Viral Video: ಶತ್ರು ಸಂಹಾರಕ್ಕೆ ತಯಾರಿಯಲ್ಲಿದ್ದ ಯೋಧನಿಗೆ ಎದುರಾದ ನಾಗರಹಾವು; ಯೋಧ ಮಾಡಿದ್ದೇನು ಗೊತ್ತಾ?

| Updated By: Rakesh Nayak Manchi

Updated on: Aug 15, 2022 | 10:04 AM

ಸೈನಿಕನೊಬ್ಬ ಕಾಡಿನಲ್ಲಿ ಹೋಗುತ್ತಿರುವಾಗ ನಾಗರಹಾವು ತಲೆ ಎತ್ತಿ ನಿಲ್ಲುತ್ತದೆ. ಈ ವೇಳೆ ವೀರ ಸೈನಿಕ ಮಾಡಿದ್ದೇನು? ಈ ವೈರಲ್ ವಿಡಿಯೋ ನೋಡಿ.

Viral Video: ಶತ್ರು ಸಂಹಾರಕ್ಕೆ ತಯಾರಿಯಲ್ಲಿದ್ದ ಯೋಧನಿಗೆ ಎದುರಾದ ನಾಗರಹಾವು; ಯೋಧ ಮಾಡಿದ್ದೇನು ಗೊತ್ತಾ?
ನಾಗರ ಹಾವನ್ನು ಹಿಡಿದ ಸೈನಿಕ
Follow us on

ನಾಗರಹಾವು ವಿಶ್ವದ ಅತ್ಯಂತ ಮಾರಕ ಹಾವುಗಳಲ್ಲಿ ಒಂದಾಗಿದೆ, ಓರ್ವ ವ್ಯಕ್ತಿಯನ್ನು ಕೇವಲ 20 ನಿಮಿಷಗಳಲ್ಲಿ ಕೊಲ್ಲುವ ಸಾಮರ್ಥ್ಯ ಅದರ ವಿಷಕ್ಕಿದೆ. ಆದಾಗ್ಯೂ, ಅಪಾಯಕಾರಿ ಹಾವು ತನ್ನ ಬಂದಾಗಲೂ ವೀರ ಯೋಧ ಕುಗ್ಗದೆ ಅದಕ್ಕೂ ಯಾವುದೇ ತೊಂದರೆಯನ್ನು ನೀಡದೆ ಹಿಡಿದಿದ್ದಾರೆ. ಈ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಭಾರತೀಯ ಸೇನೆಯ ಯೋಧನೊಬ್ಬ ತನ್ನ ಶತ್ರುಗಳ ವಿರುದ್ಧ ಹೋರಾಡಲು ತಯಾರಿ ನಡೆಸುತ್ತಾ ಕಾಡಿನಲ್ಲಿ ತೆವಳುತ್ತಾ ಹೋಗುತ್ತಿರುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು.

ವಿಡಿಯೋದಲ್ಲಿ ಇರುವಂತೆ, ಸೈನಿಕ ಗನ್ ಹಿಡಿದುಕೊಂಡು ಕಾಡಿನಲ್ಲಿ ತೆವಲುತ್ತಾ ಹೋಗುತ್ತಿರುವಾಗ ಸ್ವಲ್ಪ ಹೆಡೆ ಬಿಚ್ಚಿ ದಾಳಿಗೆ ಸಜ್ಜಾಗಿದ್ದ ನಾಗರ ಹಾವನ್ನು ನೋಡುತ್ತಾನೆ. ಅಷ್ಟಕ್ಕೂ ಎದೆಗುಂದದ ಆ ವೀರ ಸೈನಿಕ ಹಾವಿನ ತಲೆಯ ಮೇಲೆ ತನ್ನ ಕೈಯನ್ನು ಕೊಂಡೊಯ್ಯುತ್ತಾನೆ. ನಂತರ ನಿಧಾನವಾಗಿ ಕೈಯನ್ನು ಕೆಳಗೆ ತರುತ್ತಾ ಅದು ಮುಖವನ್ನು ಹಿಡಿಯುತ್ತಾನೆ. ತದನಂತರ ಒಂದು ಕೈಯಲ್ಲಿ ನಾಗರ ಹಾವು ಇನ್ನೊಂದು ಕೈಯಲ್ಲಿ ಬಂದೂಕನ್ನು ಹಿಡಿದುಕೊಂಡು ತೆವಲುತ್ತಲೇ ಮುಂದೆ ಸಾಗುವುದನ್ನು ನೋಡಬಹುದು. ಯಾವುದೇ ನಿರ್ಭೀತಿಯಿಂದ ಹಾವಿನ ತಲೆಯ ಮೇಲೆ ಕೈ ಹಾಕುವ ಆ ಸೈನಿಕನು ಹಾವು ಹಿಡಿಯುವ ತರಬೇತಿಯನ್ನೂ ಪಡೆದಿರುವಂತೆ ಕಾಣುತ್ತದೆ.

ಈ ವಿಡಿಯೋವನ್ನು official_viralclips ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ವೈರಲ್ ಪಡೆದಿದೆ. ಹಾವನ್ನು ಹಿಡಿಯುವ ಈ ಯೋಧನ ವಿಡಿಯೋ ಇತರೆ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ. ಅಷ್ಟೇ ಅಲ್ಲದೆ ಸೈನಿಕನಿಗೆ ಸಂಬಂಧಪಟ್ಟ ಬೇರೆಬೇರೆ ಸಾಹಸದ, ಮಾನವೀಯತೆ ಮರೆಯುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದು.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ