ಮದುವೆ ಸಂಭ್ರಮದಲ್ಲಿ ಬಾಲಕಿಯ ಎನರ್ಜೆಟಿಕ್ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಪುಟ್ಟ ಬಾಲಕಿಯ ಪ್ರತಿಭೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಈ ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. ಕೆಲವರು ಆಕೆಯ ಆತ್ಮವಿಶ್ವಾಸವನ್ನು ಮೆಚ್ಚಿದರೆ, ಇನ್ನು ಕೆಲವರು ಆಕೆಯ ಭವಿಷ್ಯಕ್ಕಾಗಿ ಶುಭ ಹಾರೈಸಿದರು. ಪುಟ್ಟ ಬಾಲಕಿಯ ಎನರ್ಜೆಟಿಕ್ ಡ್ಯಾನ್ಸ್ ವಿಡಿಯೋ ಇಲ್ಲಿದೆ ನೋಡಿ:
ಹರ್ಯಾನ್ವಿ ಹಾಡಿಗೆ ಸಕ್ಕತ್ತ್ ಆಗಿ ಹೆಜ್ಜೆ ಹಾಕುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹರಿಯಾಣ್ವಿ ಭಾಷೆಯ 52 ಗಜ್ ಕಾ ದಮನ್ ಹಾಡಿಗೆ ಈಗಾಗಲೇ ಸಾಕಷ್ಟು ಜನರು ಸ್ಟೆಪ್ ಹಾಕಿದ್ದು, ಆದರೆ ಈ ಪುಟ್ಟ ಹುಡುಗಿಯ ನೃತ್ಯ ಮದುವೆ ಸಮಾರಂಭದ ಹೊರತಾಗಿಯೂ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಜನರ ಮನ ಗೆದ್ದಿದೆ. ಆಕೆಯ ಡಾನ್ಸ್ಗೆ ಮೆಚ್ಚಿ ಸಾಕಷ್ಟು ಮದುವೆಗೆ ಬಂದ ಜನರು ಮೆಚ್ಚುಗೆಯ ಸಂಕೇತವಾಗಿ ನಗದು ನೀಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಇದನ್ನೂ ಓದಿ: ಆಕೆ ನೀಡಿದ ಸೇವೆ, ಪ್ರೀತಿ, ಶಕ್ತಿಗಾಗಿ 1.75 ಕೋಟಿ ರೂ. ವಿಚ್ಛೇದನ ಪರಿಹಾರ ನೀಡಿ, ಕೋರ್ಟ್ ಖಡಕ್ ಆದೇಶ
ಒಂದು ತಿಂಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋ ಈಗಾಗಲೇ 1.3 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಜೊತೆಗೆ 82 ಸಾವಿರ ಲೈಕ್ ಹಾಗೂ 832 ಕಾಮೆಂಟ್ಗಳನ್ನು ಕೂಡ ಗಳಿಸಿದೆ. ಕೆಲವರು ಆಕೆಯ ಆತ್ಮವಿಶ್ವಾಸವನ್ನು ಮೆಚ್ಚಿದರೆ, ಇನ್ನು ಕೆಲವರು ಆಕೆಯ ಭವಿಷ್ಯಕ್ಕಾಗಿ ಶುಭ ಹಾರೈಸಿದರು. ಇಂದು ಸಾಮಾಜಿಕ ಜಾಲತಾಣಗಳು ಸಾಕಷ್ಟು ಪ್ರತಿಭೆಗಳನ್ನು ಲಕ್ಷಾಂತರ ಜನರನ್ನು ತಲುಪುವಲ್ಲಿ ಸಹಾಯಕವಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:15 pm, Thu, 9 March 23