Video Viral: ಚಲಿಸುವ ಟ್ರಕ್‌ನೊಂದಿಗೆ ಇಬ್ಬರು ಹುಡುಗರು ಅಪಾಯಕಾರಿ ಸ್ಟಂಟ್​​

ಒಬ್ಬ ಹುಡುಗ ಸ್ಕೇಟಿಂಗ್ ಮಾಡುತ್ತಾ ಬಂದು ಟ್ರಕ್‌ನ ಹಿಂಭಾಗವನ್ನು ಹಿಡಿದು ಚಲಿಸುತ್ತಿದ್ದರೆ, ಇನ್ನೊಬ್ಬ ಈತನ ಸಾಹಸವನ್ನು ವಿಡಿಯೋ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Video Viral: ಚಲಿಸುವ ಟ್ರಕ್‌ನೊಂದಿಗೆ ಇಬ್ಬರು ಹುಡುಗರು ಅಪಾಯಕಾರಿ ಸ್ಟಂಟ್​​
Follow us
ಅಕ್ಷತಾ ವರ್ಕಾಡಿ
|

Updated on: Aug 14, 2024 | 6:04 PM

ಚಲಿಸುತ್ತಿರುವ ಟ್ರಕ್‌ನ ಹಿಂದೆ ಇಬ್ಬರು ಹುಡುಗರು ಸ್ಕೇಟಿಂಗ್ ಸಾಹಸ ಪ್ರದರ್ಶಿಸುತ್ತಿರುವ ಭಯಾನಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​​ ಆಗಿದೆ. ಸ್ಕೇಟ್‌ಬೋರ್ಡ್‌ಗಳನ್ನು ಧರಿಸಿರುವ ಇಬ್ಬರು ಹುಡುಗರು ವೇಗವಾಗಿ ಬರುತ್ತಿರುವ ಟ್ರಕ್‌ನ ಹಿಂಭಾಗವನ್ನು ಹಿಡಿದು ನೇತಾಡುತ್ತಾ ಹೋಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಘಟನೆ ಬಾಂಗ್ಲಾದೇಶದ ಢಾಕಾದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ವೈರಲ್​​ ಆಗಿರುವ ವಿಡಿಯೋದಲ್ಲಿ ಒಬ್ಬ ಹುಡುಗ ಸ್ಕೇಟಿಂಗ್ ಮಾಡುತ್ತಾ ಬಂದು ಟ್ರಕ್‌ನ ಹಿಂಭಾಗವನ್ನು ಹಿಡಿದು ಚಲಿಸುತ್ತಿದ್ದರೆ, ಇನ್ನೊಬ್ಬ ಈತನ ಸಾಹಸವನ್ನು ವಿಡಿಯೋ ಮಾಡುತ್ತಿದ್ದಾನೆ. ಸದ್ಯ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಇಬ್ಬರು ಯುವತಿಯರ ಜೊತೆ ಕಾರಿನಲ್ಲಿ ಯುವಕನ ಸರಸ ಸಲ್ಲಾಪ; ವಿಡಿಯೋ ವೈರಲ್​

@Ruksar_Khan7 ಎಂಬ ಟ್ವಿಟರ್​ ಖಾತೆಯಲ್ಲಿ ಆಗಸ್ಟ್​​ 12ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. “ಇದು ಸಂಪೂರ್ಣ ಬೇಜವಾಬ್ದಾರಿಯುತ ಕೃತ್ಯ” ಎಂದು ಸಾಕಷ್ಟು ಜನರು ಕಾಮೆಂಟ್​​ ಮಾಡಿದ್ದಾರೆ. ಈ ಬಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ