Rakesh Jhunjhunwala: ಕುಳಿತಲ್ಲೇ ಕುಣಿದು ಕುಪ್ಪಳಿಸಿದ ಕಿಂಗ್ ಆಫ್ ಬುಲ್ ರಾಕೇಶ್ ಜುಂಜುನ್‌ವಾಲಾ: ಇಲ್ಲಿದೆ ವೈರಲ್ ವಿಡಿಯೋ
ಇಂಡಿಯಾಸ್ ವಾರೆನ್ ಬಫೆಟ್ ಎಂದು ಕರೆಯಲ್ಪಟ್ಟ ಜುಂಜುನ್‌ವಾಲಾ ಅವರ ಉತ್ಸಾಹ ಮತ್ತು ಅದಮ್ಯ ಮನೋಭಾವಕ್ಕೆ ಹೆಸರುವಾಸಿಯಾಗಿದ್ದರು.
ಸ್ಟಾಕ್-ಮಾರುಕಟ್ಟೆಯ ಕಿಂಗ್ ಆಫ್ ಬುಲ್ಸ್ ಎಂದೇ ಖ್ಯಾತಿಯನ್ನು ಹೊಂದಿದ್ದ ಮತ್ತು ಭಾರತದ ಹೊಸ ಖಾಸಗಿ ವಿಮಾನಯಾನ ಸಂಸ್ಥೆಯಾದ ಆಕಾಶ ಏರ್‌ನ ಸಂಸ್ಥಾಪಕ ರಾಕೇಶ್ ಜುಂಜುನ್‌ವಾಲಾ (Rakesh Jhunjhunwala) ದೀರ್ಘಕಾಲದ ಅನಾರೋಗ್ಯದಿಂದಾಗಿ ಇಂದು (ಆಗಸ್ಟ್ 14) ಬೆಳಿಗ್ಗೆ ಮುಂಬೈನಲ್ಲಿ ನಿಧನರಾದರು. ಇಂಡಿಯಾಸ್ ವಾರೆನ್ ಬಫೆಟ್ ಎಂದು ಕರೆಯಲ್ಪಟ್ಟ ಜುಂಜುನ್‌ವಾಲಾ ಅವರ ಉತ್ಸಾಹ ಮತ್ತು ಅದಮ್ಯ ಮನೋಭಾವಕ್ಕೆ ಹೆಸರುವಾಸಿಯಾಗಿದ್ದರು. ಸದ್ಯ ಅವರ ಸಕಾರಾತ್ಮಕತೆಯನ್ನು ಬಿಂಬಿಸುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಜುಂಜುನ್‌ವಾಲಾ ಅವರು ಮಧುಮೇಹದಿಂದ ಬಳಲುತ್ತಿದ್ದಾಗ ಗಾಲಿಕುರ್ಚಿಯಲ್ಲಿ ಕುಳಿತಿರುವುದನ್ನು ಕಾಣಬಹುದು.
I don’t want to remember this day as a sad day
Yes, RJ passed away but this will clip will always be there in my heart which shows how happy he was. pic.twitter.com/jpaOhFrLvN
— Keshav Arora (@CommerceGuruu) August 14, 2022
ಗಾಲಿಕುರ್ಚಿಯಲ್ಲಿ ಕುಳಿತಿದ್ದರು ಸಹ ತಮ್ಮ 62ನೇ ವಯಸ್ಸಿನಲ್ಲಿ ಅವರು ಬಂಟಿ ಔರ್ ಬಬ್ಲಿ ಚಿತ್ರದ ಕಜ್ರಾ ರೇ ಹಾಡಿಗೆ ಕುಳಿತಲ್ಲೇ ಖುಷಿಯಾಗಿ ಖುಷಿಯಾಗಿ ನೃತ್ಯ ಮಾಡಿದ್ದಾರೆ. ಈ ದಿನವನ್ನು ದುಃಖದ ದಿನ ಎಂದು ನೆನಪಿಸಿಕೊಳ್ಳಲು ನಾನು ಬಯಸುವುದಿಲ್ಲ, ಹೌದು, ಆರ್‌ಜೆ ನಿಧನರಾದರು. ಆದರೆ ಅವರು ನನ್ನ ಹೃದಯದಲ್ಲಿ ಯಾವಾಗಲೂ ಇರುತ್ತಾರೆ. ಈ ವಿಡಿಯೋದಲ್ಲಿ ಅವರು ಎಷ್ಟು ಸಂತೋಷವಾಗಿದ್ದರು ಎಂಬುದನ್ನು ಕಾಣಬಹುದು ಎಂದು ವಿಡಿಯೋಕ್ಕೆ ಶೀರ್ಷಿಕೆ ನೀಡಲಾಗಿದೆ.
ರಾಕೇಶ್ ಜುಂಜುನ್‌ವಾಲಾ ತಮ್ಮದೇ ಖಾಸಗಿ ಓಡೆತನದ ಸ್ಟಾಕ್ ಟ್ರೇಡಿಂಗ್ ಫರ್ಮ್ ರೇರ್ ಎಂಟರ್ಪ್ರೈಸಸ್ ಅವರ ಮತ್ತು ಅವರ ಪತ್ನಿಯ ಮೊದಲ ಎರಡು ಅಕ್ಷರಗಳನ್ನು ಕಂಪನಿಗೆ ಹೆಸರನ್ನಾಗಿ ಇಡಲಾಗಿದೆ. ಟೈಟಾನ್, ಸ್ಟಾರ್ ಹೆಲ್ತ್, ಟಾಟಾ ಮೋಟಾರ್ಸ್ ಮತ್ತು ಮೆಟ್ರೋ ಬಾಂಡ್ಗಳು ಅವರ ದೊಡ್ಡ ಹಿಡುವಳಿಗಳಾಗಿವೆ. ಹಂಗಾಮಾ ಮೀಡಿಯಾ ಮತ್ತು ಆಪ್ಟೆಕ್‌ನ ಅಧ್ಯಕ್ಷರಾಗಿದ್ದರು, ಜೊತೆಗೆ ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್, ಕಾನ್‌ಕಾರ್ಡ್ ಬಯೋಟೆಕ್, ಪ್ರೊವೊಗ್ ಇಂಡಿಯಾ, ವೈಸ್‌ರಾಯ್ ಹೋಟೆಲ್‌ಗಳು ಮತ್ತು ಹೆಚ್ಚಿನವುಗಳಲ್ಲಿ ನಿರ್ದೇಶಕರಾಗಿದ್ದರು.
ಆಗಸ್ಟ್ 2022 ರ ಹೊತ್ತಿಗೆ, ಜುಂಜುನ್‌ವಾಲಾ ಅವರ ಅಂದಾಜು ನಿವ್ವಳ ಮೌಲ್ಯವು USD 5.8 ಶತಕೋಟಿ ಆಗಿದ್ದು, ಅವರು ಭಾರತದಲ್ಲಿ 36 ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ ಫೋರ್ಬ್ಸ್ ಜಾಗತಿಕ ಪಟ್ಟಿಯಲ್ಲಿ 438 ನೇ ಶ್ರೇಯಾಂಕವನ್ನು ಹೊಂದಿದ್ದರು.
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.