Viral Video: ಅಬ್ಬಬ್ಬಾ, ಜೀವಂತ ಹಾವಿನ ಕರುಳನ್ನು ಬಗೆದ  ಪುಟ್ಟ ಪಕ್ಷಿ, ಇಲ್ಲಿದೆ ಭಯಂಕರ ವಿಡಿಯೋ  

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿ ಹಾಗೂ ಪಕ್ಷಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಕುತೂಹಲಕಾರಿ ವಿಡಿಯೋ ತುಣುಕುಗಳು ಪ್ರತಿನಿತ್ಯ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ಆಶ್ಚರ್ಯಕರ ವಿಡಿಯೋವೊಂದು ಹರಿದಾಡುತ್ತಿದ್ದು, ಪುಟ್ಟ ಪಕ್ಷಿಯೊಂದು ಜೀವಂತ ಹಾವಿನ  ಕರುಳನ್ನೇ ಬಗೆದು ತಿಂದಿದೆ. 

Viral Video: ಅಬ್ಬಬ್ಬಾ, ಜೀವಂತ ಹಾವಿನ ಕರುಳನ್ನು ಬಗೆದ  ಪುಟ್ಟ ಪಕ್ಷಿ, ಇಲ್ಲಿದೆ ಭಯಂಕರ ವಿಡಿಯೋ  
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 26, 2024 | 4:50 PM

ಮುಂಗುಸಿ ಹಾಗೂ ರಣ ಹದ್ದುಗಳು ಹಾವುಗಳ ಪರಮ ಶತ್ರುಗಳು. ಹೌದು ಮುಂಗುಸಿ ಮತ್ತು ಹಾವುಗಳು ಎದುರಾಗಿ ನಿಂತರೆ, ಅಲ್ಲಿ ಅವುಗಳ ಮಧ್ಯೆ ಮಹಾನ್ ಕಾಳಗವೇ ನಡೆಯುತ್ತವೆ.  ಇನ್ನೂ ರಣಹದ್ದುಗಳು ಆಕಾಶದಲ್ಲಿ ಹಾರಾಡುತ್ತಲೇ, ತನ್ನ ಶತ್ರುವಿನ ಬೇಟೆಗೆ  ಹೊಂಚು ಹಾಕುತ್ತಿರುತ್ತವೆ. ಹೀಗೆ ಮುಂಗುಸಿ, ಹಾವು ಕಾಳಗ, ರಣಹದ್ದುಗಳು ಹಾವನ್ನು ಬೇಟೆಯಾಡಿ ಕೊಂದು ಹಾಕುವ ದೃಶ್ಯಗಳನ್ನು ನೀವೆಲ್ಲರೂ ನೋಡಿರುತ್ತೀರಿ ಅಲ್ವಾ. ಅದೇ ರೀತಿ  ಇಲ್ಲೊಂದು ಕುತೂಹಲಕಾರಿ ವಿಡಿಯೋ  ಹರಿದಾಡುತ್ತಿದ್ದು, ಪುಟಾಣಿ ಪಕ್ಷಿಯೊಂದು ದೈತ್ಯ ಹಾವಿನ ಮೇಲೆ ದಾಳಿ ಮಾಡಿ, ಅದಕ್ಕೆ ಕುಕ್ಕಿ ಕುಕ್ಕಿ ಕೊನೆಯಲ್ಲಿ ಹಾವಿನ ಕರುಳನ್ನೇ ಬಗೆದು ತಿಂದಿದೆ. ಈ ಆಘಾತಕಾರಿ ದೃಶ್ಯವನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.

ಕೆಲ ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಘಟನೆ ನಡೆದಿದ್ದು, ಬೂದು ಹಾಗೂ ಹಸಿರು ಬಣ್ಣದ ಬುಷ್-ಶ್ರೈಕ್ ಜಾತಿಯ ಪಕ್ಷಿಯೊಂದು ದೈತ್ಯ  ಹಾವಿನ ಮೇಲೆ ದಾಳಿ ನಡೆಸಿ, ಅದಕ್ಕೆ ಕುಕ್ಕಿ ಕುಕ್ಕಿ ಕೊನೆಯಲ್ಲಿ ಹಾವಿನ ಕರುಳನ್ನೇ ಬಗೆದು ತಿಂದಿದೆ. ಈ ಆಘಾತಕಾರಿ ದೃಶ್ಯವನ್ನು ವನ್ಯಜೀವಿ ವಿಭಾಗದ ಪಶುವೈದ್ಯ ಗೇಬ್ರಿಯೆಲಾ ಬೆನಾವಿಡೆಸ್ ಸೆರೆಹಿಡಿದಿದ್ದು, ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು @Latest Sightings ಎಂಬ ಹೆಸರಿನ ಯೂಟ್ಯೂಬ್  ಚಾನೆಲ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಬೂದು ಹಾಗೂ ಹಸಿರು ಬಣ್ಣದ ಬುಷ್-ಶ್ರೈಕ್ ಜಾತಿಯ ಪಕ್ಷಿಯೊಂದು ದೈತ್ಯ  ಹಾವಿನ ಮೇಲೆ ದಾಳಿ ನಡೆಸಿ, ಕೊನೆಯಲ್ಲಿ ಹಾವಿನ ಕರುಳನ್ನೇ ಬಗೆದು ತಿನ್ನುತ್ತಿರುವ ದೃಶ್ಯವನ್ನು ಕಾಣಬಹುದು. ಗೇಬ್ರಿಯೆಲಾ ಬೆನಾವಿಡೆಸ್ ಹಾಗೂ ಅವರ ಪತ್ನಿ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ನಿರ್ಜನ ಪ್ರದೇಶವೊಂದರಲ್ಲಿ ಸರಸರನೇ ತೆವಳಿಕೊಂಡು ಹೋಗುತ್ತಿದ್ದ ಹಾವನ್ನು ಕಂಡು ಪುಟ್ಟ ಪಕ್ಷಿಯೊಂದು ಹಾವಿನ ಮೇಲೆ ದಾಳಿ ನಡೆಸಿ, ತನ್ನ ಚೂಪಾದ ಕೊಕ್ಕುಗಳಿಂದ ಹಾವಿನ ದೇಹವನ್ನು ಕುಕ್ಕಿ ಕುಕ್ಕಿ  ಅದರ ಕರುಳನ್ನೇ ಬಗೆದಿದೆ. ಪಕ್ಷಿಯ ದಾಳಿಯಿಂದ ತಪ್ಪಿಸಿಕೊಳ್ಳಲಾಗದೆ, ನೋವನ್ನು ತೆಡೆದುಕೊಳ್ಳಲಾರದೆ ಹಾವು ಅಲ್ಲೇ ಬಿದ್ದು ಬಿಡುತ್ತೆ, ಕೊನೆಯಲ್ಲಿ  ಆ ಪಕ್ಷಿ ಹಾವಿನ ಕರುಳನ್ನೇ ಕಿತ್ತು ತಿಂದಿದೆ.

ಇದನ್ನೂ ಓದಿ: ಬ್ಯಾಂಕ್​​ ದರೋಡೆ; ಸಿಸಿಟಿವಿ ದೃಶ್ಯ ಕಂಡು ಬೆಚ್ಚಿ ಬಿದ್ದ ಪೊಲೀಸರು

ಈ ಆಘಾತಕಾರಿ ವಿಡಿಯೋ  ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ.  ಒಬ್ಬ ಬಳಕೆದಾರರು ʼಈ ಪಕ್ಷಿ ಪ್ರಭೇದವು ನಿಜವಾಗಿಯೂ ಹಾವುಗಳಿಗೆ ತೊಂದರ ನೀಡುವುದಿಲ್ಲ, ಆದರೆ ಈ ದೃಶ್ಯವನ್ನು ಕಂಡು ಆಶ್ಚರ್ಯವಾಯಿತುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಪುಟ್ಟ ಪಕ್ಷಿಯ ಧೈರ್ಯಕ್ಕೆ ಮೆಚ್ಚಲೇಬೇಕುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ