Viral:ಇಷ್ಟೆಲ್ಲಾ ಹೋಮ್ ವರ್ಕ್ ಯಾಕ್ ಕೊಡ್ತೀರಾ; ಶಿಕ್ಷಕರಿಗೆ ಪದೇ ಪದೇ ಕರೆ ಮಾಡಿ ತೊಂದರೆ ಕೊಟ್ಟ ತಂದೆಯ ಬಂಧನ

ಈಗೀನ ಕಾಲದ ಶಾಲಾ ಮಕ್ಕಳ ಹೋಮ್ವರ್ಕ್ ಲಿಸ್ಟ್ ನೋಡಿದ್ರೆ, ಪೋಷಕರಿಗೂ ಒಂದು ಬಾರಿ ತಲೆ ಸುತ್ತು ಬರುತ್ತೆ. ಹೌದು ಮಕ್ಕಳಿಗೆ ರಾಶಿರಾಶಿ ಹೋಮ್ವರ್ಕ್ ಕೊಡ್ತಾರೆ. ಇದೇ ರೀತಿ ತನ್ನ ಮಗನಿಗೆ ಸಿಕ್ಕಾಪಟ್ಟೆ ಹೋಮ್ವರ್ಕ್ ನೀಡ್ತಾರೆ ಅಂತ ಕೋಪಗೊಂಡ ವ್ಯಕ್ತಿಯೊಬ್ಬರು ಶಾಲಾ ಶಿಕ್ಷಕರಿಗೆ ನಿರಂತರವಾಗಿ ಕರೆ ಮಾಡಿದ್ದಾರೆ. ಈ ಕಿರಿಕಿರಿಯಿಂದ ಬೇಸತ್ತಾ ಶಾಲಾ ಶಿಕ್ಷರು ದೂರು ಕೊಟ್ಟಿದ್ದು, ಇದೀಗ ಆ ವ್ಯಕ್ತಿಯನ್ನು ಬಂಧಿಸಲಾಗಿದೆ.

Viral:ಇಷ್ಟೆಲ್ಲಾ ಹೋಮ್ ವರ್ಕ್ ಯಾಕ್ ಕೊಡ್ತೀರಾ; ಶಿಕ್ಷಕರಿಗೆ ಪದೇ ಪದೇ  ಕರೆ ಮಾಡಿ ತೊಂದರೆ ಕೊಟ್ಟ  ತಂದೆಯ ಬಂಧನ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Mar 26, 2024 | 7:24 PM

ಈಗೀನ ಕಾಲದ ಮಕ್ಕಳಿಗೆ ನೀಡುವ ಹೋಮ್ವರ್ಕ್ ಗಳನ್ನು ನೋಡಿದ್ರೆ ಪೋಷಕರೇ ಒಂದು ಬಾರಿ ಸುಸ್ತಾಗಿ ಬಿಡುತ್ತಾರೆ. ಹೌದು ಶಾಲಾ ಮಕ್ಕಳಿಗೆ ಪ್ರತಿನಿತ್ಯ ರಾಶಿ ರಾಶಿ ಹೋಮ್ ವರ್ಕ್ ಕೊಡ್ತಾರೆ. ಅದರಲ್ಲೂ ಮಕ್ಕಳ ಕೈಯಿಂದ ಈ ಹೋಮ್ವರ್ಕ್ ಮಾಡಿಸುವುದೇ ಅಮ್ಮ ಅಮ್ಮನಿಗೆ ದೊಡ್ಡ ತಲೆ ನೋವು. ಇದೇ ರೀತಿ ಇಲ್ಲೊಬ್ಬರು ವ್ಯಕ್ತಿ ಮಗನಿಗೆ ನೀಡಿದ ರಾಶಿ ರಾಶಿ ಹೋಮ್ವರ್ಕ್ ನೋಡಿ ಚಿಂತೆಗೀಡಾಗಿ, ಯಾಕೆ ಇಷ್ಟೆಲ್ಲಾ ಹೋಮ್ವರ್ಕ್ ನೀಡೋದು ಅಂತ ಶಾಲಾ ಶಿಕ್ಷಕರಿಗೆ ನಿರಂತರವಾಗಿ ಕರೆ ಮಾಡಿ ಕಿರಿಕಿರಿ ಮಾಡಿದ್ದಾರೆ. ಇದರಿಂದ ಬೇಸತ್ತಾ ಶಾಲಾ ಆಡಳಿತ ಮಂಡಳಿ ಆ ವ್ಯಕ್ತಿಯ ವಿರುದ್ಧ ಠಾಣೆಯನ್ನು ದೂರನ್ನು ನೀಡಿದ್ದು, ಇದೀಗ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ವರದಿಗಳ ಪ್ರಕಾರ ಈ ವಿಚಿತ್ರ ಘಟನೆ ಫೆಬ್ರವರಿ 29 ರಂದು ಅಮೇರಿಕಾದ ಓಹಿಯೋದಲ್ಲಿ ನಡೆದಿದೆ. ಇಲ್ಲಿನ ನಿವಾಸಿಯಾಗಿರುವಂತಹ ಆಡಂ ಸೈಜ್ಮೋರ್ ಎಂಬವರೇ ಬಂಧಿತ ವ್ಯಕ್ತಿ. ಆಡಂ ಅವರ ಮಗ ಕ್ರೇಮರ್ ಎಲಿಮೆಂಟರಿ ಶಾಲೆಯಲ್ಲಿ ಓದುತ್ತಿದ್ದು, ಶಾಲೆಯಲ್ಲಿ ಮಗನಿಗೆ ಸಿಕ್ಕಾಪಟ್ಟೆ ಹೋಮ್ವರ್ಕ್ ನೀಡುತ್ತಿದ್ದರು. ಇದರಿಂದ ಸಿಟ್ಟಿಗೆದ್ದ ಆಡಂ ಶಾಲಾ ಶಿಕ್ಷಕರಿಗೆ ಪದೇ ಪದೇ ಕರೆ ಮಾಡಿ ಕಿರಿಕಿರಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಶಾಲೆಯ ಪ್ರಾಂಶುಪಾಲರಾದ ಜೇಸನ್ ಮೆರ್ಜ್ ಅವರಿಗೆ ಕರೆ ಮಾಡಿ ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ನಂತರವೂ ಆಡಂ ಶಾಲಾ ಶಿಕ್ಷಕರಿಗೆ ಪದೇ ಪದೇ ಕರೆ ಮಾಡಿದ್ದಾರೆ.

ಇದನ್ನೂ ಓದಿ: ಅಮ್ಮನ ಮಡಿಲು ಸೇರಿದ ಕಂದಮ್ಮ, ಆನೆಗಳ ಭಾವನಾತ್ಮಕ ಚಿತ್ರ ಹೇಗಿದೆ? ನೋಡಿ 

ಶಿಕ್ಷಕರಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದನ್ನು ಕಂಡು ಈ ಬಗ್ಗೆ ದೂರು ನೀಡಲು ಈ ವ್ಯಕ್ತಿ ಆಕ್ಸ್ಫರ್ಡ್ ಪೋಲೀಸ್ ಇಲಾಖೆಗೂ ಕರೆ ಮಾಡಿದ್ದಾರೆ. ಠಾಣೆಗೆ ಕೇವಲ ಒಂದು ಗಂಟೆಯಲ್ಲಿ ಬರೋಬ್ಬರಿ 18 ಬಾರಿ ಕರೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಫೋನ್ ಮೂಲಕ ಹಿರಿಯ ಪೊಲೀಸ್ ಅಧಿಕಾರಿಯನ್ನು ತಲುಪಲು ಸಾಧ್ಯವಾಗದಿದ್ದಾಗ ಆಡಂ ಅಧಿಕಾರಿಯನ್ನು ಅವರ ಮನೆಯಲ್ಲಿಯೇ ಭೇಟಿಯಾಗುವುದಕ್ಕೆ ಮುಂದಾಗಿದ್ದರು ಎನ್ನಲಾಗಿದೆ. ಹೀಗೆ ಪದೇ ಪದೇ ಕರೆ ಮಾಡಿ ಪೊಲೀಸರಿಗೆ ಹಾಗೂ ಶಾಲಾ ಶಿಕ್ಷಕರಿಗೆ ಕಿರಿಕಿರಿ ಮಾಡಿದ ಹಿನ್ನೆಯಲ್ಲಿ ಆಡಂ ಅವರನ್ನು ಪೊಲೀಸರು ಬಂಧಿಸಿದ್ದಾರೆ.

“ಇದೊಂದು ವಿಚಿತ್ರ ಪ್ರಕರಣವಾಗಿದ್ದು, ಮಕ್ಕಳಿಗೆ ಒತ್ತಡ ತರುವಷ್ಟು ಹೋಮ್ವರ್ಕ್ ಅನ್ನು ಈ ಶಾಲೆಯಲ್ಲಿ ನೀಡುವುದಿಲ್ಲ ಎಂದು ತನಿಖೆಯ ವೇಳೆ ತಿಳಿದು ಬಂದಿದೆ. ಇನ್ನು ಕರೆ ಮಾಡಿ ಶಾಲಾ ಶಿಕ್ಷಕರಿಗೆ ಕಿರಿಕಿರಿಯುಂಟುಮಾಡಿದ ವ್ಯಕ್ತಿ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿನ ಸಿಂಗಲ್ ಪೇರೆಂಟ್ ಆಗಿದ್ದು, ಆತ ತನ್ನ ಮಕ್ಕಳಿಗೆ ಉತ್ತಮವಾದುದನ್ನೇ ಬಯಸುತ್ತಿದ್ದ, ಅದೇ ಕಾರಣಕ್ಕೆ ಶಾಲಾ ಶಿಕ್ಷಕರಿಗೂ ಕರೆ ಮಾಡಿ ಕಿರಿಕಿರಿ ಮಾಡಿದ್ದು” ಎಂದು ಆಕ್ಸ್ಫರ್ಡ್ ಪೊಲೀಸ್ ಇಲಾಖೆಯ ಡಿಟೆಕ್ವಿವ್ ಸಾರ್ಜೆಂಟ್ ಆಡಮ್ ಪ್ರೈಸ್ ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್