ನಿನ್ನನ್ನು ಬಿಟ್ಟುಕೊಡಲೊಲ್ಲೇ ಅಕ್ಕಾ… ವೈರಲ್ ಆಗುತ್ತಿರುವ ನಾಯಿಯ ಈ ವಿಡಿಯೋ

Dog Love : ನಾನಂತೂ ನನ್ನ ನಾಯಿಯನ್ನು ಗಂಡನಮನೆಗೆ ಕರೆದುಕೊಂಡು ಹೋಗುತ್ತೇನೆ. ನೀವು ನಿಮ್ಮ ಗಂಡನಮನೆಗೆ ಇದನ್ನು ಕರೆದುಕೊಂಡು ಹೋಗಬೇಕು. ನಾನಂತೂ ಕರೆದುಕೊಂಡೇ ಬಂದೆ. ನೆಟ್ಟಿಗರ ನಾನಾ ಅಭಿಪ್ರಾಯ...

ನಿನ್ನನ್ನು ಬಿಟ್ಟುಕೊಡಲೊಲ್ಲೇ ಅಕ್ಕಾ... ವೈರಲ್ ಆಗುತ್ತಿರುವ ನಾಯಿಯ ಈ ವಿಡಿಯೋ
ನಿನ್ನ ಬಿಟ್ಟುಕೊಡಲೊಲ್ಲೆ

Updated on: Feb 03, 2023 | 12:44 PM

Viral Video : ನಂಬಿಕೆಗೆ ವಿಶ್ವಾಸ ನಿಷ್ಠೆಯನ್ನೇ ಮೈವೆತ್ತ ಈ ನಾಯಿಗಳು ಮನುಷ್ಯಕುಲದ ಅವಿಭಾಜ್ಯ ಅಂಗ. ಕರುಣೆ, ಪ್ರೀತಿಯಿಂದ ಕೂಡಿದ ಒಂದು ನೋಟ ಒಂದು ಸ್ಪರ್ಶ ಒಂದು ಮಾತು ಸಾಕು ಈ ಬಾಂಧವ್ಯದ ಬುನಾದಿಗೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಮದುಮಗಳು ಗಂಡನಮನೆಗೆ ಹೋಗುವ ಸಂದರ್ಭದಲ್ಲಿ ಭಾವುಕಳಾಗಿದ್ದಾಳೆ. ಸಾಕುನಾಯಿ ಕೂಡ ಅವಳನ್ನು ಬಿಟ್ಟುಕೊಡಲು ತಯಾರಿಲ್ಲ.

ಜನವರಿ 6 ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಪ್ರಾಣಿಗಳಿಗೂ ಎಲ್ಲವೂ ಅರ್ಥವಾಗುತ್ತದೆ ನೋಡಿ ಎಂದು ನೆಟ್ಟಿಗರು ಮಾತನಾಡಿಕೊಂಡಿದ್ದಾರೆ. ಈತನಕ ಈ ವಿಡಿಯೋ 5.4 ಲಕ್ಷ ಜನರನ್ನು ತಲುಪಿದೆ. 33,000 ಜನರು ಇಷ್ಟಪಟ್ಟಿದ್ದಾರೆ. ನಿಮ್ಮೊಂದಿಗೆ ಅವನನ್ನೂ ಕರೆದುಕೊಂಡು ಹೋಗಿ ಎಂದು ಅನೇಕರು ಹೇಳಿದ್ದಾರೆ. ಮನುಷ್ಯರಿಗಿಂತ ನಾಯಿಗಳೇ ಉತ್ತಮ ಸ್ನೇಹಿತರು ಎಂದಿದ್ದಾರೆ ಹಲವರು.

ಇದನ್ನೂ ಓದಿ : ಹುಲಿ ಬಂದೀತಮ್ಮಾ; ಚಳಿಗೆ ಚಹಾ ಬೇಕಾಯ್ತೇನೋ ತಮ್ಮಾ

ಇದನ್ನು ನೋಡಿ ನನಗೆ ಅಳು ಬರುತ್ತಿದೆ. ನಾನು ಕೂಡ ನನ್ನ ತವರಿನಲ್ಲಿ ಹೀಗೆಯೇ ನಾಯಿಯನ್ನು ಬಿಟ್ಟು ಬಂದುಬಿಟ್ಟೆ ಎಂದಿದ್ದಾರೆ ಒಬ್ಬರು. ನಾನು ನನ್ನೊಂದಿಗೆ ಗಂಡನಮನೆಗೂ ನಾಯಿಯನ್ನು ಕರೆದುಕೊಂಡು ಬಂದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಇಷ್ಟೊಂದು ಪ್ರೀತಿಸುವ ನಾಯಿಯನ್ನು ನೀವು ಬಿಟ್ಟು ಹೋಗುವುದು ಸರಿ ಅಲ್ಲ ಎಂದು ಇನ್ನೂ ಒಬ್ಬರು ಹೇಳಿದ್ದಾರೆ.

ಇದನ್ನೂ ಓದಿ : ನಾಯಿಮರಿ ತನ್ನ ಜನನ ಪ್ರಮಾಣ ಪತ್ರಕ್ಕೆ ಕಾಲ್ಬೆರಳು ಒತ್ತಿ ಸಹಿ ಮಾಡಿರುವ ವಿಡಿಯೋ ವೈರಲ್

ಹೆಸರಿಗಷ್ಟೇ ನಾಯಿ, ಮನುಷ್ಯರಿಗಿಂತ ಆಪ್ತತೆ ಇವುಗಳಲ್ಲಿ ಇರುತ್ತದೆ. ನಿಜಕ್ಕೂ ಈಕೆ ಇದನ್ನು ಗಂಡನಮನೆಗೆ ಕರೆದೊಯ್ಯುವುದು ಒಳ್ಳೆಯದು ಎಂದಿದ್ದಾರೆ ಇನ್ನೂ ಕೆಲವರು. ಈ ದೃಶ್ಯ ನೋಡಿ ಅಳು ಬರುತ್ತಿದೆ. ನಾನಂತೂ ಗಂಡನಮನೆಗೆ ಹೋಗುವಾಗ ನನ್ನ ನಾಯಿಯನ್ನೂ ಕರೆದುಕೊಂಡು ಹೋಗುತ್ತೇನೆ ಎಂದು ಇನ್ನೂ ಒಬ್ಬರು ಹೇಳಿದ್ದಾರೆ.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:43 pm, Fri, 3 February 23