Viral Video: 75 ವರ್ಷದ ಮಗನ ಹಾಡಿಗೆ ತಾಳ ಹಾಕಿದ 105 ವರ್ಷದ ತಂದೆ; ಇಂಟರ್ನೆಟ್ ಮೆಚ್ಚಿದ ವಿಡಿಯೋ

|

Updated on: Feb 18, 2023 | 7:23 PM

75 ವರ್ಷದ ವ್ಯಕ್ತಿಯೊಬ್ಬ ತನ್ನ 104 ವರ್ಷದ ತಂದೆಗಾಗಿ ಹಾಡನ್ನು ಹಾಡಿರುವ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಂದೆ ಮತ್ತು ಮಗನ ಬಾಂಧವ್ಯ ಸಾವಿರಾರು ನೆಟ್ಟಿಗರ ಹೃದಯ ಗೆದ್ದಿದೆ.

Viral Video: 75 ವರ್ಷದ ಮಗನ ಹಾಡಿಗೆ ತಾಳ ಹಾಕಿದ 105 ವರ್ಷದ ತಂದೆ; ಇಂಟರ್ನೆಟ್ ಮೆಚ್ಚಿದ ವಿಡಿಯೋ
104ವರ್ಷದ ತಂದೆಗಾಗಿ ಹಾಡು ಹಾಡಿದ 75 ವರ್ಷದ ಮಗ
Follow us on

ವಯಸ್ಸಾದರೆ ಸಾಕು ಹೆತ್ತ ತಂದೆ-ತಾಯಿಯನ್ನೇ ಆಶ್ರಮಕ್ಕೆ ಕಳುಹಿಸುವ ನೀಚ ಮಕ್ಕಳಿಗೆ ಈ ವಿಡಿಯೋ ಮಾದರಿಯಾಗಿದೆ. ವ್ಯಕ್ತಿಯೊಬ್ಬರು ತನ್ನ ತಂದೆಗಾಗಿ ಹಾಡು ಹಾಡಿ ಮನರಂಜಿಸುವ ವಿಡಿಯೋ ಇದಾಗಿದೆ. ಇಲ್ಲಿ ಗಮನಿಸಬೇಕಾಗಿರುವುದೇನೆಂದರೆ, ತಂದೆ-ಮಗನ ವಯಸ್ಸು. ಹೌದು, ಸಣ್ಣ ಮಕ್ಕಳು ತಂದೆಗಾಗಿ ಹಾಡು ಹಾಡುವುದು ಸಾಮಾನ್ಯ. ಆದರೆ ಈ ವಿಡಿಯೋದಲ್ಲಿ ಇರುವ ತಂದೆ-ಮಗನ ವಯಸ್ಸು ಕ್ರಮವಾಗಿ 104 ಮತ್ತು 75. ಹಾಸಿಗೆ ಮೇಲೆ ಮಲಗಿರುವ 104 ವರ್ಷದ ತನ್ನ ತಂದೆಗಾಗಿ 75 ವರ್ಷದ ಮಗ ಶಿಳ್ಳೆ ಹೊಡೆದು ಮನರಂಜಿಸಿ ಕೊನೆಯಲ್ಲಿ ತಂದೆಗಾಗಿ ಹಾಡು ಹಾಡುವುದನ್ನು ವಿಡಿಯೋದಲ್ಲಿ (Viral Video) ಕಾಣಬಹುದು. ಸದ್ಯ ಈ ವಿಡಿಯೋ ನೆಟ್ಟಿಗರ ಮನಗೆದ್ದಿದ್ದು, ಭಾರೀ ವೈರಲ್ ಆಗುತ್ತಿದೆ.

Tweet-today ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೀ ಹಂಚಿಕೊಳ್ಳಲಾಗಿದ್ದು, “ತಂದೆಗೆ 100+, ಮಗನ ವಯಸ್ಸು 75. ಮುಂಬರುವ ಪೀಳಿಗೆಯು ಅಂತಹ ಸಂಬಂಧಗಳನ್ನು ಉಳಿಸಿಕೊಳ್ಳಲು ಸಾಧ್ಯವೇ” ಎಂದು ವೀಡಿಯೊದಲ್ಲಿ ಶೀರ್ಷಿಕೆ ಬರೆಯಲಾಗಿದೆ. ಎರಡು ದಿನಗಳ ಹಿಂದೆ ಹಂಚಿಕೊಂಡು ಈ ವಿಡಿಯೋ ವೈರಲ್ ಪಡೆದು ಇದೀಗ 4.62 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು, 15 ಸಾವಿರಕ್ಕೂ ಅಧಿಕ ಲೈಕ್​ಗಳು ಬಂದಿವೆ.

ಇದನ್ನೂ ಓದಿ: ಗೋಣಿಚೀಲದ ಪಲಾಝೋಗೆ ರೂ. 60,000! ಹೊಗ್ಗೋ ಮಾರಾಯಾ ನಾ ಫ್ರೀ ಕೊಡ್ತೀನಿ ಬಾ

ಶಿಳ್ಳೆ ಮೂಲಕ ಹಾಡು ಹೇಳುತ್ತೇನೆ, ಕಂಡುಹಿಡಿಯುವಂತೆ ಮಗ ತಂದೆಗೆ ಹೇಳುತ್ತಾನೆ. ಸೂಕ್ಷ್ಮವಾಗಿ ಗಮನಿಸಿದ ತಂದೆ ಹಾಡಿನ ಹೆಸರು ಹೇಳುತ್ತಾರೆ. ಈ ವೇಳೆ ಮಗ ಸಹಿತ ಅಲ್ಲಿದ್ದವರು ಸಂತೋಷದಿಂದ ನಗುತ್ತಾರೆ. ನಂತರ ಆ ಹಾಡನ್ನು ತಂದೆಗಾಗಿ ಹಾಡುತ್ತಾರೆ. ಇನ್ನು, ಮಗ ಹಾಡುವುದನ್ನು ಕೇಳಿ ತಂದೆ ಕೈಗಳಿಂದ ತಾಳ ಹಾಕುವುದನ್ನು ವಿಡಿಯೋದಲ್ಲಿ ನೋಡಬಹುದು.

ಇನ್ನು ವಿಡಿಯೋ ನೋಡಿ ಕಾಮೆಂಟ್ ಮಾಡಿದ ಜಗನ್ನಾಥನ್ ಎಂಬವರು, ಈ ವಿಡಿಯೋ ತನ್ನ ಕುಟುಂಬದ್ದು ಎಂದು ಹೇಳಿಕೊಂಡಿದ್ದಾರೆ. “ಧನ್ಯವಾದಗಳು – ಅವರು ನನ್ನ ತಂದೆ. ಅವರಿಗೆ 104 ವರ್ಷ. ಜನವರಿ 19 ರಂದು ನಾವು ಅವರ 105 ನೇ ಹುಟ್ಟುಹಬ್ಬವನ್ನು ಆಚರಿಸಿದ್ದೇವೆ. ನನ್ನ ಸಹೋದರರು ಅವರೊಂದಿಗೆ ಇದ್ದಾರೆ. ನನಗೆ 74 ವರ್ಷ. ಈ ವರ್ಷ ಜನವರಿ 17 ರಂದು ನಾನು ನನ್ನ 75ನೇ ಹುಟ್ಟುಹಬ್ಬವನ್ನು ಆಚರಿಸಿದೆ” ಅವರು ಹೇಳಿಕೊಂಡಿದ್ದಾರೆ. ವಿಡಿಯೋ ನೋಡಿದ ಒಂದಷ್ಟು ಮಂದಿ ತಂದೆ-ಮಗನ ಬಾಂಧವ್ಯವನ್ನು ಹೊಗಳಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published On - 6:49 pm, Sat, 18 February 23