
Viral Video : ಕಲಿಯುಗ ಎಂದರೆ ಇದೇ ಏನು? ಕೇಳಬೇಡಿ. ಈ ವಿಡಿಯೋ ನೋಡಿದ ನಂತರ ಇದು ಯಾವ ಯುಗ ಎಂದು ನೀವೇ ನಿರ್ಧರಿಸಿ. ಇಲ್ಲೊಬ್ಬ ಯುವಕ ರಾತ್ರೋರಾತ್ರಿ ಕುಡಿದ ಮತ್ತಿನಲ್ಲಿ ಹೋರಿಸವಾರಿ ಮಾಡಿದ್ದಾನೆ. ಆ ಹೋರಿಯೋ ಕುದುರೆಯಂತೆ ಓಡಿರುವ ರೀತಿ ನೋಡಿದರೆ ಕುಳಿತವ ಯಾವೂರ ರಾಜನೋ ಇವ ಎಂದೆನ್ನಿಸದೇ ಇರಲಾರದು. ಆದರೆ ಇದನ್ನು ನೋಡಿದ ನೆಟ್ಮಂದಿ ಮಾತ್ರ ದಂಗಾಗಿದ್ದಾರೆ.
ಈ ವಿಡಿಯೋ ಅನ್ನು ಹೃಷಿಕೇಶದ ತಪೋವನದ ಬೀದಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಉತ್ತರಾಖಂಡ್ ಪೊಲೀಸರು ತಿಳಿಸಿದ್ದಾರೆ. ಇದೀಗ ಈ ಯುವಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಾಗಿದೆ. ಇನ್ನೆಂದೂ ಈತ ಇಂಥ ಕೃತ್ಯದಲ್ಲಿ ಮತ್ತು ಸಾಹಸದಲ್ಲಿ ತೊಡಗದಂತೆ ಎಚ್ಚರಿಕೆಯನ್ನು ನೀಡಲಾಗಿದೆ.
ಇದನ್ನು ಓದಿ : ಮೊಬೈಲ್ ವಶಪಡಿಸಿಕೊಂಡಿದ್ದಕ್ಕೆ ಶಿಕ್ಷಕರಿಗೆ ವಿದ್ಯಾರ್ಥಿನಿಯಿಂದ ಪೆಪ್ಪರ್ ಸ್ಪ್ರೇ; ವಿಡಿಯೋ ವೈರಲ್
ಉತ್ತರಾಖಂಡ್ ಪೊಲೀಸರು ಈ ವಿಡಿಯೋ ಮತ್ತು ಘಟನೆಯ ವಿವರವನ್ನು ಟ್ವೀಟ್ ಮಾಡಿದ್ದಾರೆ; ‘ಮೇ 5ರಂದು ಮಧ್ಯರಾತ್ರಿ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ತಕ್ಷಣವೇ ಈ ಯುವಕನನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮುಂದೆ ಇರು ಪುನರಾವರ್ತನೆಯಾಗದಂತೆ ಆತನಿಗೆ ಎಚ್ಚರಿಕೆ ನೀಡಲಾಗಿದೆ’.
ಇದನ್ನೂ ಓದಿ : ವೈರಲ್ ಚಿಲ್ಲಿ ಲಿಪ್ ಗ್ಲಾಸ್; ಇದನ್ನು ಟ್ರೆಂಡ್ ಆಗಲು ಬಿಡಬೇಡಿ ಎನ್ನುತ್ತಿರುವ ನೆಟ್ಟಿಗರು
ಆದರೆ ನೆಟ್ಟಿಗರಲ್ಲಿ ಕೆಲವರು ಈತನಕ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಜಲ್ಲಿಕಟ್ಟು ಪಂದ್ಯವನ್ನು ನೆನಪಿಸಿಕೊಂಡು, ಇದು ಕಾನೂನು ರೀತಿ ಅಪರಾಧವಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ಅಪರಾತ್ರಿಯಲ್ಲಿ ಹೀಗೆ ವರ್ತಿಸುವುದು ಎಷ್ಟು ಸರಿ? ಈ ಪ್ರಕರಣವನ್ನು ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಗ್ರಹಿಸಬೇಕಲ್ಲವೆ?
ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:05 pm, Tue, 9 May 23