡ್ಡಿಟರ್ ತಂದೆ ‘ಇದು ನಂಬಲಸದಳ ಸಂಗತಿ’ ಎಂದಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ