ಸಾಮಾನ್ಯವಾಗಿ ಮಹಿಳೆಯರ ಬೀದಿಜಗಳಗಳನ್ನು ನೊಡಿರುತ್ತೇವೆ. ನೀರಿನ ವಿಷಯದಿಂದ ಹಿಡಿದು ಕ್ಷುಲ್ಲಕ ಕಾರಣಗಳಿಗೂ ಜಗಳವಾಡುತ್ತಾ, ಕೆಲವು ಹೆಂಗಸರು ಬೀದಿ ರಂಪ ಮಾಡುತ್ತಾರೆ. ಇನ್ನು ಈ ಮಹಿಳೆಯರ ಜಡಡೆಜಗಳವನ್ನು ನೋಡುವುದೆಂದರೆ ಕೆಲವರಿಗೆ ತಮಾಷೆಯಾಗಿಬಿಟ್ಟಿದೆ. ಇಂತಹ ಜಡೆ ಜಗಳಗಳ ಅದೆಷ್ಟೋ ಉದಾಹರಣೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ವೀಡಿಯೋಗಳಲ್ಲಿಯೂ ನಾವು ನೋಡಿರುತ್ತೇವೆ ಅಂತಹದ್ದೇ ಜಡೆ ಜಗಳದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದನ್ನು ಮಾಡುತ್ತಿದೆ.
The cop just walks in there and pepper sprays everyone and walks away, like “job’s done.” pic.twitter.com/tQyZLwgkjP
— Catch Up (@CatchUpFeed) May 11, 2023
ಟ್ವಿಟರ್ ನಲ್ಲಿ ವೈರಲ್ ಆಗಿರುವ ಈ ವೀಡಿಯೋದಲ್ಲಿ ವಿದೇಶದಲ್ಲಿ ಮಹಿಳೆಯರ ಗುಂಪೊಂದು ಕಿತ್ತಾಡಿಕೊಳ್ಳುತ್ತಾ ಬೀದಿ ಜಗಳದಲ್ಲಿ ತೊಡಗಿರುವ ದೃಶ್ಯವನ್ನು ಕಾಣಬಹುದು. ಮಹಿಳೆಯರು ರಸ್ತೆ ಬದಿಯ ಅಂಗಡಿಗಳ ಬಳಿ ತಮ್ಮ ಕೈಯಲ್ಲಿರುವ ವಸ್ತುಗಳನ್ನು ಕಿತ್ತು ಬಿಸಾಡುತ್ತಾ, ಜಡೆಗಳನ್ನು ಎಳೆದಾಡುತ್ತಾ ರಂಪಾಟವನ್ನು ಮಾಡುತ್ತಿರುತ್ತಾರೆ. ಅವರ ರಂಪಾಟವನ್ನು ಯಾರಿಂದಲೂ ತಡೆಯಲಾರದೆ ಜನರು ಮೂಕಪ್ರೇಕ್ಷಕರಂತೆ ಅವರ ಜಗಳವನ್ನು ನೋಡುತ್ತಾ ನಿಂತಿರುತ್ತಾರೆ. ಅಷ್ಟರಲ್ಲಿ ಪೋಲಿಸರೊಬ್ಬರು ಆ ಸ್ಥಳಕ್ಕೆ ಧಾವಿಸಿ, ಮಹಿಳೆಯರ ಜಗಳವನ್ನು ನಿಲ್ಲಿಸುವ ಸಲುವಾಗಿ ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇಯನ್ನು ಸಿಂಪಡಿಸುತ್ತಾರೆ. ಅಷ್ಟರಲ್ಲಿ ಆ ಜಗಳಗಂಟಿಯರು ಮತ್ತು ಅಲ್ಲಿ ಅವರ ಜಗಳವನ್ನು ವೀಕ್ಷಿಸುತ್ತಿದ್ದ ಜನರು ಮೆಣಸಿನ ಸ್ಪ್ರೇಯ ಘಾಟನ್ನು ತಡೆಯಲಾರದೆ ಕೆಮ್ಮುತ್ತಾ, ಮುಖ ಮುಚ್ಚಿಕೊಂಡು ಓಡಿ ಹೋಗುತ್ತಾರೆ. ಇಷ್ಟಾದರೂ ಜಗಳವನ್ನು ನಿಲ್ಲಿಸದ ಮಹಿಳೆಯರ ಗುಂಪು ಒಂದಷ್ಟು ದೂರ ಹೋಗಿ ಮತ್ತೊಮ್ಮೆ ಜಡೆಗಳನ್ನು ಎಳೆದಾಡುತ್ತಾ ಜಗಳವಾಡುತ್ತಾರೆ. ತಕ್ಷಣ ಆ ಪೋಲಿಸ್ ಪೇದೆ ಅಲ್ಲಿಗೆ ಹೋಗಿ ಇನ್ನೊಮ್ಮೆ ಸರಿಯಾಗಿ ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಸಿಂಪಡಿಸುತ್ತಾರೆ.
ಇದನ್ನೂ ಓದಿ: ಈ ಹುಡುಗಿ ಹೀಗೆ ನರ್ತಿಸಿದರೆ, ರಾಧಾ ಕೈಸೆ ನಾ ಜಲೇ?
ಈ ವೀಡಿಯೋವನ್ನು ‘ಕ್ಯಾಚ್ ಅಪ್’ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ‘ಪೋಲಿಸ್ ಅಲ್ಲಿಗೆ ಹೋಗಿ ಎಲ್ಲರಿಗೂ ಪೆಪ್ಪರ್ ಸ್ಪ್ರೇ ಮಾಡಿ ಕೆಲಸ ಮುಗಿದಿದೆ ಎಂಬಂತೆ ಹೊರನಡೆದರು’ ಎಂಬ ಶೀರ್ಷಿಕೆಯನ್ನು ವೀಡಿಯೋಗೆ ನೀಡಿದ್ದಾರೆ. ವೈರಲ್ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಹಾಗೂ 2 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಮತ್ತು ಹಲವರು ತರಹೇವಾರಿ ಕಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು ‘ಆ ಮಹಿಳೆಯರನ್ನು ಬಂಧಿಸಬೆಕಿತ್ತು’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ರಸ್ತೆಗಳ ಉದ್ದಕ್ಕೂ ಇರುವ ಪ್ರತಿಯೊಂದು ಅಂಗಡಿಗಳು ಪೆಪ್ಪರ್ ಸ್ಪ್ರೇಯನ್ನು ಹೊಂದಿರಬೇಕು. ಮತ್ತು ಈ ರೀತಿ ಜಗಳವಾದಾಗ ಅದನ್ನು ಅವರ ಮುಖಕ್ಕೆ ಸಿಂಪಡಿಸಬೇಕು’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಇದೊಂದು ಉತ್ತಮ ಉಪಾಯ’ ಎಂದು ಹೇಳುತ್ತಾ ಪೋಲಿಸರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:57 pm, Sat, 13 May 23