ನಡು ರಸ್ತೆಯಲ್ಲಿ ಕಾರಿನ ಮೇಲೆ ಹತ್ತಿ ಮಹಿಳೆಯ ವಿಚಿತ್ರ ವರ್ತನೆ; ವಿಡಿಯೋ ಇಲ್ಲಿದೆ ನೋಡಿ

|

Updated on: Jun 09, 2023 | 10:41 AM

ಸೋಶಿಯಲ್​​ ಮೀಡಿಯಾಗಳಲ್ಲಿ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಆಕೆಯ ಕುಡಿದ ಮತ್ತಿನಲ್ಲಿರಬೇಕು, ಇಲ್ಲದಿದ್ದರೆ ಮಾನಸಿಕ ಅಸ್ವಸ್ಥೆಯಾಗಿರಬಹುದು ಎಂದು ಕಾಮೆಂಟ್​​ ಮಾಡಿದ್ದಾರೆ.

ನಡು ರಸ್ತೆಯಲ್ಲಿ ಕಾರಿನ ಮೇಲೆ ಹತ್ತಿ ಮಹಿಳೆಯ ವಿಚಿತ್ರ ವರ್ತನೆ; ವಿಡಿಯೋ ಇಲ್ಲಿದೆ ನೋಡಿ
ಕಾರಿನ ಮೇಲೆ ಹತ್ತಿ ಮಹಿಳೆಯ ವಿಚಿತ್ರ ವರ್ತನೆ
Image Credit source: Twitter
Follow us on

ವಾರಣಾಸಿ: ನಗರದ ಮಾಂಡುವಾಡಿಹ್ ಕ್ರಾಸ್‌ರೋಡ್‌ಗೆ ಸಮೀಪವಿರುವ ನಡು ರಸ್ತೆಯಲ್ಲಿ ವಿದೇಶಿ ಮಹಿಳೆಯೊರ್ವಳು ಕಾರಿನ ಟಾಪ್​​​ ಮೇಲೆ ಹತ್ತಿ ವಿಚಿತ್ರವಾಗಿ ವರ್ತಿಸುತ್ತಿದ್ದ ವಿಡಿಯೋ ಇದೀಗಾ ಎಲ್ಲೆಡೆ ವೈರಲ್​ ಆಗಿದೆ. ಆಕೆಯ ವರ್ತನೆ ಕಂಡು ಸ್ಥಳೀಯರು ದಂಗಾಗಿ ಹೋಗಿದ್ದಾರೆ. ಸೋಶಿಯಲ್​​ ಮೀಡಿಯಾಗಳಲ್ಲಿ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಆಕೆಯ ಕುಡಿದ ಮತ್ತಿನಲ್ಲಿರಬೇಕು, ಇಲ್ಲದಿದ್ದರೆ ಮಾನಸಿಕ ಅಸ್ವಸ್ಥೆಯಾಗಿರಬಹುದು ಎಂದು ಕಾಮೆಂಟ್​​ ಮಾಡಿದ್ದಾರೆ. ಈ ಘಟನೆ ಬುಧವಾರ(ಜೂ.07)ನಡೆದಿದೆ.

ವಿಡಿಯೋ ಇಲ್ಲಿದೆ ನೋಡಿ: 

ಕಾರಿನ ಟಾಪ್​​​ ಮೇಲೆ ವಿಚಿತ್ರವಾಗಿ ವರ್ತಿಸುತ್ತಿರುವುದರಿಂದ ನಗರದ ಜನದಟ್ಟನೆ ಹೆಚ್ಚಾಗಿದ್ದು, ಕೆಲ ಸಮಯಗಳ ವರೆಗೆ ಟ್ರಾಫಿಕ್​​ ಜಾಮ್​​​ ಉಂಟಾಗಿದೆ. ಕೆಲಹೊತ್ತಿನಲ್ಲೇ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ವಾರಣಾಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆಕೆಯನ್ನು ಕಾರಿನಿಂದ ಕೆಳಗಿಳಿಸಿ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಬಾಸ್​, ನಾನು ಗರ್ಭಿಣಿ; ಈ ವಾಟ್ಸಪ್​ ಚಾಟ್​ ಮಿಲಿಯನ್​ಗಟ್ಟಲೆ ಜನರನ್ನು ಸೆಳೆದಿದ್ದೇಕೆ?

ವಾರಣಾಸಿಯಲ್ಲಿ 24 ಗಂಟೆಗಳಲ್ಲಿ ಎರಡನೇ ಘಟನೆ:

ಒಂದು ದಿನ ಮೊದಲು, ಮಂಗಳವಾರ, ಇನ್ನೊಬ್ಬ ವಿದೇಶಿ ಮಹಿಳೆ ರಸ್ತೆ ದಾಟುತ್ತಿರುವಾಗ ಬೈಕ್ ಸವಾರರ ಸುತ್ತ ಅನುಚಿತವಾಗಿ ವರ್ತಿಸಿದ್ದಳು. ಆಕೆಯನ್ನು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ವಾಗ್ದಂಡನೆಗೆ ಒಳಪಡಿಸಿದ್ದರು. ವಿದೇಶಿ ಮಹಿಳೆ ವ್ಯಾಪಾರಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಳು ಎಂದು ಅಲ್ಲಿ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಹಾಗೆ ಮನವೊಲಿಸಿದ ನಂತರ ಕೆಲವು ಮಹಿಳಾ ಪೊಲೀಸರು ಬಂದು ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 10:40 am, Fri, 9 June 23