Professional cuddler: ಅಪರಿಚಿತರನ್ನು ತಬ್ಬಿಕೊಂಡು ಗಂಟೆಗೆ 7400 ರೂ ಗಳಿಸುತ್ತಾಳೆ ಈ ಮಹಿಳೆ
ಡೈಲಿ ಸ್ಟಾರ್ ವರದಿಯ ಪ್ರಕಾರ, 42 ವರ್ಷದ ಆನಿಕೊ ಕಳೆದ ಮೂರು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದಾರೆ. ತಬ್ಬಿಕೊಳ್ಳುವುದು ಒಬ್ಬ ವ್ಯಕ್ತಿಗೆ ಸಂತೋಷ ಮತ್ತು ಒತ್ತಡ ಮತ್ತು ಒಂಟಿತನದಿಂದ ಮುಕ್ತಿಯನ್ನು ನೀಡುತ್ತದೆ ಎಂದು ಅವರು ಹೇಳುತ್ತಾರೆ.
ಅಮೆರಿಕದ ಮ್ಯಾಂಚೆಸ್ಟರ್ ನಿವಾಸಿ ಅನಿಕೊ ರೋಸ್ ಎಂಬ ಮಹಿಳೆಗೆ ತಬ್ಬಿಕೊಳ್ಳುವುದೇ ಆಕೆಯ ವೃತ್ತಿ. ಈಕೆಯ ‘ಮ್ಯಾಜಿಕ್ ಅಪ್ಪುಗೆ’ಯ ವೃತ್ತಿ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈಕೆಯನ್ನು ಒಂದು ಗಂಟೆ ತಬ್ಬಿಕೊಂಡರೆ 70 ಪೌಂಡ್ ಅಂದರೆ ಸುಮಾರು 7400 ರೂಪಾಯಿಗಳನ್ನು ನೀಡಬೇಕು.
ಡೈಲಿ ಸ್ಟಾರ್ ವರದಿಯ ಪ್ರಕಾರ, ಆನಿಕೊ ಮಾಡುವ ಕೆಲಸವನ್ನು ಮುದ್ದು ಎಂದು ಕರೆಯಲಾಗುತ್ತದೆ. 42 ವರ್ಷದ ಆನಿಕೊ ಕಳೆದ ಮೂರು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದಾರೆ. ತಬ್ಬಿಕೊಳ್ಳುವುದು ಒಬ್ಬ ವ್ಯಕ್ತಿಗೆ ಸಂತೋಷ ಮತ್ತು ಒತ್ತಡ ಮತ್ತು ಒಂಟಿತನದಿಂದ ಮುಕ್ತಿಯನ್ನು ನೀಡುತ್ತದೆ ಎಂದು ಅವರು ಹೇಳುತ್ತಾರೆ. ಒಬ್ಬ ವ್ಯಕ್ತಿಯು ದುಃಖ ಅಥವಾ ಒತ್ತಡದಲ್ಲಿದ್ದರೆ, ನನ್ನ ಸ್ಪರ್ಶದಿಂದ ಅವನ ಮಾನಸಿಕ ಆರೋಗ್ಯವು ಸುಧಾರಿಸಲು ಪ್ರಾರಂಭಿಸುತ್ತದೆ ಎಂದು ಆಕೆ ಹೇಳುತ್ತಾಳೆ.
ಇದನ್ನೂ ಓದಿ: ಮೂರನೇ ಮಗು ಕೂಡ ಹೆಣ್ಣು ಎಂದು ಹೊಲದಲ್ಲಿ ಎಸೆದ ತಾಯಿ, ಮಗುವಿನ ಶವವನ್ನು ಎಳೆದೊಯ್ದ ಬೀದಿ ನಾಯಿಗಳು
“ತನ್ನ ಬಳಿಗೆ ಬರುವ ಗ್ರಾಹಕರಲ್ಲಿ 20 ರಿಂದ 65 ವರ್ಷ ವಯಸ್ಸಿನ ವೃದ್ಧರೂ ಸೇರಿದ್ದಾರೆ ಎಂದು ಅನಿಕೊ ಹೇಳುತ್ತಾರೆ. ಸಾಮಾನ್ಯವಾಗಿ ಅವರ ಚಿಕಿತ್ಸಾ ಅವಧಿಯು ಕೇವಲ ಒಂದು ಗಂಟೆಯವರೆಗೆ ಇರುತ್ತದೆ,ಇನ್ನೂ ಹೆಚ್ಚು ಹೊತ್ತು ತಬ್ಬಿಕೊಳ್ಳಬೇಕಾದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕು” ಎಂದು ಹೇಳುತ್ತಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ