Viral Video: ಅಮ್ಮನ ಮದುವೆಯಲ್ಲಿ ಮಗಳ ಸಂಭ್ರಮ; ಈ ವಿಡಿಯೋ ನೋಡಿದರೆ ಅಚ್ಚರಿಯಾಗದಿರದು!

ಈ ಟ್ವೀಟ್ ಅನ್ನು 21,000ಕ್ಕೂ ಹೆಚ್ಚು ಬಾರಿ ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಈ ಅಮ್ಮ-ಮಗಳ ಸಂಬಂಧಕ್ಕೆ ಹಾಗೂ ಯುವತಿಯ ತಾಯಿಯ 2ನೇ ವಿವಾಹದ ಸಂಭ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ.

Viral Video: ಅಮ್ಮನ ಮದುವೆಯಲ್ಲಿ ಮಗಳ ಸಂಭ್ರಮ; ಈ ವಿಡಿಯೋ ನೋಡಿದರೆ ಅಚ್ಚರಿಯಾಗದಿರದು!
ಅಮ್ಮನ ಮದುವೆಯಲ್ಲಿ ಮಗಳ ಸಂಭ್ರಮ
Edited By:

Updated on: Dec 19, 2021 | 8:38 AM

ಈಗಾಗಲೇ ಮದುವೆಯ ಸೀಸನ್ ಶುರುವಾಗಿದೆ. ಸೋಷಿಯಲ್ ಮೀಡಿಯಾ ಪೇಜ್ ಓಪನ್ ಮಾಡಿದರೆ ರಂಗು ರಂಗಿನ ಮೆಹಂದಿ, ಸಂಗೀತ್, ಪ್ರಿ ವೆಡ್ಡಿಂಗ್, ಮದುವೆಯ ಸಂಭ್ರಮದ್ದೇ ಫೋಟೋ, ವಿಡಿಯೋಗಳು ತುಂಬಿ ತುಳುಕುತ್ತಿವೆ. ಆದರೆ, ಇಲ್ಲೊಬ್ಬಳು ಯುವತಿ ತನ್ನ ಅಮ್ಮನಿಗೆ ಮದುವೆ ಮಾಡಿಸಿ, ಆ ವಿಡಿಯೋ, ಫೋಟೋಗಳನ್ನು ಹಂಚಿಕೊಂಡು ನೆಟ್ಟಿಗರನ್ನು ಬೆರಗುಗೊಳಿಸಿದ್ದಾಳೆ. ತನ್ನ ತಾಯಿಯ 2ನೇ ಮದುವೆಯ ಬಗ್ಗೆ ಆಕೆ ಇನ್​ಸ್ಟಾಗ್ರಾಂನಲ್ಲಿ ಹಾಕಿರುವ ಭಾವನಾತ್ಮಕ ಪೋಸ್ಟ್ ವೈರಲ್ ಆಗಿದೆ.

ಎಷ್ಟೋ ಬಾರಿ ಸಂಪ್ರದಾಯದ ಹೆಸರಿನಲ್ಲಿ ನಮಗೆ ಇಷ್ಟವಿಲ್ಲದೇ ಇದ್ದರೂ ಮದುವೆಯಾದ ವ್ಯಕ್ತಿಯೊಂದಿಗೆ ಜೀವನಪೂರ್ತಿ ಹೊಂದಾಣಿಕೆ ಮಾಡಿಕೊಂಡು ಇರಬೇಕಾಗುತ್ತದೆ. ಆದರೆ, ಆ ಕಟ್ಟುಪಾಡುಗಳನ್ನು ಮೀರಿ ನನ್ನಮ್ಮ ತನಗಿಷ್ಟವಿಲ್ಲದ ಮೊದಲ ಮದುವೆಯಿಂದ ದೂರ ಸರಿದಿದ್ದಾಳೆ. ಇದೀಗ ಅಮ್ಮ ಹೊಸ ಜೀವನವನ್ನು ಶುರು ಮಾಡಲು ನಿರ್ಧರಿಸಿದ್ದಾಳೆ. ನನ್ನ ಅಮ್ಮ ಮದುವೆಯಾಗುತ್ತಿದ್ದಾಳೆ ಎಂದರೆ ನನಗೇ ನಂಬಲಾಗುತ್ತಿಲ್ಲ. ಇಷ್ಟು ಮುದ್ದಾದ ಮದುಮಗಳನ್ನು ಬೇರೆಲ್ಲಾದರೂ ನೋಡಿದ್ದೀರಾ? ಎಂದು ಅಲ್ಫಾ ಎಂಬ ಹೆಸರಿನ ಯುವತಿ ಟ್ವಿಟ್ಟರ್​ನಲ್ಲಿ ತನ್ನ ತಾಯಿಯ ಮದುವೆಯ ವಿಡಿಯೋ, ಆಕೆಯ ಮೆಹಂದಿ ಫಂಕ್ಷನ್ ಅನ್ನು ಶೇರ್ ಮಾಡಿಕೊಂಡಿದ್ದಾಳೆ.

ನನ್ನ ಅಮ್ಮ ಮದುಮಗಳ ಉಡುಗೆಯಲ್ಲಿ ಎಷ್ಟು ಸುಂದರವಾಗಿ ಕಾಣುತ್ತಿದ್ದಾಳೆ ಅಲ್ಲವೇ? ಅಮ್ಮ ಬಹಳ ಖುಷಿಯಾಗಿದ್ದಾಳೆ ಎಂದು ಆಕೆಯ ಮೆಹಂದಿ ಫಂಕ್ಷನ್ ವಿಡಿಯೋವನ್ನು ಟ್ವಿಟ್ಟರ್ ಪೇಜಿನಲ್ಲಿ ಶೇರ್ ಮಾಡಲಾಗಿದೆ.

ಈ ಟ್ವೀಟ್ ಅನ್ನು 21,000ಕ್ಕೂ ಹೆಚ್ಚು ಬಾರಿ ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಈ ಅಮ್ಮ-ಮಗಳ ಸಂಬಂಧಕ್ಕೆ ಹಾಗೂ ಯುವತಿಯ ತಾಯಿಯ 2ನೇ ವಿವಾಹದ ಸಂಭ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Shocking Video: ತನಗೆ ಮತ ಹಾಕದ ಯುವಕರಿಗೆ ಬಸ್ಕಿ ಹೊಡೆಸಿ, ಎಂಜಲು ನೆಕ್ಕಿಸಿದ ರಾಜಕಾರಣಿ; ಶಾಕಿಂಗ್ ವಿಡಿಯೋ ಇಲ್ಲಿದೆ

Shocking Video: ಪ್ಯಾರಾಸೈಲಿಂಗ್ ಮಾಡುವ ವೇಳೆ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ದಂಪತಿ; ಶಾಕಿಂಗ್ ವಿಡಿಯೊ ವೈರಲ್