Shocking Video: ನದಿಯಲ್ಲಿ ಈಜುತ್ತಿದ್ದ ವ್ಯಕ್ತಿಯ ಕೈ ಕಚ್ಚಿದ ಮೊಸಳೆ; ಆಘಾತಕಾರಿ ವಿಡಿಯೊ ವೈರಲ್

Viral Video: ನದಿಯಲ್ಲಿ ಈಜುತ್ತಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ ನಡೆಸಿದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ.

Shocking Video: ನದಿಯಲ್ಲಿ ಈಜುತ್ತಿದ್ದ ವ್ಯಕ್ತಿಯ ಕೈ ಕಚ್ಚಿದ ಮೊಸಳೆ; ಆಘಾತಕಾರಿ ವಿಡಿಯೊ ವೈರಲ್
ಮೊಸಳೆ ದಾಳಿ
Follow us
TV9 Web
| Updated By: shruti hegde

Updated on: Oct 27, 2021 | 9:34 AM

ಮೊಸಳೆ, ನದಿಯಲ್ಲಿ ಈಜುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿದ ದೃಶ್ಯದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಈ ಘಟನೆ ಕಳೆದ ಶನಿವಾರ ಬ್ರೆಜಿಲ್​ನಲ್ಲಿ ನಡೆದಿದೆ ಎಂಬ ಮಾಹಿತಿ ತಿಳಿದು ಬಂದಿದೆ. ನದಿಯಲ್ಲಿ ಮೊಸಳೆ ವಾಸಿಸುತ್ತಿದೆ ಎಂಬ ಕಾರಣಕ್ಕೆ ಸ್ವಿಮ್ಮಿಂಗ್ಅನ್ನು ನಿಷೇಧಿಸಲಾಗಿದೆ. ಎಚ್ಚರಿಕೆಯ ಸೂಚನೆಗಳನ್ನು ನಿರ್ಲಕ್ಷ್ಯಿಸಿ ಈಜುಗಾರ ನೀರಿಗೆ ಧುಮುಕಿದ್ದಾರೆ. ಆ ಸಂದರ್ಭದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ.

ಸಂಜೆ ಸುಮಾರು 4:40 ರ ಸಮಯದಲ್ಲಿ ವ್ಯಕ್ತಿಯೊಬ್ಬ ನೀರಿಗೆ ಧುಮುಕುತ್ತಿರುವುದನ್ನು ವಿಲಿಯಮ್ ಕೆಟೊನಾ ನೋಡಿದರು. ಆ ವೇಳೆ ಮೊಸಳೆಯೊಂದು ಈಜುಗಾರನ ಮೇಲೆ ದಾಳಿ ನಡೆಸಿದೆ. ವೇಗವಾಗಿ ವ್ಯಕ್ತಿ ಇದ್ದಲ್ಲಿಗೆ ಬರಲಾರಂಭಿಸಿದೆ. ಇದನ್ನು ಗಮನಿಸಿದ ಈಜುಗಾರ ಸ್ವಿಮ್ ಮಾಡುತ್ತಾ ದಡ ಸೇರಲು ಪ್ರಯ್ನಿಸಿದ್ದಾರೆ. ಕೊನೆಯಲ್ಲಿ ಮೊಸಳೆ ಈಜುಗಾರನ ಕೈ ಕಚ್ಚಿದ ಹಿಡಿದೆ. ಹೇಗೋ ತಪ್ಪಿಸಿಕೊಂಡ ಈಜುಗಾರ ದಡ ಸೇರಿಸಿದ್ದಾನೆ. ಈ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದ್ದಕ್ಕಿದ್ದಂತೆ ನನಗೆ ಆಶ್ವರ್ಯವಾಯಿತು. ಮೊಸಳೆ ವ್ಯಕ್ತಿಯನ್ನು ಬೆನ್ನಟ್ಟಿ ಬರುತ್ತಿದೆ. ಅದರಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯು ವೇಗವಾಗಿ ಈಜುತ್ತಾ ದಡ ಸೇರುತ್ತಿದ್ದಾನೆ. ಮೊಸಳೆಯಿಂದ ಹೇಗೋ ತಪ್ಪಿಸಿಕೊಂಡಿದ್ದಾನೆ. ಮೊಸಳೆ ಒಂದು ಕ್ಷಣದಲ್ಲಿ ಆತನ ಕೈಗೆ ಕಚ್ಚಿದ್ದರಿಂದ ಗಾಯಗಳಾಗಿವೆ ಎಂದು ಸ್ಥಳದಲ್ಲಿದ್ದ ಕೆಟೊನಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಸ್ಥಳೀಯ ವರದಿಗಳ ಪ್ರಕಾರ, ಘಟನೆ ನಡೆದಿದ್ದೇ ಸುತ್ತಲೂ ಜನರು ಸೇರಿದರು. ಈಜುಗಾರನಿಗೆ ಸಣ್ಣ ಪುಟ್ಟ ಗಾಯಗಳಾದ್ದರಿಂದ ಚಿಕಿತ್ಸೆ ನೀಡಲಾಯಿತು. ಗಂಭೀರವಾದ ಗಾಯಗಳಾಗಿದ್ದ ಎಂಬುದು ತಿಳಿದು ಬಂದಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು 1,400 ಕ್ಕೂ ಹೆಚ್ಚು ರೀಟ್ವಿಟ್​ಗಳು, 7,000 ಕ್ಕೂ ಹೆಚ್ಚು ಲೈಕ್ಸ್​ಗಳು ಲಭ್ಯವಾಗಿದೆ. ಎಚ್ಚರಿಕೆಯ ಸೂಚನೆಗಳಿದ್ದರೂ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಹೀಗಾಗಿದೆ ಎಂದು ಓರ್ವರು ಹೇಳಿದ್ದಾರೆ. ಇನ್ನು ಕೆಲವರು, ಈ ದೃಶ್ಯ ಇತರರಿಗೆ ಎಚ್ಚರಿಕೆ ನೀಡುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

Shocking Video: ಸುಂಟರಗಾಳಿ ರಭಸಕ್ಕೆ ಸಿಲುಕಿ ಪಲ್ಟಿ ಹೊಡೆದ ಟ್ರಕ್; ಶಾಕಿಂಗ್ ವಿಡಿಯೋ ಇಲ್ಲಿದೆ

Shocking Video: ಬಕೆಟ್​ನಲ್ಲಿ ನೀರು ಹಿಡಿದು ದೈತ್ಯ ನಾಗರ ಹಾವಿನ ತಲೆಯ ಮೇಲೆ ಸುರಿದ ಭೂಪ! ವಿಡಿಯೋ ನೋಡಿ