ರೆಸ್ಟೋರೆಂಟ್ನಲ್ಲಿ ಮಾಸ್ಕ್ ಧರಿಸದಿದ್ದರೆ ಪ್ರವೇಶವಿಲ್ಲ ಎಂದು ಸಿಬ್ಬಂದಿ ಹೇಳಿದ್ದಕ್ಕೆ ಜಗಳ ಮಾಡಿದ ವ್ಯಕ್ತಿಯ ವಿಡಿಯೊ ಇದೀಗ ವೈರಲ್ ಆಗಿದೆ. ಮಾಸ್ಕ್ ಧರಿಸಿಲ್ಲ ಎಂದು ರೆಸ್ಟೋರೆಂಟ್ ಕೆಲಸಗಾರರು ಬಂದು ಹೇಳಿದ್ದಾರೆ. ಅದಕ್ಕೆ ಕೂಗಾಡುತ್ತಿದ್ದ ವ್ಯಕ್ತಿಯನ್ನು ನೋಡಿ ವಯಸ್ಕರೊಬ್ಬರು ಬಂದು ಮಾತನಾಡಲು ಪ್ರಾರಂಭಿಸುತ್ತಾರೆ. ಅವರನ್ನು ಮಾಸ್ಕ್ ಧರಿಸದ ವ್ಯಕ್ತಿ ಕೆಳಗೆ ತಳ್ಳಿದ್ದಾನೆ. ನಂತರ ಮಾಸ್ಕ್ ಧರಿಸದ ವ್ಯಕ್ತಿಯ ಪರಿಸ್ಥಿತಿ ಏನಾಗಿದೆ ಎಂಬ ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ವಿಡಿಯೊದಲ್ಲಿ ಗಮನಿಸುವಂತೆ ಮಾಸ್ಕ್ ಧರಿಸಿ ಎಂದು ರೆಸ್ಟೋರೆಂಟ್ ಸಿಬ್ಬಂದಿ ಕೇಳಿಕೊಳ್ಳುತ್ತಾರೆ. ಅದಕ್ಕೆ ಗ್ರಾಹಕ ಸಿಟ್ಟಿನಲ್ಲಿ ಕೂಗಾಡಿದ್ದಾರೆ. ಅವರನ್ನು ಸಮಾಧಾನ ಮಾಡಲು ಬಂದ ವ್ಯಕ್ತಿಯನ್ನೂ ಸಹ ಅವರು ಕೆಳಗೆ ನೂಕಿದ್ದಾರೆ. ಈ ಅಶಿಸ್ತಿನ ಘಟನೆಯನ್ನು ನೋಡುತ್ತಿದ್ದ ಉಳಿದ ಗ್ರಾಹಕರು ಮುತ್ತಿಗೆ ಹಾಕಿದ್ದಾರೆ. ವಯಸ್ಕರನ್ನು ತಳ್ಳಿದ್ದರಿಂದ ಕೋಪಗೊಂಡ ಮತ್ತೋರ್ವ ಗ್ರಾಹಕ ಮಾಸ್ಕ್ ಇಲ್ಲದ ವ್ಯಕ್ತಿಯನ್ನು ಒಂದೇ ಹೊಡೆತಕ್ಕೆ ಕೆಳಗೆ ಬೀಳಿಸಿದ್ದಾನೆ. ನಂತರ ವ್ಯಕ್ತಿ ಬಾಗಿಲು ತೆಗೆದು ಹೊರ ನಡೆದಿದ್ದನ್ನು ನೋಡಬಹುದು.
ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಇದೀಗ ಫುಲ್ ವೈರಲ್ ಆಗಿದೆ. ಸುಮಾರು ಮೂರು ಮಿಲಿಯನ್ಗಿಂತಲೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಮುಖವಾಡ ಧರಿಸದಿದ್ದರೆ ರೆಸ್ಟೋರೆಂಟ್ ಒಳಗೆ ಪ್ರವೇಶವಿಲ್ಲ ಎಂದಿದ್ದಕ್ಕೆ ಕಿರುಚಾಡುತ್ತಿರುವ ವ್ಯಕ್ತಿಯನ್ನು ವಿಡಿಯೊದಲ್ಲಿ ನೋಡಬಹುದು.
ಇದನ್ನೂ ಓದಿ:
Viral Video: ಸಹೋದ್ಯೋಗಿಗಳ ಜೊತೆ ಡ್ಯಾನ್ಸ್ ಮಾಡಿದ ಪೇಟಿಎಂ ಸಂಸ್ಥಾಪಕ! ವಿಡಿಯೋ ನೋಡಿ
Viral Video: ಹೊಟೆಲ್ನಲ್ಲಿ ಪಾತ್ರೆ ತೊಳೆದ ಕೋತಿ ನೋಡಿ; ವಿಡಿಯೊ ವೈರಲ್