Viral Video: ಕಾರಿಗೆ ತಳ್ಳು ಗಾಡಿ ತಾಗಿದ್ದಕ್ಕೆ ಕೋಪಗೊಂಡು ಪಪ್ಪಾಯಿ ಹಣ್ಣುಗಳನ್ನು ಬಿಸಾಡಿದ ಮಹಿಳೆ; ವಿಡಿಯೋ ವೈರಲ್

Trending Video: ತಳ್ಳು ಗಾಡಿಯಿಂದ ಪಪ್ಪಾಯ ಹಣ್ಣುಗಳನ್ನು ಎಸೆಯುತ್ತಿರುವುದನ್ನು ನಿಲ್ಲಿಸುವಂತೆ ಹಣ್ಣು ಮಾರಾಟಗಾರನು ಆ ಮಹಿಳೆಯ ಮುಂದೆ ಮನವಿ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ ಆ ಮಹಿಳೆ ಆ ಮಾತುಗಳನ್ನು ಕೇಳಲು ಸಿದ್ಧರಿರಲಿಲ್ಲ.

Viral Video: ಕಾರಿಗೆ ತಳ್ಳು ಗಾಡಿ ತಾಗಿದ್ದಕ್ಕೆ ಕೋಪಗೊಂಡು ಪಪ್ಪಾಯಿ ಹಣ್ಣುಗಳನ್ನು ಬಿಸಾಡಿದ ಮಹಿಳೆ; ವಿಡಿಯೋ ವೈರಲ್
ಹಣ್ಣಿನ ಗಾಡಿಯವನ ವಿಡಿಯೋ
Edited By:

Updated on: Jan 11, 2022 | 7:34 PM

ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ನಡೆದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಈ ವಿಡಿಯೋದಲ್ಲಿ ತನ್ನ ಕಾರಿಗೆ ತಳ್ಳು ಗಾಡಿ ತಾಗಿದ್ದರಿಂದ ಕೋಪಗೊಂಡ ಮಹಿಳೆ ಹಣ್ಣು ವ್ಯಾಪಾರಿಯ ಗಾಡಿಯಿಂದ ಪಪ್ಪಾಯಿ ಹಣ್ಣುಗಳನ್ನು ರಸ್ತೆಗೆ ಎಸೆಯುತ್ತಿರುವುದನ್ನು ಕಾಣಬಹುದು. ಡಿಕ್ಕಿ ಹೊಡೆದಿದ್ದಕ್ಕೆ ಹಣ್ಣು ಮಾರಾಟಗಾರನೊಂದಿಗೆ ಜಗಳವಾಡಿದ ಆಕೆ ಬಳಿಕ ಗಾಡಿಯಲ್ಲಿದ್ದ ಪಪ್ಪಾಯಿ ಹಣ್ಣುಗಳನ್ನು ಎತ್ತಿಕೊಂಡು ನೆಲದ ಮೇಲೆ ಎಸೆಯುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

ತಳ್ಳು ಗಾಡಿಯಿಂದ ಪಪ್ಪಾಯ ಹಣ್ಣುಗಳನ್ನು ಎಸೆಯುತ್ತಿರುವುದನ್ನು ನಿಲ್ಲಿಸುವಂತೆ ಹಣ್ಣು ಮಾರಾಟಗಾರನು ಆ ಮಹಿಳೆಯ ಮುಂದೆ ಮನವಿ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ ಆ ಮಹಿಳೆ ಆ ಮಾತುಗಳನ್ನು ಕೇಳಲು ಸಿದ್ಧರಿರಲಿಲ್ಲ.

ರಸ್ತೆಯಲ್ಲಿ ಅವರ ಕಿರುಚಾಟವನ್ನು ಕೇಳಿದ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದ ಜನರು ತಮ್ಮ ಬಾಲ್ಕನಿಗಳಿಗೆ ತೆರಳಿ ವೀಡಿಯೊವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಅದು ಈಗ ಟ್ವಿಟರ್, ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆ ಮಹಿಳೆ ತನ್ನ ಕಾರನ್ನು ಪಾರ್ಕಿಂಗ್‌ನಿಂದ ಹೊರತೆಗೆದು ರಸ್ತೆಗೆ ಬರುತ್ತಿದ್ದಂತೆ ತಳ್ಳು ಗಾಡಿ ಆಕೆಯ ಕಾರಿನ ಪಕ್ಕದಲ್ಲಿ ಹಾದುಹೋಗುತ್ತಿತ್ತು. ಆಗ ಆಕೆಯ ಕಾರಿನ ಹಿಂಭಾಗಕ್ಕೆ ಹಣ್ಣಿನ ಗಾಡಿ ತಾಗಿತು. ತನ್ನ ಕಾರಿಗೆ ಸ್ಕ್ರಾಚ್ ಆಗಿದ್ದನ್ನು ನೋಡಿದ ಮಹಿಳೆ ಕೋಪಗೊಂಡು ಆ ಗಾಡಿಯಲ್ಲಿದ್ದ ಹಣ್ಣುಗಳನ್ನು ಬಿಸಾಡಿದ್ದಾಳೆ. ಆ ಮಹಿಳೆ ಮೊದಲು ಕೈಗಾಡಿ ಎಳೆಯುವವನ ಮೇಲೆ ಕೂಗಿದಳು ಮತ್ತು ನಂತರ ಹಣ್ಣು ಮಾರಾಟಗಾರನ ಕೈಗಾಡಿಯಿಂದ ಪಪ್ಪಾಯಿಗಳನ್ನು ಎಸೆಯಲು ಪ್ರಾರಂಭಿಸಿದಳು. ಆ ಮಾರಾಟಗಾರ “ಮೇಡಂ, ಹಣ್ಣನ್ನು ಬಿಸಾಡಬೇಡಿ, ನಾನು ಬಡವ” ಎಂದು ಮನವಿ ಮಾಡುತ್ತಲೇ ಇದ್ದ. ಕಾರಿಗೆ ಆಗಿರುವ ಹಾನಿಗೆ ಪರಿಹಾರ ನೀಡುವುದಾಗಿಯೂ ಆತ ಹೇಳಿದರೂ ಕೇಳದೆ ಆಕೆ ಹಣ್ಣುಗಳನ್ನೆಲ್ಲ ಎಸೆದಿದ್ದಾಳೆ.

ಇದನ್ನೂ ಓದಿ: Viral Video: ಮದುವೆಯಲ್ಲಿ ವರನನ್ನು ಪದೇಪದೆ ತಬ್ಬಿಕೊಂಡ ಬುರ್ಖಾಧಾರಿ ಮಹಿಳೆ; ಅಸಲಿ ವಿಚಾರ ತಿಳಿದು ಶಾಕ್ ಆದ ವಧು!

Viral Video: ಕೂದಲಿಂದಲೇ 12 ಸಾವಿರ ಕೆಜಿ ತೂಕದ ಬಸ್ ಎಳೆದು ಗಿನ್ನೆಸ್ ರೆಕಾರ್ಡ್ ಮಾಡಿದ ಮಹಿಳೆ!