Trending : ಕ್ಯಾಂಡಿ ಚೀಫ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ!
Application : ಈ ಹುದ್ದೆಯು ಐದು ವರ್ಷ ಮೇಲ್ಪಟ್ಟವರಿಗೆ ಮಾತ್ರ ಮೀಸಲಾಗಿರುತ್ತದೆ. ಮುಂದಿನ ವಿವರಗಳಿಗಾಗಿ ಈ ಪೋಸ್ಟ್ ನೋಡಿ. ನೀವೂ ಈ ಹುದ್ದೆಗೆ ಅರ್ಹರೇ? ಪರೀಕ್ಷಿಸಿಕೊಳ್ಳಿ.
Trending : ಕ್ಯಾಂಡಿ ಚೀಫ್ ಆಫೀಸರ್ ಹುದ್ದೆಗೆ ಕ್ಯಾಂಡಿ ಕಂಪೆನಿಯು ಅರ್ಜಿ ಆಹ್ವಾನಿಸಿದೆ. ಇಷ್ಟೇ ಅಲ್ಲ ಅಚ್ಚರಿ ನೀಡುವಂಥ ಅನೇಕ ಉದ್ಯೋಗಾವಕಾಶಗಳು ಇಲ್ಲಿ ಲಭ್ಯ. ಕ್ಯಾಂಡಿ ಚೀಫ್ ಆಫೀಸರ್ ಹುದ್ದೆಯ ಮುಖ್ಯ ಕೆಲಸವೇ ಕ್ಯಾಂಡಿ ರುಚಿ ನೋಡುವುದಾಗಿರುತ್ತದೆ. Candy Funhouse, Canadian Company ಈ ಕುರಿತು ಇನ್ಸ್ಟ್ರಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದೆ. ನೀವು ಕ್ಯಾಂಡಿ ಮತ್ತು ಪಾಪ್ ಕಲ್ಚರ್ ಬಗ್ಗೆ ಆಸಕ್ತಿ ಹೊಂದಿದ್ದೀರಾ? ನಮ್ಮ ಕ್ಯಾಂಡಿಯಾಲಜಿಸ್ಟ್‌ಗಳನ್ನು ಮುನ್ನಡೆಸಲು 6 ಅಂಕಿಗಳನ್ನು ಪಾವತಿಸಿ! ಈ ಉದ್ಯೋಗವು 5 ವರ್ಷದ ಮೇಲ್ಪಟ್ಟವರಿಗೆ. ನಿಮ್ಮ ಮಗುವಿನ ಪರವಾಗಿಯೂ ಸಹ ನೀವು ಅರ್ಜಿ ಸಲ್ಲಿಸಬಹುದು! ಎಂಬ ಪೋಸ್ಟ್ ಇದೀಗ ನೆಟ್ಟಿಗರಲ್ಲಿ ಸಂಚಲನ ಮೂಡಿಸಿದೆ.
ಈ ಕುರಿತು ಈ ಸಂಸ್ಥೆಗಳು ತಮ್ಮ ವೆಬ್ಸೈಟ್ಲ್ಲಿ ಕೂಡ ಉದ್ಯೋಗಾವಕಾಶಗಳ ಬಗ್ಗೆ ವಿವರ ಹಂಚಿಕೊಂಡಿವೆ. “ನಾವು ವಿಶ್ವದ ಮೊದಲ ಮತ್ತು ಏಕೈಕ ಮುಖ್ಯ ಕ್ಯಾಂಡಿ ಅಧಿಕಾರಿಯನ್ನು ಹುಡುಕುತ್ತಿದ್ದೇವೆ! ಈ ಅವಕಾಶವು ಟೊರೊಂಟೊ, ಕೆನಡಾ (ಕೆನಡಿಯನ್ ನಿವಾಸಿಗಳು) ಅಥವಾ ನ್ಯೂಜೆರ್ಸಿ (ಅಮೆರಿಕನ್ ನಿವಾಸಿಗಳು) ಯ ನಿವಾಸಿಗಳಿಗಿದ್ದು, ಮನೆಯಿಂದಲೇ ಕೆಲಸ ಮಾಡಬಹುದಾಗಿದೆ. “FUNhouse” ಈ ಪ್ರಾಜೆಕ್ಟಿಗೆ ವರ್ಷಕ್ಕೆ 1,00,000 ಡಾಲರ್ ತನಕ ಸಂಬಳವನ್ನು ನೀಡಲಾಗುತ್ತದೆ.’’
ಇನ್ಸ್ಟಾಗ್ರಾಂನಲ್ಲಿ ಈ ಪೋಸ್ಟ್ ಹಂಚಿಕೊಂಡಾಗ ಸಾಕಷ್ಟು ಜನರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಮಜಮಜಾ ಕ್ಯಾಪ್ಷನ್ ಕೊಟ್ಟು ಹಂಚಿಕೊಂಡಿದ್ದಾರೆ. ‘ನನಗಿದರಲ್ಲಿ ಆಸಕ್ತಿ ಇದೆ ಆದರೆ ನಾನು ಥೈಲ್ಯಾಂಡ್ನಲ್ಲಿದ್ದೇನೆ.’ ‘ನನ್ನ ಐದು ವರ್ಷ ಮಗನ ಪರವಾಗಿ ನಾನು ಅರ್ಜಿ ಸಲ್ಲಿಸಲು ಬಯಸಿದ್ದೇನೆ.’ ‘ಈ ಐಡಿಯಾ ಅದ್ಭುತವಾಗಿದೆ’ ಹೀಗೆ ಅನೇಕರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ನೋಡಿ ನೀವೂ ಅರ್ಜಿ ಸಲ್ಲಿಸುತ್ತೀರಾ, ಸಾಧ್ಯವಾ?
View this post on Instagram
Published On - 11:41 am, Thu, 4 August 22