Viral News : ಮಹಾರಾಷ್ಟ್ರ ಎಂದರೆ ಮಿಸಳ್ ಪಾವ್ ಫಕ್ಕನೆ ಕಣ್ಮುಂದೆ ಬರುತ್ತದೆ. ಮಡಿಕೆ, ಕಡಲೆ ಅಥವಾ ಬಟಾಣಿಕಾಳುಗಳನ್ನು ನೆನೆಹಾಕಿ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಟೊಮ್ಯಾಟೋ, ಆಲೂಗಡ್ಡೆ, ಉಪ್ಪು, ಖಾರ, ಸ್ವಲ್ಪ ಮಸಾಲೆಯೊಂದಿಗೆ ಮಾಡುವ ರಸಭರಿತವಾದ ಭಾಜೀ. ಅದರ ತುಂಬಾ ಶೇವ್ ಸುರಿಯುವುದು, ನಿಂಬೆರಸ ಹಿಂಡಿಕೊಳ್ಳುವುದು, ಬನ್ಗೆ ಬೆಣ್ಣೆ ಹಚ್ಚಿ ತವಾ ಮೇಲೆ ಬೇಯಿಸಿದರೆ ಪಾವ್ ರೆಡಿ. ಬೇಕಿದ್ದರೆ ಎರಡು ತುಂಡು ಹಸೀ ಈರುಳ್ಳಿ. ಇಂಥ ರುಚಿಕರ ಮತ್ತು ಮಹಾರಾಷ್ಟ್ರಿಗರ ನಿತ್ಯದ ನಾಷ್ಟಾ ನೋಡಿದರೆ ಯಾರಿಗೆ ತಾನೆ ಇಷ್ಟವಿಲ್ಲ? ಆದರೆ ವ್ಯಕ್ತಿಯೊಬ್ಬ ಮಿಸಳ್ ಪಾವ್ ಬಗ್ಗೆ ನಕಾರಾತ್ಮಕವಾಗಿ ಟ್ವೀಟ್ ಮಾಡಿದ್ದಾನೆ. ನೆಟ್ಟಿಗರೆಲ್ಲ ಅವನಿಗೆ ಮುಗಿಬಿದ್ದಿದ್ದಾರೆ.
How is misal pav even a dish. Its just namkeen which has fallen accidentally on a very oily ghooghni.
ಇದನ್ನೂ ಓದಿ— Bodhisattwa Majumder (@thebrodhitree) January 30, 2023
ಬೋಧಿಸತ್ವ ಮಜುಂದಾರ್ ಎನ್ನುವ ವ್ಯಕ್ತಿಯೇ ಟ್ವಿಟರ್ನಲ್ಲಿ ಟೀಕಿಸಿದವರು. ‘ಮಿಸಳ್ ಪಾವ್ ಎಂದರೆ, ಅದೂ ಒಂದು ತಿನಿಸೇ? ಎಣ್ಣೆ ಬಸಿಯುವ ಉಸಳಿಯಲ್ಲಿ ದಾರಿತಪ್ಪಿ ಒಂದಷ್ಟು ಸೇವು ಬಿದ್ದರೆ ಹೇಗಿರುತ್ತೋ ಹಾಗಿದೆ ಅದು’ ಎಂದಿದ್ದಾರೆ. ನೀವು ಮುಂಬೈನಲ್ಲಿದ್ದು ಮಿಸಳ್ ಪಾವ್ ನಿಂದಿಸುತ್ತಿದ್ದೀರಿ ಎಂದಿದ್ದಾರೆ. ನೀವು ದಾದರ್ನ ಶಿವಾಜಿ ಪಾರ್ಕ್ ಬಳಿ ಇರುವ ಆಸ್ವಾದ್ ಮತ್ತು ಥಾಣೆಯಲ್ಲಿರುವ ಆಮಂತ್ರಣ್ದಲ್ಲಿ ಪಾವ್ ಭಾಜಿ ತಿಂದ ನೋಡಿ. ಆದರೆ ಮಾಮ್ಲೇದಾರ್ ಫ್ರಾಂಚೈಸಿ ಹೋಟೆಲ್ಗಳಲ್ಲಿ ತಿನ್ನಬೇಡಿ ಎಂದಿದ್ದಾರೆ ಮತ್ತೊಬ್ಬರು. ಹೀಗೆಲ್ಲ ಹೇಳಬೇಡಿ ಇದು ತುಂಬಾ ರುಚಿಯಾದ ಖಾದ್ಯ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್
ಇನ್ನೂ ಕೆಲವರು ಬೋಧಿಸತ್ವರ ಮಾತನ್ನು ಅನುಮೋದಿಸಿದ್ದಾರೆ. ಹೌದು ಇದನ್ನು ಕೆಟ್ಟದಾಗಿ ಮಾಡಿದ್ದಾರೆ ಎಂದಿದ್ದಾರೆ. ನಾನು ಪಾವ್ ಭಾಜಿ ಅಂದರೆ ಪ್ರಾಣ. ಆದರೆ ಈ ಮಿಸಳ್ ಪಾವ್ ಎಂದರೆ ಏನು ಎಂದು ಮತ್ತೊಬ್ಬರು ಕೇಳಿದ್ದಾರೆ. ಯಾಕೆ ಹೀಗೆ ಎಣ್ಣೆಗಸಿಯನ್ನು ಸರಿದುಕೊಳ್ಳುತ್ತಾರೋ ಕಾಣೆ ಎಂದಿದ್ದಾರೆ ಕೆಲವರು.
ಇದೆಲ್ಲವೂ ಮೈಮುರಿದು ತಿನ್ನುವವರಿಗೆ ಮಾತ್ರ ನಿಮ್ಮಂಥವರಿಗೆ ಅಲ್ಲ. ಎಂದು ಕೆಲವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು? ಮಹಾರಾಷ್ಟ್ರಿಯನ್ ಮಿಸಳ್ ಪಾವ್ನ ಪಾಕವಿಧಾನ ತಿಳಿದುಕೊಳ್ಳಬೇಕೆ? ಕ್ಲಿಕ್ ಮಾಡಿ
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:28 am, Wed, 1 February 23