ನೀವು ಸಾಮಾನ್ಯವಾಗಿ ಮರುಭೂಮಿಯಲ್ಲಿ ಒಂಟೆ ಸವಾರಿ ಕೇಳಿರುತ್ತೀರಿ, ಆದರೆ ಎಂದಾದರೂ ಕಾರಿನಲ್ಲಿ ಒಂಟೆ ಸವಾರಿ ನೋಡಿದ್ದೀರಾ? ಸದ್ಯ ಒಂಟೆಯೊಂದು ಕಾರಿನ ಡಿಕ್ಕಿಯಲ್ಲಿ ಕುಳಿತು ಸವಾರಿ ಮಾಡುವ ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋ ಯಾವುದೋ ಅರಬ್ ದೇಶದ್ದು. ಒಂಟೆಯ ಜಾಲಿ ರೈಡ್ ಕಂಡು ನೆಟ್ಟಿಗರು ಸಾಕಷ್ಟು ಹಾಸ್ಯಸ್ಪದವಾಗಿ ಕಾಮೆಂಟ್ ಮಾಡಿದ್ದಾರೆ.
@everydayreelsday ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾರ್ಚ್ 25ರಂದು ಒಂಟೆಯ ಕಾರ್ ಸವಾರಿಯ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ಎರಡೇ ದಿನದಲ್ಲಿ 20 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಮೂರನೇ ಮಗು ಕೂಡ ಹೆಣ್ಣು ಎಂದು ಹೊಲದಲ್ಲಿ ಎಸೆದ ತಾಯಿ, ಮಗುವಿನ ಶವವನ್ನು ಎಳೆದೊಯ್ದ ಬೀದಿ ನಾಯಿಗಳು
ಕಾರಿನಲ್ಲಿ ಕುಳಿತ ಒಂಟೆ ತುಂಬಾ ಶಾಂತವಾಗಿ ತನ್ನ ಕುತ್ತಿಗೆಯನ್ನು ಹೊರಕ್ಕೆ ಚಾಚಿ ಸುತ್ತಮುತ್ತಲಿನ ಪರಿಸರವನ್ನು ಆನಂದಿಸುತ್ತಾ ಕಾರ್ ರೈಡ್ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ