Viral Video: ಮಳೆಗಾಲದಲ್ಲಿ ಹೇಗೆ ನಡೆದುಕೊಂಡು ಹೋಗಬೇಕು ಗೊತ್ತಾ? ಈ ವಿಡಿಯೋ ನೋಡಿ

ಮಳೆಗಾಲದಲ್ಲಿ ನೀರು ತುಂಬಿರುವ ರಸ್ತೆಯಲ್ಲಿ ಹೇಗೆ ನಡೆಯಬೇಕು ಎಂದು ನಟಿ ಶ್ರದ್ಧಾ ಆರ್ಯಾ ಅವರ ರೀಲ್ಸ್ ಮಾಡಿದ್ದಾರೆ. ಆ ರೀಲ್ಸ್ ಇಲ್ಲಿದೆ ನೋಡಿ.

Viral Video: ಮಳೆಗಾಲದಲ್ಲಿ ಹೇಗೆ ನಡೆದುಕೊಂಡು ಹೋಗಬೇಕು ಗೊತ್ತಾ? ಈ ವಿಡಿಯೋ ನೋಡಿ
ನಟಿ ಶ್ರದ್ಧಾ ಆರ್ಯಾ ರೀಲ್ಸ್
Edited By:

Updated on: Jun 26, 2022 | 4:33 PM

ಮಳೆಗಾಲ ಬಂತೆಂದರೆ ಸಾಕು ಹೇಗಪ್ಪಾ ರಸ್ತೆಯಲ್ಲಿನ ಗಲೀಜು ನೀರಿನಲ್ಲಿ ಅಥವಾ ನೀರಿನಲ್ಲಿ ನಡೆದುಕೊಂಡು ಹೋಗುವುದು ಎಂದು ಹಣೆ ಚಚ್ಚಿಕೊಳ್ಳುವವರೇ ಹೆಚ್ಚು. ಇಂತಹವರಿಗಾಗಿಯೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾದಿದೆ. ಈ ವಿಡಿಯೋ ನೋಡಿಕೊಂಡು ಮಳೆಗಾಲದಲ್ಲಿ ನೀರು ನಿಂತಿರುವ ರಸ್ತೆಯಲ್ಲಿ ನಡೆದುಕೊಂಡು ಹೋಗಬಹುದು. ಅಷ್ಟಕ್ಕೂ ಈ ವಿಡಿಯೋ (Video) ಮುಂಬೈನಲ್ಲಿ ಮಳೆಯ ಸಮಯದಲ್ಲಿ ಜನರು ಹೇಗೆ ನಡೆಯುತ್ತಾರೆ ಎಂದು ತೋರಿಸಲಾಗಿದೆ.

ಇದನ್ನೂ ಓದಿ: Viral Video: ವಿಮಾನದಲ್ಲಿ ಎಸಿ ಸ್ಥಗಿತಗೊಂಡು ಪ್ರಯಾಕರು ಸುಸ್ತೋ ಸುಸ್ತು! ವಿಮಾನ ಬಹಿಷ್ಕಾರದ ಎಚ್ಚರಿಕೆ ನೀಡಿದ ಪ್ರಯಾಣಿಕರು

ಕುಂಡಲಿ ಭಾಗ್ಯ ನಟಿ ಶ್ರದ್ಧಾ ಆರ್ಯ (Shraddha Arya) ಅವರು ಮಳೆಗಾಲದಲ್ಲಿ ನಡೆದುಕೊಂಡು ಹೋಗುವ ಬಗ್ಗೆ ರೀಲ್ಸ್ ಒಂದನ್ನು ಮಾಡಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಅವರು “ಮಳೆಗಾಲದಲ್ಲಿ ನಾವು ಮುಂಬೈನಲ್ಲಿ ಹೇಗೆ ನಡೆಯುತ್ತೇವೆ!!!” ಎಂದು ಶೀರ್ಷಿಕೆಯನ್ನು ನೀಡಿದ್ದಾರೆ. ವಿಡಿಯೋದಲ್ಲಿ ಕಾಣುವಂತೆ, ಗಲ್ಲಿಯಂತಿರುವ ರಸ್ತೆಯಲ್ಲಿ ನೀರು ತುಂಬಿದೆ. ಈ ರಸ್ತೆಯಲ್ಲಿ ಸುಂದರ ಸೀರೆಯಲ್ಲಿ ಶ್ರದ್ದಾ ಆರ್ಯಾ ಅವರು ಛತ್ರಿ ಹೊಡಿದುಕೊಂಡು ಜಿಗಿಯುತ್ತಾ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು ಮತ್ತು ಅವರ ಜಿಗಿತಕ್ಕೆ ತಕ್ಕಂತೆ ಮ್ಯೂಸಿಕ್ ಕೂಡ ಹಾಕಲಾಗಿದೆ.

ನಟಿ ವಿಡಿಯೋವನ್ನು ಹಂಚಿಕೊಳ್ಳುವಾಗ ಶೀರ್ಷಿಕೆಯ ಜೊತೆಗೆ #MonsoonReels, #SareReels ಸೇರಿದಂತೆ ವಿವಿಧ ಹ್ಯಾಶ್‌ಟ್ಯಾಗ್‌ಗಳನ್ನು ಸೇರಿಸಿದ್ದಾರೆ. ಸುಮಾರು 18 ಗಂಟೆಗಳ ಹಿಂದೆ ಈ ಹಾಸ್ಯಾಸ್ಪದ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ವೈರಲ್ (Viral) ಪಡೆದು ಸುಮಾರು 1.9 ಲಕ್ಷ ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು 2.77 ಲಕ್ಷಕ್ಕೂ ಹೆಚ್ಚು ಲೈಕ್ಸ್​ಗಳು ಬಂದಿವೆ.

ವಿಡಿಯೋ ನೋಡಿದ ನೆಟ್ಟಿಗರು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಹೆಚ್ಚಿನವರು ಜೋರಾಗಿ ನಗುವ ಎಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ. ಕೆಲವರು, ನೀವು ಇದನ್ನು ಎಲ್ಲಿಂದ ಕಂಡುಕೊಂಡಿದ್ದೀರಿ?, ತುಂಬಾ ಕ್ಯೂಟ್ ಇದೆ, ಎಷ್ಟು ಮುದ್ದಾಗಿದೆ ಎಂಬಿತ್ಯಾದಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ವಾಹನದ ಗ್ಲಾಸ್ ಒರೆಸುವ ನೆಪದಲ್ಲಿ ಫಾಸ್ಟ್‌ಟ್ಯಾಗ್ ಸ್ಕ್ಯಾನ್ ಮಾಡಿ ಹಣ ಕದಿಯುವ ಮಕ್ಕಳು? NPCI ಏನು ಹೇಳಿದೆ ಗೊತ್ತಾ?

Published On - 12:06 pm, Sun, 26 June 22