ಆಟೋ ಡ್ರೈವರ್​ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ಕೊಟ್ಟ ವಿಡಿಯೋ ವೈರಲ್

Maharashtra : ಮಹಾರಾಷ್ಟ್ರದ ಥಾಣೆಯಲ್ಲಿ ಆಟೋಚಾಲಕನೊಬ್ಬ 21 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ತನ್ನ ಆಟೋಗುಂಟ ದರದರನೆ ಎಳೆದೊಯ್ದು ಕಿರುಕುಳ ನೀಡಿದ್ದಾನೆ.

ಆಟೋ ಡ್ರೈವರ್​ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ಕೊಟ್ಟ ವಿಡಿಯೋ ವೈರಲ್
College Girl Molested By Auto Driver Dragged For 500 Meters With Vehicle In Thane
ಶ್ರೀದೇವಿ ಕಳಸದ

Updated on: Oct 15, 2022 | 10:46 AM

Viral Video : ಸಾರ್ವಜನಿಕ ಸ್ಥಳಗಳಲ್ಲಿ ದೌರ್ಜನ್ಯ, ಕಿರುಕುಳದಂಥ ಸಮಸ್ಯೆಗಳು ದಿನೇದಿನೇ ಹೆಚ್ಚುತ್ತಿವೆ. ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿ ಮರೆಯಾಗುತ್ತಿದೆ. ದಿನವೂ ಒಂದಿಲ್ಲಾ ಒಂದು ಇಂಥ ಘಟನೆಗಳು ನಡೆಯುತ್ತಿದ್ದು ವಿಡಿಯೋ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಮಹಾರಾಷ್ಟ್ರದ ಥಾಣೆಯಲ್ಲಿ 21 ವರ್ಷದ ಕಾಲೇಜು ವಿದ್ಯಾರ್ಥಿನಿಗೆ ಆಟೋ ಚಾಲಕನೊಬ್ಬ ಹಾಡುಹಗಲೇ ಕಿರುಕುಳ ನೀಡಿದ್ದಾನೆ. ತನ್ನ ಆಟೋಗುಂಟ ಸುಮಾರು 500 ಮೀಟರಿನಷ್ಟು ಆಕೆಯನ್ನು ದರದರನೆ ಎಳೆದೊಯ್ದಿದ್ದಾನೆ. ಈ ಆತಂಕಕಾರಿ ಘಟನೆಯ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಈ ಘಟನೆ ಶುಕ್ರವಾರದಂದು ನಡೆದಿದೆ. ಇನ್ಸ್‌ಪೆಕ್ಟರ್ ಜೈರಾಜ್ ರಾಣಾ ಪ್ರಕಾರ, ಆಟೋ ಚಾಲಕ ಆಕೆಗೆ ಛೇಡಿಸಿದ್ದಾನೆ. ಆ ಕುರಿತು ಆಕೆ ಅವನನ್ನು ಪ್ರಶ್ನಿಸಿದಾಗ ಆಕೆಯ ಕೈಹಿಡಿದಿದ್ದಾನೆ. ಆಕೆ ಅವನ ಕೈಬಿಡದೇ ಇದ್ದಾಗ ತನ್ನ ಆಟೋಗುಂಟ ಎಳೆದೊಯ್ದಿದ್ದಾನೆ. ಈ ದೃಶ್ಯ ಅಮಾನವೀಯತೆಯಿಂದ ಕೂಡಿದೆ.

ಆಟೋ ಚಾಲಕ ಪರಾರಿಯಾಗಲು ಯತ್ನಿಸಿದಾಗ ಆರಂಭದಲ್ಲಿ ಅವನ ಯತ್ನ ವಿಫಲವಾಗಿದೆ. ಏಕೆಂದರೆ, ಆಕೆ ಅವನ ಕೈಯನ್ನು ಗಟ್ಟಿಯಾಗಿ ಹಿಡಿದಿದ್ದಳು. ಅವನು ಸುಮಾರು 500 ಮೀ. ವರೆಗೆ ಹಾಗೇ ಆಕೆಯನ್ನು ಎಳೆದುಕೊಂಡೇ ಹೋಗಿದ್ದಾನೆ. ಆದರೆ, ಕೊನೆಗೂ ಆತ ಆಕೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದು ರಾಣಾ ತಿಳಿಸಿದ್ದಾರೆ.

ಶುಕ್ರವಾರ ಬೆಳಗ್ಗೆ 6.45ರ ಸುಮಾರಿಗೆ ಈ ಘಟನೆ ನಡೆದಿದೆ. ಮಹಿಳಾ ದೌರ್ಜನ್ಯದಡಿ ಕೇಸ್​ ದಾಖಲಿಸಲಾಗಿದೆ. ಆದರೆ ಆರೋಪಿ ಪರಾರಿಯಾಗಿದ್ದಾನೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:44 am, Sat, 15 October 22

Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

Follow Us