AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥೈಲ್ಯಾಂಡ್​ನ ಬ್ಲ್ಯಾಕ್​ ನೂಡಲ್ಸ್​; ಅಯ್ಯಯ್ಯೋ ಕೊರೊನಾವೈರಸ್​ ಎನ್ನುತ್ತಿರುವ ನೆಟ್ಟಿಗರು

Black Noodles : ಅಣ್ಣಾ, ಇದು ನೂಡಲ್ಸ್ ಅಲ್ಲವೇ ಅಲ್ಲ, ಪ್ಲಾಸ್ಟಿಕ್ ಅಥವಾ ರಬ್ಬರ್​. ಎಲ್ಲರೂ ಇದನ್ನು ತಿಂದು ಬೂಮರ್ಯಾಂಗ್​ ಆಡೋಣವೆ? ಎನ್ನುತ್ತಿದ್ಧಾರೆ ನೆಟ್ಟಿಗರು. ಸ್ಕ್ವಿಡ್​ ಇಂಕ್​ ನೂಡಲ್ಸ್​ ಹೇಗೆ ತಯಾರಿಸುತ್ತಾರೆ ನೋಡಿ ವಿಡಿಯೋ.

ಥೈಲ್ಯಾಂಡ್​ನ ಬ್ಲ್ಯಾಕ್​ ನೂಡಲ್ಸ್​; ಅಯ್ಯಯ್ಯೋ ಕೊರೊನಾವೈರಸ್​ ಎನ್ನುತ್ತಿರುವ ನೆಟ್ಟಿಗರು
ಥೈಲ್ಯಾಂಡ್​ನ ಬೀದಿಯಲ್ಲಿ ಬ್ಲ್ಯಾಕ್ ನೂಡಲ್ಸ್​
TV9 Web
| Updated By: ಶ್ರೀದೇವಿ ಕಳಸದ|

Updated on:Feb 18, 2023 | 1:28 PM

Share

Viral Video : ನೂಡಲ್ಸ್ ಎಂದಾಗ ನಿಮ್ಮ ಕಣ್ಣಮುಂದೆ ಬರುವ ಬಣ್ಣಗಳು ಬಿಳಿ, ಕೆನೆಬಣ್ಣ, ತಿಳಿ ಕಂದು, ತಿಳಿ ಹಸಿರು, ತಿಳೀ ಹಳದಿ, ತಿಳಿ ಕೇಸರಿ. ಆದರೆ ಕಪ್ಪು? ಕಪ್ಪು ನೂಡಲ್ಸ್​ ಅನ್ನು ಈತನಕ ನೀವು ಯಾರಾದರೂ ಕಲ್ಪಿಸಿಕೊಂಡಿದ್ದಿದೆಯೇ? ಹಾಗಿದ್ದರೆ ಈಗ ಪ್ರತ್ಯಕ್ಷ ನೋಡಿಬಿಡಿ. ಥೈಲ್ಯಾಂಡ್​ನ ರಸ್ತೆಬದಿ ಅಂಗಡಿಯಲ್ಲಿ ಸಿಗುತ್ತದೆ ಈ ಕಪ್ಪು ನೂಡಲ್ಸ್​. ಈ ವಿಡಿಯೋ ನೋಡಿದ ನೆಟ್ಟಿಗರು ಇದು ಕೊರೊನಾ ವೈರಸ್​ ಎಂದು ಅಸಹ್ಯಪಟ್ಟುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Our Collection (@ourcollecti0n)

ಥೈಲ್ಯಾಂಡ್​ಗೆ ಹೋದಾಗ ಅಲ್ಲಿಯ ಬೀದಿಗಳನ್ನು ಸುತ್ತಲು ಹೋದರೆ ಖಂಡಿತ ನೀವು ನೂಡಲ್ಸ್​ ಸವಿದಿರುತ್ತೀರಿ. ಅಕಸ್ಮಾತ್ ಮುಂದಿನ ದಿನಗಳಲ್ಲಿ ಹೋಗುವ ಇರಾದೆ ಇದ್ದರೆ ಅಲ್ಲಿಯ ನೂಡಲ್ಸ್​ ತಿನ್ನುವುದು ನಿಮ್ಮ ಲಿಸ್ಟ್​ನಲ್ಲಿರುತ್ತದೆ. ಆದರೆ ಈ ವಿಡಿಯೋದಲ್ಲಿರುವ ಸ್ಕ್ವಿಡ್​ ಇಂಕ್​ ನೂಡಲ್ಸ್ ನೋಡಿ ನಿಮಗೇನಾದರೂ ಇದನ್ನು ತಿನ್ನುವ ಆಸಕ್ತಿ ಹುಟ್ಟೀತೇ? ಏಕೆಂದರೆ ನೆಟ್ಟಿಗರು ಅದರಲ್ಲೂ ಭಾರತೀಯರು ಇದನ್ನು ನೋಡಿ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದಾರೆ.

ಇದನ್ನೂ ಓದಿ : ‘ಎಂಬಿಎ ಚಾಯ್​ವಾಲಾ’ ರೂ. 90 ಲಕ್ಷದ ಮರ್ಸಿಡೀಝ್​ ಕಾರು ಖರೀದಿಸಿದ ವಿಡಿಯೋ ವೈರಲ್

ರಸ್ತೆಬದಿಯ ವ್ಯಾಪಾರಿ ಮಹಿಳೆಯೊಬ್ಬರು ತರಕಾರಿ, ಮಸಾಲೆ, ಹರ್ಬ್ಸ್​, ಸೀಗಡಿಗಳೊಂದಿಗೆ ಕಪ್ಪು ನೂಡಲ್ಸ್ ಹಾಕಿ ಬೇಯಿಸುವುದನ್ನು ನೋಡುತ್ತಿದ್ದರೆ ಎಂಥವರಿಗೂ ಹೊಟ್ಟೆಯಲ್ಲಿ ಮಳಮಳಿಸಿದ ಹಾಗೆ ಆಗುತ್ತದೆ. ಆದರೆ ಇಲ್ಲಿಯವರಿಗೆ ಇದು ಸಹಜವಾದ ಆಹಾರ. ಆದರೆ ನೆಟ್ಟಿಗರು ಮನಬಂದಂತೆ ತಮಾಷೆ ಮಾಡುತ್ತಿದ್ದಾರೆ.

ಇದನ್ನೂ ಓದಿ : ತಮಿಳುನಾಡಿನ ಮಲ್ಲಿಗೆಗೆ ಮಾರುಹೋದ ಲಂಡನ್​ ಪತ್ರಕರ್ತೆಯ ವಿಡಿಯೋ ವೈರಲ್

ಅಣ್ಣಾ ಇದು ನೂಡಲ್ಸ್ ಅಲ್ಲವೇ ಅಲ್ಲ, ಇದು ಪ್ಲಾಸ್ಟಕ್​ ಅಥವಾ ರಬ್ಬರ್​. ಎಲ್ಲರೂ ಇದನ್ನು ತಿಂದು ಬೂಮರ್ಯಾಂಗ್​ ಆಡೋಣ ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ಇದು ಕಬ್ಬಿಣದಿಂದ ಮಾಡಿದ ನೂಡಲ್ಸ್​ ಎಂದುಕೊಂಡೆ ಎಂದು ಮತ್ತೊಬ್ಬರು. ಕೊರೊನಾ ವೈರಸ್​​ನಿಂದ ಕೂಡಿದ ವಿಷಕಾರಿ ನೂಡಲ್ಸ್​ ಇವು ಎಂದು ಮಗದೊಬ್ಬರು ಹೇಳಿದ್ದಾರೆ.

ಈತನಕ ಮೇಲಿನ ವಿಡಿಯೋ ಅನ್ನು 6 ಮಿಲಿಯನ್​ ಜನರು ನೋಡಿದ್ದಾರೆ. 1 ಲಕ್ಷಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸಾವಿರಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ.

ಅಷ್ಟಕ್ಕೂ ಸ್ಕ್ವಿಡ್​ ಇಂಕ್​ ನೂಡಲ್ಸ್​ ಎಂದರೇನು? TasteAtlas.com ಪ್ರಕಾರ, ಇಟಲಿಯ ಸಿಸಿಲಿಯಾದ ವಿಶಿಷ್ಟ ಸ್ಪಗೆಟಿ ಖಾದ್ಯ. ಇದು ಇಲ್ಲಿಯ ಅತ್ಯಂತ ಪ್ರಸಿದ್ಧ ಖಾದ್ಯಗಳಲ್ಲಿ ಒಂದು. ಸೀಗಡಿ, ಬೆಳ್ಳುಳ್ಳಿ, ಆಲೀವ್​, ಬಿಳಿ ವೈನ್​, ಸ್ಕ್ವಿಡ್​ ಇಂಕ್ ಸ್ಪಗೆಟಿ ಹಾಕಿ ಪಾಸ್ತಾ ಸಾಸ್​ನಲ್ಲಿ ಬೇಯಿಸುತ್ತಾರೆ. ಸ್ಕ್ವಿಡ್​ ಇಂಕ್​ ಸ್ಪಗೆಟಿ ತಯಾರಿಸುವಾಗ ಹಿಟ್ಟಿನಲ್ಲಿಯೇ ಇಂಕ್​ ಬೆರೆಸಿರುತ್ತಾರೆ. ಅದಕ್ಕೆ ಸ್ಪೆಗೆಟಿ ಕಪ್ಪಾಗಿ ಕಾಣುತ್ತವೆ.

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ

Published On - 1:17 pm, Sat, 18 February 23