ಸಾಮಾಜಿಕ ಜಾಲತಾಣದಲ್ಲಿ ನಮ್ಮ ಬಾಲ್ಯವನ್ನು ನೆನಪಿಸುವ ಒಂದಷ್ಟು ವಿಡಿಯೋಗಳು, ಫೋಟೋಗಳು ಲಭ್ಯವಾಗುತ್ತವೆ. ಒಂದೊಮ್ಮೆ ಇಂತಹ ವಿಡಿಯೋಗಳನ್ನು ನೋಡಿದ್ದೇ ಆದರೆ “ಈ ರೀತಿ ನನ್ನ ಬಾಲ್ಯದಲ್ಲೂ ಆಗಿದೆ” ಎಂದು ಯೋಚಿಸದೆ ಇರಲಾರರು. ಇದೀಗ ಸಣ್ಣ ಬಾಲಕನ ಮುದ್ದಾದ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೀವು ಬಾಲ್ಯದಲ್ಲಿ ಸ್ಟುಡಿಯೋಗೆ ಹೋಗಿ ಫೋಟೋಗೆ ಪೋಸ್ ಕೊಡುವುದನ್ನು ನೆನಪಿಸಬಹುದು. ಪುಟ್ಟ ಬಾಲಕನೊಬ್ಬ ತನ್ನ ಪಾಸ್‌ಪೋರ್ಟ್ ಫೋಟೋ ಕ್ಲಿಕ್ಕಿಸಿಕೊಳ್ಳುವುದನ್ನು ವೈರಲ್ ವಿಡಿಯೋ (Viral Video) ತೋರಿಸುತ್ತದೆ.
ವೈರಲ್ ವಿಡಿಯೋದಲ್ಲಿ ಕಾಣುವಂತೆ, ಮಹಿಳೆಯೊಬ್ಬರು ತನ್ನ ಎರಡು ಮೂರು ವರ್ಷದ ಮಗನ ಫೋಟೋ ತೆಗೆಸಿಕೊಳ್ಳಲು ಸ್ಟುಡಿಯೋಗೆ ಹೋಗುತ್ತಾರೆ. ಅಲ್ಲಿ ಕ್ಯಾಮರಾಮ್ಯಾನ್ ಹೇಳಿದಂತೆ ಆ ಬಾಲಕ ಕ್ಯಾರಮಾದ ಮುಂದೆ ನಿಂತು ತನ್ನೆಲ್ಲಾ ಹಲ್ಲುಗಳು ಕಾಣುವಂತೆ ಚೀಸ್ ಎಂದು ಹೇಳಿ ಸ್ಮೈಲ್ ಮಾಡುತ್ತಾನೆ. ಇದಾದ ನಂತರ ಕೈ ಕಟ್ಟಿಕೊಂಡು ನಿಲ್ಲುವುದನ್ನು ನೋಡಬಹುದು.
ಈ ವಿಡಿಯೋವನ್ನು firstclassjerk ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ “ನಮ್ಮ ಮಗ ಪಾಸ್‌ಪೋರ್ಟ್ ಸೈಜ್ ಫೋಟೋಗೆ ನಿಲ್ಲುವುದು” ಎಂದು ಶೀರ್ಷಿಕೆ ಬರೆಯಲಾಗಿದೆ. ಈ ವಿಡಿಯೋ ವೈರಲ್ ಪಡೆದು 18.1 ಲಕ್ಷ ವೀಕ್ಷಣೆಗಳನ್ನು ಸಂಗ್ರಹಿಸಿದ್ದು, 13 ಲಕ್ಷಕ್ಕೂ ಹೆಚ್ಚು ಲೈಕ್ಗಳು ಪಡೆದುಕೊಂಡಿದೆ.
ವಿಡಿಯೋ ವೀಕ್ಷಣೆ ಮಾಡಿದ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, “ಆದರೆ, ಅವನು ನಗುವುದನ್ನು ನಾನು ಇಷ್ಟಪಡುತ್ತೇನೆ” ಎಂದಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, ಮೊದಲ ಫೋಟೋ ಮುದ್ದಾಗಿದೆ” ಎಂದಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ, “ಅಯ್ಯೋ, ತುಂಬಾ ಮುದ್ದಾಗಿದೆ” ಎಂದು ಹೇಳಿದ್ದಾರೆ.