Mumbai: ಬಿಎಂಸಿ ಶಿವಾಜಿ ಪಾರ್ಕ್ನ ಈಜುಕೊಳದಲ್ಲಿ ಮೊಸಳೆ (Crocodile) ಪತ್ತೆಯಾಗಿದ್ದು ವಿಡಿಯೋ ವೈರಲ್ ಆಗುತ್ತಿದೆ. ಅಕ್ಟೋಬರ್ 3ರಂದು ಈ ವಿಡಿಯೋ ಅನ್ನು X ನಲ್ಲಿ ಪೋಸ್ಟ್ ಮಾಡಲಾಗಿದೆ. ಎರಡು ಅಡಿ ಇರುವ ಈ ಮರಿಮೊಸಳೆ ಬೆಳಗ್ಗೆ 5.30ರ ಸುಮಾರಿಗೆ ಈಜುಗೊಳದಲ್ಲಿ ಕಾಣಿಸಿಕೊಂಡಿದೆ. ತಕ್ಷಣವೇ ತಜ್ಞರನ್ನು ಕರೆಕಳುಹಿಸಲಾಗಿದ್ದು, ಅರಣ್ಯ ಇಲಾಖೆಗೆ ಅದನ್ನು ರವಾನೆ ಮಾಡಲಾಗುತ್ತಿದೆ. ಈ ಈಜುಗೊಳದಲ್ಲಿ ಮಕ್ಕಳಾದಿಯಾಗಿ ಪ್ರತೀದಿನ ಸುಮಾರು 2,000 ಜನರು ಈಜಲು ಬರುತ್ತಾರೆ. ಅದೃಷ್ಟವಶಾತ್ ಅದು ಯಾರಿಗೂ ಕಚ್ಚಿಲ್ಲ. ಆದರೆ, ಇದನ್ನು ರಕ್ಷಿಸುವ ಸಂದರ್ಭದಲ್ಲಿ ಈಜುಗೊಳದ ಸ್ವಚ್ಛತಾ ಸಿಬ್ಬಂದಿಯು ಇದರ ಕಡಿತಕ್ಕೆ ಒಳಗಾಗಿದ್ಧಾರೆ.
ಇದನ್ನೂ ಓದಿ : Viral Video: ‘ಅತ್ಯಂತ ಮೂರ್ಖ ವ್ಯಕ್ತಿ ಪ್ರಶಸ್ತಿ’ ಪಡೆದ ಮಹಿಳೆ; ಈ ಪ್ರಶಸ್ತಿಯ ಮಾನದಂಡ ಇಲ್ಲಿದೆ
Crocodile inside the BMC Shivaji Park Swimming Pool in Dadar
A 2-foot-long crocodile was discovered in the pool and bit a BMC Pool employee, who was brought to the hospital.#Maharashtra #Nanded #AsianGames2023 #YashasviJaiswal #NewsClick Abhisar Sharma Delhi Police pic.twitter.com/3ULgNuIfud
— zadakhabar (@zadakhabar) October 3, 2023
‘ಇಂದು ಮುಂಜಾನೆ 5.30ರ ಸುಮಾರಿಗೆ ಇಲ್ಲಿಯ ಈಜುಕೊಳದಲ್ಲಿ ಮೊಸಳೆ ಮರಿ ಪತ್ತೆಯಾಗಿದೆ. ತಜ್ಞರ ನೆರವಿನಿಂದ ಅದನ್ನು ರಕ್ಷಿಸಲಾಗಿದೆ. ಅರಣ್ಯ ಇಲಾಖೆಗೆ ಅದನ್ನು ಹಸ್ತಾಂತರಿಸುವ ಪ್ರಕ್ರಿಯೆ ಸಾಗಿದೆ. ಆದರೆ ಈಜುಕೊಳದಲ್ಲಿ ಈ ಮೊಸಳ ಮರಿ ಎಲ್ಲಿಂದ ಹೇಗೆ ಬಂದಿತು ಎನ್ನುವುದನ್ನು ಪತ್ತೆ ಹಚ್ಚಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಉಪ ಆಯುಕ್ತ (ಉದ್ಯಾನಗಳು) ಕಿಶೋರ್ ಗಾಂಧಿ ತಿಳಿಸಿದ್ದಾರೆ.
ಇದನ್ನೂ ಓದಿ : Viral Video: ‘ಕ್ಯಾನ್ಸರ್ಮುಕ್ತಳಾಗಿ ನಿಮ್ಮೆದುರು ಇಂದು ಹೀಗೆ ಇರುತ್ತೇನೆಂದು ಅಂದುಕೊಂಡಿರಲೇ ಇಲ್ಲ’
ಈಜುಕೊಳ ಮತ್ತು ರಂಗಮಂದಿರದ ಸಂಯೋಜಕ ಸಂದೀಪ್ ವೈಶಂಪಾಯನ್, ‘ಪ್ರತಿದಿನ ಬೆಳಿಗ್ಗೆ ಈಜುಕೊಳವನ್ನು ಸದಸ್ಯರಿಗಾಗಿ ಮುಕ್ತಗೊಳಿಸುವ ಮೊದಲು ಸಿಬ್ಬಂದಿಯು ಜಾಗ್ರತೆಯಿಂದ ಸ್ಥಳ ಪರಿಶೀಲನೆ ನಡೆಸುತ್ತದೆ. ಆ ಪ್ರಕಾರ ಇಂದು ಬೆಳಗ್ಗೆ 5.30ರ ಸುಮಾರಿಗೆ ಈಜುಕೊಳವನ್ನು ಪರಿಶೀಲಿಸಿದಾಗ ಈಜುಕೊಳದಲ್ಲಿ ಮೊಸಳೆ ಮರಿ ಪತ್ತೆಯಾಗಿದೆ. ಈ ಈಜುಕೊಳದ ಪಕ್ಕದಲ್ಲಿಯೇ ಖಾಸಗಿ ಮೃಗಾಲಯ ಮ್ಯೂಸಿಯಂ ಇರುವುದು ಗಮನಿಸಬೇಕಾದ ಸಂಗತಿ. ಬಹುಶಃ ಮೊಸಳೆ ಅಲ್ಲಿಂದ ಬಂದಿರುವ ಸಾಧ್ಯತೆ ಇದೆ.’ ಎಂದಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ