Viral News : ಬೀಚ್ನಲ್ಲಿ ಆಹ್ಲಾದಕರ ಕ್ಷಣಗಳನ್ನು ಕಳೆಯಲು ಮನಸ್ಸು ಹಾತೊರೆಯುತ್ತದೆ ನಿಜ, ಆದರೆ ಅಲ್ಲಿರುವ ಪರಿಸರ ವಾತಾವರಣ ಶುಚಿಯಾಗಿರಬೇಕಷ್ಟೇ. ಭಾರತದಲ್ಲಿರುವ ಎಲ್ಲಾ ಬೀಚ್ಗಳು ಈ ಮಟ್ಟದಲ್ಲಿ ಶುಚಿತ್ವ ಕಾಪಾಡಿಕೊಂಡಿವೆ ಎಂದು ಹೇಳಲಾಗದು. ಆದರೆ ಒಡಿಶಾದ ಪುರಿಯಲ್ಲಿರುವ ಗೋಲ್ಡನ್ ಬೀಚ್ ಮಾತ್ರ ಈ ಪೈಕಿ ವಿಶೇಷ ಗಮನ ಸೆಳೆಯುತ್ತ ಬಂದಿದೆ. ಕಳೆದ ಮೂರು ವರ್ಷಗಳಿಂದ ಬ್ಲ್ಯೂ ಫ್ಲ್ಯಾಗ್ ಬೀಚ್ ಮಾನ್ಯತೆ ಪಡೆದಿದೆ ಎಂದು ಐಎಫ್ಎಸ್ ಅಧಿಕಾರಿ ಸುಸಾಂತ ನಂದಾ ಟ್ವೀಟ್ ಮಾಡಿದ್ದಾರೆ.
Golden beach at Puri is rated as one of the cleanest beach of India.
Also certified as the Blue flag beach,continuously for last three years.
Salutations to the ground staff for making this possible even under torchlights?? pic.twitter.com/UbQ5WgvcPx ಇದನ್ನೂ ಓದಿ— Susanta Nanda IFS (@susantananda3) February 10, 2023
ಪುರಿಯಲ್ಲಿರುವ ಈ ಗೋಲ್ಡನ್ ಬೀಚ್ನ ಸುಂದರವಾದ ಫೋಟೋಗಳನ್ನು ಗಮನಿಸಿ. ಡೆನ್ಮಾರ್ಕ್‌ನಲ್ಲಿರುವ ಫೌಂಡೇಶನ್ ಫಾರ್ ಎನ್ವಿರಾನ್ಮೆಂಟ್ ಎಜುಕೇಶನ್ (FEE) ನಿಂದ ಬ್ಲ್ಯೂ ಫ್ಲ್ಯಾಗ್ ಬೀಚ್ ಮಾನ್ಯತೆಯನ್ನು ಪಡೆದ ಈ ಬೀಚ್ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಪರಿಸರ ನಿರ್ವಹಣೆ, ಸಂರಕ್ಷಣೆ, ಸಮುದ್ರ ತೀರದಲ್ಲಿನ ಸುರಕ್ಷತೆ, ಸೇವೆ ಇತ್ಯಾದಿ 33 ಮಾನದಂಡಗಳನ್ನು ಅನುಸರಿಸಿದ್ದಕ್ಕಾಗಿ ಬ್ಲ್ಯೂ ಫ್ಲ್ಯಾಗ್ ಮಾನ್ಯತೆಯನ್ನು ಈ ಬೀಚ್ ಪಡೆದಿದೆ.
ಇದನ್ನೂ ಓದಿ : ಸೀರೆಯುಟ್ಟು ಜಿಮ್ ವರ್ಕೌಟ್ ಮಾಡುತ್ತಿರುವ ಮಹಿಳೆಯ ವಿಡಿಯೋ ವೈರಲ್; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
ಎರಡು ದಿನಗಳ ಹಿಂದೆ ಈ ಪೋಸ್ಟ್ ಟ್ವೀಟ್ ಮಾಡಿದ್ದಾರೆ ಸುಸಾಂತ. ಈತನಕ ಸುಮಾರು 18,000 ಜನರು ನೋಡಿದ್ದಾರೆ. 600 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಸಮುದ್ರ ತೀರದಲ್ಲಿ ಮರಳನ್ನು ಗುಡಿಸುತ್ತಾರಾ? ಎಂಥಾ ಅದ್ಭುತ ಎಂದಿದ್ದಾರೆ ಒಬ್ಬರು. ನಿಜಕ್ಕೂ ಈ ಬೀಚ್ನ ದೃಶ್ಯಗಳು ಬಹಳ ಸುಂದರವಾಗಿವೆ. ಮುಂದಿನ ರಜೆಗೆ ನಾನು ಪ್ಲ್ಯಾನ್ ಮಾಡುತ್ತೇನೆ ಎಂದಿದ್ದಾರೆ ಅನೇಕರು.
ಇದನ್ನೂ ಓದಿ : ವರ್ಷದ ಅಪ್ಪ ಪ್ರಶಸ್ತಿ ಈ ಅಪ್ಪನಿಗೇ! ವೈರಲ್ ಆದ ವಿಡಿಯೋ
ಯಾಕೆ ಇವರು ಬ್ಯಾಟರಿ ಆನ್ ಮಾಡಿದ್ದಾರೆ? ಮೊಟ್ಟೆಯಲ್ಲಿರುವ ಆಮೆಯ ಮರಿಗಳಿಗೆ ತೊಂದರೆ ಆಗುವುದಿಲ್ಲವೆ? ಎಂದು ಕೇಳಿದ್ದಾರೆ ಮತ್ತೊಬ್ಬರು. ಇಂಥ ಸ್ವಚ್ಛತೆಯನ್ನು ಭಾರತದ ಎಲ್ಲಾ ಬೀಚ್ಗಳೂ ಅನುಸರಿಸಬೇಕು ಎಂದು ಅನೇಕರು ಹೇಳಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:18 am, Tue, 14 February 23