Sign In

By signing in or creating an account, you agree with Associated Broadcasting Company's Terms & Conditions and Privacy Policy.

PIN Code : ಅಂಚೆ ಕಚೇರಿಯ ಪಿನ್​ ಕೋಡ್​ ಆವಿಷ್ಕಾರಕ್ಕೆ 50 ರ ಸಂಭ್ರಮ

Shriram Bhikaji Velankar : 1972ರ ಆಗಸ್ಟ್​ 15 ರಂದು ಅಂದಿನ ಸಂವಹನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀರಾಮ್ ಭಿಕಾಜಿ ವೇಲಂಕರ್ ಅವರು, ಪತ್ರಗಳನ್ನು ವಿಂಗಡಿಸುವ ಕೆಲಸ ಸುಲಭವಾಗಲಿ ಎಂಬ ಕಾರಣಕ್ಕೆ ಪಿನ್​ ಕೋಡ್​ ವ್ಯವಸ್ಥೆಯನ್ನು ಜಾರಿಗೆ ತಂದರು.

PIN Code : ಅಂಚೆ ಕಚೇರಿಯ ಪಿನ್​ ಕೋಡ್​ ಆವಿಷ್ಕಾರಕ್ಕೆ 50 ರ ಸಂಭ್ರಮ
ಪಿನ್​ ಕೋಡ್​ ಪ್ರವರ್ತಕ ಶ್ರೀರಾಮ ಭಿಕಾಜಿ ವೇಲಂಕರ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 15, 2022 | 10:57 AM

PIN Code : ಇಂದು ದೇಶಾದ್ಯಂತ ಸ್ವತಂತ್ರ ಭಾರತದ ಅಮೃತಮಹೋತ್ಸವ ಆಚರಿಸಲಾಗುತ್ತಿದೆ. ಈ ದಿನಕ್ಕೆ ಮತ್ತೊಂದು ಮಹತ್ವದ ದಿನ ಸೇರ್ಪಡೆಗೊಂಡಿದೆ. ಅಂಚೆ ಕಚೇರಿಯ ಪಿನ್ ಆವಿಷ್ಕಾರವಾಗಿ ಇಂದಿಗೆ 50 ವರ್ಷಗಳು ಸಂದಿವೆ. ಯಾವುದೇ ಪತ್ರವಿರಲಿ, ಅಪ್ಲಿಕೇಷನ್ ಇರಲಿ ಆರು ನಂಬರ್ ಹೊಂದಿದ ​PIN (Post Index Number) ಪಿನ್ ಕೋಡ್​​ ಬರೆಯುವುದು ಇಂದಿಗೂ ಚಾಲ್ತಿಯಲ್ಲಿದೆ. ಇದು ಭಾರತೀಯ ಅಂಚೆ ಇಲಾಖೆ ರೂಪಿಸಿಕೊಂಡ ವ್ಯವಸ್ಥೆ. ಅಂಚೆ ಇಲಾಖೆಯ ಪ್ರಕಾರ, ಭಾರತ ಸ್ವಾತಂತ್ರ್ಯ ಪಡೆದ ನಂತರ ನಗರ ಮತ್ತು ಪ್ರದೇಶಗಳಲ್ಲಿ ಒಟ್ಟು 23,344 ಅಂಚೆ ಕಚೇರಿಗಳು ಇದ್ದವು. ಆದರೆ, ದೇಶದ ತ್ವರಿತಗತಿಯ ಬೆಳವಣಿಯಿಂದಾಗಿ ಅಂಚೆಕಚೇರಿಯ ಕಾರ್ಯವಿಧಾನವೂ ವೇಗ ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಯಿತು. ಆಗ ಇದಕ್ಕಾಗಿ ಸುಲಭ ಉಪಾಯ ಕಂಡುಕೊಳ್ಳಬೇಕು ಎನ್ನಿಸಿತು. ಏಕೆಂದರೆ, ಪತ್ರವ್ಯವಹಾರಗಳು ಎಂದಮೇಲೆ ಸ್ಥಳೀಯ ಭಾಷೆಯಲ್ಲಿಯೇ ನಡೆಯುವಂಥದ್ದು. ಎಲ್ಲರಿಗೂ ಎಲ್ಲ ಭಾಷೆಯೂ ಬರುವುದುಂಟೆ? ಹಾಗೆಯೇ ಎಷ್ಟೋ ಬಾರಿ ಒಂದೇ ಹೆಸರಿನ ಜಿಲ್ಲೆ, ಊರುಗಳೂ ಗೊಂದಲವನ್ನು ಉಂಟು ಮಾಡುವುದಲ್ಲವೆ? ಹೀಗಿದ್ದಾಗ ಅಂಚೆ ಕಚೇರಿಯವರಿಗೆ ಪತ್ರಗಳನ್ನು ವಿಂಗಡಿಸುವುದು ದೊಡ್ಡ ಸವಾಲಿನ ಕೆಲಸವಲ್ಲವೆ? ಆಗ ಈ ಪಿನ್​ಕೋಡ್​ ನಂಬರ್ ಪರಿಚಯಿಸಲಾಯಿತು.

ಪಿನ್​ ಕೋಡನ ವಿವರವನ್ನು ತಿಳಿದುಕೊಳ್ಳುವುದಾದರೆ, ಎಂಟು ಪ್ರಾದೇಶಿಕ ವಲಯ ಮತ್ತು ಭಾರತೀಯ ಸೇನೆಗಾಗಿ ಒಂದು ವಲಯ ಒಳಗೊಂಡಂತೆ ಒಟ್ಟು ಒಂಬತ್ತು ಪಿನ್​ ಕೋಡ್ ವಲಯಗಳಿವೆ. ಮೊದಲ ಅಂಕೆ ‘ವಲಯ’, ಎರಡನೇ ಅಂಕೆ ‘ಉಪವಲಯ’, ಮೂರನೇ ಅಂಕೆ ‘ಅಂಚೆ ವಿಂಗಡಣೆಯ ಜಿಲ್ಲೆ‘ಯನ್ನು ಸೂಚಿಸುತ್ತದೆ. ಕೊನೆಯಲ್ಲಿಉಳಿಯುವ ಮೂರು ಅಂಕೆಗಳು ಕಚೇರಿಯ ಸೂಚಿಸುತ್ತವೆ. ಈ ಉಪಾಯದಿಂದ ಪತ್ರಗಳ ವಿಂಗಡಣೆಯು ಸುಲಭವೂ, ತ್ವರಿತವೂ ಮತ್ತು ಗೊಂದಲರಹಿತವೂ ಆಯಿತು.

1972ರ ಆಗಸ್ಟ್​ 15 ರಂದು ಅಂದಿನ ಸಂವಹನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಅಂಚೆ ಮತ್ತು ಟೆಲಿಗ್ರಾಫ್ ಬೋರ್ಡ್​ನ ಹಿರಿಯ ಸದಸ್ಯರಾಗಿದ್ದ ಶ್ರೀರಾಮ್ ಭಿಕಾಜಿ ವೇಲಂಕರ್ ಅವರು ಪತ್ರಗಳನ್ನು ವಿಂಗಡಿಸುವ ಕೆಲಸ ಸುಲಭವಾಗಲಿ ಎಂಬ ಕಾರಣಕ್ಕೆ ಪಿನ್​ ಕೋಡ್​ ವ್ಯವಸ್ಥೆಯನ್ನು ಜಾರಿಗೆ ತಂದರು.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ವೇಲಂಕರ್ ಅವರು ಮುಂಬೈನಲ್ಲಿ ನಿಧನರಾಗುವ ಮೂರು ವರ್ಷಗಳ ಮೊದಲು (1996 ರಲ್ಲಿ) ಸಂಸ್ಕೃತ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ರಾಷ್ಟ್ರಪತಿಗಳ ಪ್ರಶಸ್ತಿಯನ್ನು ಪಡೆದಿದ್ದರು. ಅವರು ಸಂಸ್ಕೃತದಲ್ಲಿ ರಚಿಸಿದ ಒಟ್ಟು ಪುಸ್ತಕಗಳ ಸಂಖ್ಯೆ 105.  ನಾಟಕಗಳಲ್ಲಿ ಅವರ ವಿಲೋಮ ಕಾವ್ಯವನ್ನು ಸಾಹಿತ್ತ್ಯಿಕ ಮೇರುಕೃತಿ ಎಂದು ಪರಿಗಣಿಸಲಾಗಿತ್ತು. ಇದು ರಾಮಸ್ತುತಿ ಪದ್ಯಗಳನ್ನು ಒಳಗೊಂಡಿದೆ. ವೇಲಂಕರ್ ಅವರು ಮುಂಬೈನಲ್ಲಿ ದೇವವಾಣಿ ಮಂದಿರಂ ಎಂಬ ಸಾಂಸ್ಕೃತಿಕ ತಂಡವನ್ನು ಸ್ಥಾಪಿಸಿದ್ದರು. ಇದು ಭಾರತ ಮತ್ತು ವಿದೇಶಗಳಲ್ಲಿ ಸಂಸ್ಕೃತದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರೂಪಿಸಿದ ಯೋಜನೆಯಾಗಿತ್ತು. ಅಲ್ಲದೆ ಇವರು 1973 ರಲ್ಲಿ ನವದೆಹಲಿಯಲ್ಲಿ ನಡೆದ ಇಂಡಿಪೆಕ್ಸ್ ಎಂಬ ವಿಶ್ವ ಅಂಚೆಚೀಟಿಗಳ ಸಂಗ್ರಹದ ಪ್ರದರ್ಶನದ ಅಧ್ಯಕ್ಷರಾಗಿದ್ದರು. ಆ ಪ್ರದರ್ಶನದಲ್ಲಿ 120 ದೇಶಗಳು ಭಾಗಿಯಾಗಿದ್ದವು. 1973ರ ಡಿಸೆಂಬರ್ 31ರಂದು ವೇಲಂಕರ್ ಸರ್ಕಾರಿ ಸೇವೆಯಿಂದ ನಿವೃತ್ತರಾದರು.

ಮತ್ತಷ್ಟು ಟ್ರೆಂಡಿಂಗ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:49 am, Mon, 15 August 22

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ