ಮೊದಲೇ ರಸ್ತೆಗಳಲ್ಲಿ ಹೊಂಡಾ ಗುಂಡಿಗಳು, ಈ ನಡುವೆ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಯಲ್ಲಿ ತುಂಬಿದ ನೀರು, ಸಂಚಾರ ನಡೆಸಲು ವಾಹನ ಸವಾರರ ಪರದಾಟ, ವೈದ್ಯರನ್ನು ಭೇಟಿಯಾಗುವ ವೇಳೆ ಬೈಕ್ ಸಹಿತ ಐದಾರಡಿ ಆಳದ ಮ್ಯಾನ್ಹೋಲ್ಗೆ ಬಿದ್ದ ದಂಪತಿ, ಇದರ ವಿಡಿಯೋ ಸಾಮಾಜಿಕ ಜಲತಾಣದಲ್ಲಿ ಭಾರಿ ವೈರಲ್, ಇದನ್ನು ”ಪ್ರಧಾನ ಮಂತ್ರಿ ಈಜುಕೊಳ ಯೋಜನೆ” ಎಂದ ನೆಟ್ಟಿಗರು.
ಇದನ್ನೂ ಓದಿ: Viral Video: ದಾಖಲೆಯ ಮಳೆಯ ನಂತರ ಬೆಚ್ಚಿಬೀಳಿಸುವಂತೆ ಗರ್ಜಿಸಿದ ಜಲಪಾತ, ಸೇತುವೆ ಮೇಲಿಂದ ಚಿಮ್ಮಿದ ನೀರು!
ಸುರಿದ ಧಾರಾಕಾರ ಮಳೆಯಿಂದಾಗಿ ಉತ್ತರಪ್ರದೇಶದ ಅಲಿಗಢದ ರಸ್ತೆಯೊಂದರಲ್ಲಿ ನೀರು ತುಂಬಿಕೊಂಡಿತ್ತು. ಅಲ್ಲದೆ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು. ಈ ನಡುವೆ ವೈದ್ಯರನ್ನು ನೋಡಲು ಬಂದ ದಂಪತಿ ದ್ವಿಚಕ್ರ ವಾಹನ ಸಹಿತ ನೀರು ತುಂಬಿದ ಐದಾರಡಿ ಆಳದ ಮ್ಯಾನ್ಹೋಲ್ಗೆ ಬಿದ್ದಿದ್ದಾರೆ. ಕೂಡಲೇ ಪಕ್ಕದಲ್ಲಿದ್ದ ವಾಹನ ಸವಾರರು ಮತ್ತು ಸ್ಥಳೀಯರು ಅವರ ನೆರವಿಗೆ ದಾವಿಸಿ ಮ್ಯಾನ್ಹೋಲ್ನಿಂದ ದಂಪತಿಯನ್ನು ಮೇಲೆತ್ತಿದ್ದಾರೆ.
ಇದನ್ನೂ ಓದಿ: Viral Video: ಬಾವಿಗೆ ಬಿದ್ದ ಚಿರತೆ, ಅರಣ್ಯಾಧಿಕಾರಿಗಳ ರಕ್ಷಣಾ ಕಾರ್ಯಕ್ಕೆ ನೆಟ್ಟಿಗರ ಶ್ಲಾಘನೆ
ದಂಪತಿ ಮ್ಯಾನ್ಹೋಲ್ಗೆ ಬೀಳುವ ಹಾಗೂ ಅವರನ್ನು ರಕ್ಷಣೆ ಮಾಡುವ ವಿಡಿಯೋ ಕ್ಲಿಪ್ ಅನ್ನು Aavish Zaidi ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಉತ್ತರ ಪ್ರದೇಶದ ಅಲಿಗಢದಲ್ಲಿ ಚಿತ್ರೀಕರಿಸಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರೊಬ್ಬರು “ಪ್ರಧಾನ ಮಂತ್ರಿ ಈಜುಕೊಳ ಯೋಜನೆ” ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಮ್ಯಾನ್ಹೋಲ್ ಅನ್ನು “ಭೂಗತ ಪಾರ್ಕಿಂಗ್ ಸೌಲಭ್ಯ” ಎಂದು ಹೇಳಿದ್ದಾರೆ.
Visuals from UP's Aligarh.
Leaving this here. pic.twitter.com/CmMoTo5vwY
— Aavish Zaidi (@Syedzada05) June 19, 2022
ವರದಿಗಳ ಪ್ರಕಾರ, ದ್ವಿಚಕ್ರ ವಾಹನದಲ್ಲಿದ್ದವರು ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿ ಮತ್ತು ಅವರ ಪತ್ನಿಯಾಗಿದ್ದು, ಅವರು ವೈದ್ಯರನ್ನು ಭೇಟಿ ಮಾಡಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ಕಾಣುವಂತೆ ತಮ್ಮ ದ್ವಿಚಕ್ರ ವಾಹನವನ್ನು ಪಾರ್ಕಿಂಗ್ ಮಾಡಲು ಮುಂದಾಗಿರುವಂತೆ ಕಾಣುತ್ತದೆ.
ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ