ನವದೆಹಲಿ: ಚೀನಾದ 13 ವರ್ಷದ ಬಾಲಕಿ ಲೀ ಮುಝಿ, ಎಂಬಾಕೆ ಭರತನಾಟ್ಯ ತಜ್ಞೆಯಾದ ಲೀಲಾ ಸ್ಯಾಮ್ಸನ್ ಮತ್ತು ಭಾರತೀಯ ರಾಜತಾಂತ್ರಿಕರನ್ನು ಒಳಗೊಂಡಂತೆ ಬೀಜಿಂಗ್‌ನಲ್ಲಿ ಪ್ರೇಕ್ಷಕರನ್ನು ಮೆಚ್ಚಿಸುವ ಮೂಲಕ ಭರತನಾಟ್ಯ ರಂಗಪ್ರವೇಶವನ್ನು ಪೂರ್ಣಗೊಳಿಸುವ ಮೂಲಕ ಚೀನಾದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ ಚೀನಾದಲ್ಲಿ ಭರತನಾಟ್ಯ ರಂಗಪ್ರವೇಶವನ್ನು ಪೂರ್ಣಗೊಳಿಸಿದ ಮೊದಲಿಗಳು ಈಕೆ.
ಈ ಮೈಲಿಗಲ್ಲು ಚೀನಾದಲ್ಲಿ ಭಾರತೀಯ ನೃತ್ಯ ಪ್ರಕಾರದ ಬೆಳೆಯುತ್ತಿರುವ ಉಪಸ್ಥಿತಿಯನ್ನು ಗುರುತಿಸಿದೆ. ಲೀ ಮುಝಿಯವರ ಚೊಚ್ಚಲ ಭರತನಾಟ್ಯ ಪ್ರದರ್ಶನವು ಆಗಸ್ಟ್ 11ರಂದು ನಡೆಯಿತು. ಇದನ್ನು ಭರತನಾಟ್ಯ ತಜ್ಞರಾದ ಲೀಲಾ ಸ್ಯಾಮ್ಸನ್, ಭಾರತೀಯ ರಾಜತಾಂತ್ರಿಕರು ಮತ್ತು ಬೀಜಿಂಗ್‌ನಲ್ಲಿನ ಚೀನೀ ಪ್ರೇಕ್ಷಕರು ವೀಕ್ಷಿಸಿದರು. ಸುಮಾರು ಎರಡು ಗಂಟೆಗಳ ಕಾಲ ಪ್ರದರ್ಶನ ನಡೆಯಿತು.
ಇದನ್ನೂ ಓದಿ: Video Viral: ಚಲಿಸುತ್ತಿರುವ ಸ್ಕೂಟರ್ ಮೇಲೆ ನಿಂತು ಡ್ಯಾನ್ಸ್ ಮಾಡಿದ ಮಹಿಳೆ; ವಿಡಿಯೋ ಇಲ್ಲಿದೆ ನೋಡಿ
ರಂಗಪ್ರವೇಶ ದಕ್ಷಿಣ ಭಾರತದ ಪುರಾತನ ನೃತ್ಯ ಸಂಪ್ರದಾಯವಾಗಿದ್ದು, ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಶಿಕ್ಷಕರು, ತಜ್ಞರು ಮತ್ತು ಪ್ರೇಕ್ಷಕರ ಮುಂದೆ ಪ್ರದರ್ಶಿಸುತ್ತಾರೆ. ಈ ಪ್ರದರ್ಶನದ ನಂತರ, ಅವರು ಸ್ವತಂತ್ರವಾಗಿ ನೃತ್ಯ ನಿರ್ವಹಿಸಲು ಅಥವಾ ಇತರರಿಗೆ ಕಲಿಸಲು ಅನುಮತಿ ಸಿಗುತ್ತದೆ.
VIDEO | Lei Muzi, a 13-year-old school student, scripted history when she performed Bharatanatyam “Arangetram” in China, a landmark in the journey of the ancient Indian dance form that is gaining popularity in the neighbouring country. pic.twitter.com/OaOlc9EEhh
— Press Trust of India (@PTI_News) August 13, 2024
ದುಡು ಎಂದೂ ಕರೆಯಲ್ಪಡುವ ಲೀ ಮುಝಿ 2014ರಲ್ಲಿ ತಮ್ಮ ಭರತನಾಟ್ಯ ಪ್ರಯಾಣವನ್ನು ಪ್ರಾರಂಭಿಸಿದರು. ಅವರು ಆಗಸ್ಟ್ ನಂತರ ಚೆನ್ನೈನಲ್ಲಿ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಅವರ ಗುರು ಜಿನ್ ಶಾನ್ ಶಾನ್. ಅವರು ಚೀನೀ ಮೂಲದ ಮೊದಲ ಯಶಸ್ವಿ ಭರತನಾಟ್ಯ ನೃತ್ಯಗಾರರಲ್ಲಿ ಒಬ್ಬರು. ಜಿನ್ ಸ್ವತಃ ಹೆಸರಾಂತ ಚೈನೀಸ್ ನರ್ತಕಿ ಜಾಂಗ್ ಜುನ್ ಅವರಿಂದ ತರಬೇತಿ ಪಡೆದಿದ್ದರು. ತನ್ನ ಪಾಠಗಳನ್ನು ಪ್ರಾರಂಭಿಸಿದ ನಂತರ, ಲೀ ತ್ವರಿತವಾಗಿ ನೃತ್ಯ ಪ್ರಕಾರದ ಬಗ್ಗೆ ಆಳವಾದ ಪ್ರೀತಿಯನ್ನು ಬೆಳೆಸಿಕೊಂಡಳು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ