ಹೆತ್ತ ತಾಯಿಯ ಪ್ರೀತಿ ಸದಾ ತನ್ನ ಮಕ್ಕಳ ಮೇಲೆ ನೆರಳಾಗಿ ಕಾಯುತ್ತದೆ. ಇದು ಕೇವಲ ಮನುಷ್ಯರಲ್ಲಿ ಮಾತ್ರ ಸೀಮಿತವಾಗಿಲ್ಲ. ಇದಕ್ಕೊಂದು ಉತ್ತಮ ನಿದರ್ಶನವೆಂಬಂತೆ ಘಟನೆಯೊಂದು ನಡೆದಿದೆ. ಹೌದು ವ್ಯಕ್ತಿಗಳಿಬ್ಬರು ನವಿಲಿನ ಮೊಟ್ಟೆ ಕದಿಯುವ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದಾರೆ. ತನ್ನ ಮೊಟ್ಟೆ ಕದಿಯಲು ಬಂದ ಇಬ್ಬರಿಗೆ ತಾಯಿ ನವಿಲಿ ಸರಿಯಾಗಿ ಪಾಠ ಕಲಿಸಿದೆ. ಈ ವಿಡಿಯೋ ಇದೀಗಾ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ.
They deserved more! ?
— The Figen (@TheFigen_) April 17, 2023
ಇದನ್ನೂ ಓದಿ: ಟಿಕ್‌ಟಾಕ್ ಚಾಲೆಂಜ್ ಸ್ವೀಕರಿಸಿ ಸಾವನ್ನಪ್ಪಿದ ಬಾಲಕ
ವಿಡಿಯೋದಲ್ಲಿ ನವಿಲಿನ ಗೂಡಿನಿಂದ ಮೊಟ್ಟೆ ಕದಿಯಲು ವ್ಯಕ್ತಿಯೊಬ್ಬ ಮರ ಹತ್ತಿರುವುದನ್ನು ಕಾಣಬಹುದು. ಗೂಡಿನಿಂದ ಒಂದೊಂದಾಗಿ ಮೊಟ್ಟೆಗಳನ್ನು ತೆಗೆದು ಕೆಳಗಿರುವ ವ್ಯಕ್ತಿಗೆ ನೀಡುತ್ತಿರುವುದನ್ನು ಕಾಣಬಹುದು. ಇದಾದ ಕೆಲವೇ ಹೊತ್ತಿನಲ್ಲಿ ತಾಯಿ ನವಿಲು ಬಂದು ಇವರ ಮೇಲೆ ದಾಳಿ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ದಿ ಫಿಗೆನ್ ಎಂಬ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, ಲಕ್ಷಾಂತರ ವೀಕ್ಷಣೆ ಕಂಡಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಯಾವಾತ್ತಿಗೂ ತಾಯಿ ಮಗುವಿಗೆ ರಕ್ಷಾಕವಚವಾಗಿರುತ್ತದೆ ಎಂದು ಸಾಕಷ್ಟು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಹುಚ್ಚು ಸಾಹಸಕ್ಕೆ ನವಿಲು ತಕ್ಕ ಪಾಠ ಕಲಿಸಿದೆ ಎಂದು ಮತ್ತೊಂದು ಬಳಕೆದಾರರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:31 am, Wed, 19 April 23