Viral Video: ಸ್ವತಃ ತಾನೇ ಬಾಳೆಹಣ್ಣಿನ ಖಾದ್ಯ ತಯಾರಿಸಿ ರುಚಿ ಸವಿದ ಶ್ವಾನ; ವಿಡಿಯೋ ವೈರಲ್

ಮನೆಯಲ್ಲಿ ಓರ್ವರು ಶ್ವಾನ ತಿಂಡಿ ತಯಾರಿಸಿಕೊಳ್ಳಲು ಸಹಾಯ ಮಾಡುತ್ತಿದ್ದಾರೆ. ಮನೆಯ ಸದಸ್ಯರು ಸಹಾಯ ಮಾಡಿದಂತೆಯೇ ಶ್ವಾನ ತಿಂಡಿ ತಯಾರಿಸಿಕೊಂಡಿದೆ. ಈ ವಿಡಿಯೋ ನೆಟ್ಟಿಗರಿಗೆ ಬಲು ಇಷ್ಟವಾಗಿದೆ.

Viral Video: ಸ್ವತಃ ತಾನೇ ಬಾಳೆಹಣ್ಣಿನ ಖಾದ್ಯ ತಯಾರಿಸಿ ರುಚಿ ಸವಿದ ಶ್ವಾನ; ವಿಡಿಯೋ ವೈರಲ್
ಬಾಳೆಹಣ್ಣಿನಿಂದ ಖಾದ್ಯ ತಯಾರಿಸಿಕೊಂಡು ರುಚಿ ಸವಿದ ಶ್ವಾನಕ್ಕೆ ನೆಟ್ಟಿಗರಿಂದ ಮೆಚ್ಚುಗೆ
Updated By: shruti hegde

Updated on: Oct 05, 2021 | 10:30 AM

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ಆಶ್ಚರ್ಯ ತರುವ ದೃಶ್ಯಗಳು ಹರಿದಾಡುತ್ತವೆ. ಇದೀಗ ವೈರಲ್​ ಆದ ವಿಡಿಯೋದಲ್ಲಿ ಶ್ವಾನ ತನಗೆ ಬೇಕಾದ ಖಾದ್ಯವನ್ನು ತಾನೇ ತಯಾರಿಸಿಕೊಂಡು ರುಚಿ ಸವಿಯುತ್ತಿದೆ. ಮನೆಯ ಅಡುಗೆ ಮನೆಯನ್ನು ಪ್ರವೇಶಿಸಿದ ಶ್ವಾನ ಸ್ವತಃ ತಾನೇ ಬಾಳೆಹಣ್ಣಿನ ಕೇಕ್​ ತಯಾರಿಸಿಕೊಂಡಿದೆ. ಆಶ್ಚರ್ಯ ಮೂಡಿಸಿರುವ ವಿಡಿಯೋ ಇದೀಗ ಫುಲ್​ ವೈರಲ್​ ಆಗಿದೆ. 

ಮನೆಯಲ್ಲಿ ಓರ್ವರು ಶ್ವಾನ ತಿಂಡಿ ತಯಾರಿಸಿಕೊಳ್ಳಲು ಸಹಾಯ ಮಾಡುತ್ತಿದ್ದಾರೆ. ಮನೆಯ ಸದಸ್ಯರು ಸಹಾಯ ಮಾಡಿದಂತೆಯೇ ಶ್ವಾನ ತಿಂಡಿ ತಯಾರಿಸಿಕೊಂಡಿದೆ. ಈ ವಿಡಿಯೋ ನೆಟ್ಟಿಗರಿಗೆ ಬಲು ಇಷ್ಟವಾಗಿದ್ದು, ಮೆಚ್ಚುಗೆ ಸೂಚಿಸಿದ್ದಾರೆ. ಸರಿಯಾದ ಅಳತೆಯಲ್ಲಿ ಬಾಳೆ ಹಣ್ಣು, ನೀರು ಹೀಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ಬೌಲ್​ನಲ್ಲಿ ಹಾಕಿ ತಿಂಡಿ ತಯಾರಿಸಿಕೊಂಡು ಸವಿಯುತ್ತಿರುವ ದೃಶ್ಯ ಇದೀಗ ಫುಲ್ ವೈರಲ್ ಆಗಿದೆ.

ಬಾಣಸಿಗನಾಗಿ ಅಡುಗೆ ಮನೆಗೆ ಹೋಗಿರುವ ಶ್ವಾನ ತನಗಿಷ್ಟದ ಬಾಳೆಹಣ್ಣಿನ ಕೇಕ್ ತಯಾರಿಸಿಕೊಂಡಿದೆ. ಇದೀಗ ಶ್ವಾನ ಅಡುಗೆ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಗಿನಿಂದ 5000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಮಾಸ್ಟರ್ ಶ್ವಾನವಿದು ಎಂದು ಓರ್ವರು ಹೇಳಿದ್ದಾರೆ. ಇನ್ನೋರ್ವರು ವಿಡಿಯೋ ಅದ್ಭುತವಾಗಿದೆ ಎಂದು ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಬೈಕ್​ನಲ್ಲಿ ಪುಟ್ಟ ಬಾಲಕನ ಸಖತ್ ಸ್ಟಂಟ್; ವಿಡಿಯೊ ನೋಡಿ

Viral Video: ಆನೆಗಳೊಂದಿಗೆ ಹುಡುಗಿಯ ಸಕತ್ ಡಾನ್ಸ್; ವೈರಲ್​ ಆಯ್ತು ವಿಡಿಯೊ

Published On - 10:29 am, Tue, 5 October 21